ಬೆಂಗಳೂರು: ಆಟೋ ಡ್ರೈವರ್ ಮೇಲೆ ಬಸ್ ಹರಿಸಲು ಮುಂದಾದ ಬಿಎಂಟಿಸಿ ಚಾಲಕ, ವಿಡಿಯೋ ವೈರಲ್
ಆಟೋ ಚಾಲಕ ಹಾಗೂ ಬಿಎಂಟಿಸಿ ಬಸ್ ಚಾಲಕನ ನಡುವೆ ಜಳ ನಡೆದು ಕೊನೆಗೆ ಬಿಎಂಟಿಸಿ ಬಸ್ ಚಾಲಕ ಆಟೋ ಚಾಲಕನ ಮೇಲೆಯೇ ಬಸ್ ಹರಿಸಲು ಮುಂದಾದ ಘಟನೆ ಬೆಂಗಳೂರಿನ ಬ್ರಿಗೇಡ್ ರೋಡ್ ಬಳಿ ಗುರುವಾರ ನಡೆದಿದೆ. ಘಟನೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿಸೆರೆಯಾಗಿದ್ದು, ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
ಬೆಂಗಳೂರು, ಜುಲೈ 18: ಬೆಂಗಳೂರು ನಗರದಲ್ಲಿ ಇತ್ತೀಚೆಗೆ ರೋಡ್ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಟೋ ಚಾಲಕನೊಬ್ಬನ ಮೇಲೆಯೇ ಬಸ್ ಹರಿಸಲು ಬಿಎಂಟಿಸಿ ಚಾಲಕ ಮುಂದಾದ ಘಟನೆ ನಡೆದಿದೆ. ಅಶೋಕನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರೋಡ್ ಬಳಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಆಟೋ ಚಾಲಕ ಮತ್ತು ಬಿಎಂಟಿಸಿ ಬಸ್ ಚಾಲಕನ ನಡುವೆ ಗಲಾಟೆಯಾಗಿದೆ. ನಂತರ ಆಟೋ ಚಾಲಕ ಬಿಎಂಟಿಸಿ ಬಸ್‌ಗೆ ಅಡ್ಡಲಾಗಿ ನಿಂತಿದ್ದಾನೆ. ಈ ವೇಳೆ, ಆತನ ಮೇಲೆ ಬಸ್ ಹರಿಸಲು ಬಿಎಂಟಿಸಿ ಚಾಲಕ ಮುಂದಾಗಿದ್ದಾನೆ. ಬಸ್ ಸುಮಾರು 30 ಮೀಟರ್‌ನಷ್ಟು ದೂರ ಆಟೋ ಚಾಲಕನನ್ನು ತಳ್ಳಿಕೊಂಡು ಹೋಗಿದೆ. ಬಸ್ ಹಾಗೂ ಆಟೋ ಚಾಲಕನ ಗಲಾಟೆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jul 18, 2025 06:56 AM
Latest Videos

ಪಂಜಾಬ್ಗೆ ಕೂಡಲೆ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ;ರಾಹುಲ್ ಗಾಂಧಿ ಒತ್ತಾಯ

‘ಕಾಂತಾರ: ಚಾಪ್ಟರ್ 1’ ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಪ್ರಗತಿ ಶೆಟ್ಟಿ

ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್

ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
