ಸರಳತೆ ಬಗ್ಗೆ ದೊಡ್ಮನೆ ನೋಡಿ ಕಲಿತಿದ್ದೇನೆ: ಜನಾರ್ದನ ರೆಡ್ಡಿ ಪುತ್ರ ಕಿರೀಟಿ
ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅವರು ‘ಜೂನಿಯರ್’ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ಜುಲೈ 18ರಂದು ಈ ಸಿನಿಮಾದ ಬಿಡುಗಡೆ. ಈ ಚಿತ್ರದಲ್ಲಿ ಜೆನಿಲಿಯಾ ದೇಶಮುಖ್, ರವಿಚಂದ್ರನ್ ಮುಂತಾದವರು ನಟಿಸಿದ್ದಾರೆ. ಟಿವಿ9 ಸಂದರ್ಶನದಲ್ಲಿ ಮಾತನಾಡಿದ ಕಿರೀಟಿ ಅವರು ಸರಳತೆ ಬಗ್ಗೆ ಮಾತನಾಡಿದರು.
ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಅವರು ‘ಜೂನಿಯರ್’ (Junior) ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ಜುಲೈ 18ರಂದು ಈ ಸಿನಿಮಾದ ಬಿಡುಗಡೆ. ಈ ಚಿತ್ರದಲ್ಲಿ ಜೆನಿಲಿಯಾ ದೇಶಮುಖ್, ರವಿಚಂದ್ರನ್ ಮುಂತಾದವರು ನಟಿಸಿದ್ದಾರೆ. ಟಿವಿ9 ಸಂದರ್ಶನದಲ್ಲಿ ಮಾತನಾಡಿದ ಕಿರೀಟಿ ಅವರು ಸರಳತೆ ಬಗ್ಗೆ ಮಾತನಾಡಿದರು. ‘ಸರಳತೆ ಏನು ಎಂಬುದನ್ನು ನಾನು ದೊಡ್ಮನೆ ನೋಡಿ ಕಲಿತಿದ್ದೇನೆ. ವಿನಯದಿಂದ ನಡೆದುಕೊಂಡರೆ ಜನರು ಒಳ್ಳೆಯ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದು ಕಿರೀಟಿ (Kireeti Reddy) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.