ಆಷಾಢ ಮಾಸದ ಕೊನೆ ಶುಕ್ರವಾರ, ಬಗೆಬಗೆಯ ಅಲಂಕಾರಗಳಿಂದ ಕಂಗೊಳಿಸುತ್ತಿರುವ ಚಾಮುಂಡಿ ಮಾತೆ ಮತ್ತು ದೇವಸ್ಥಾನ
ಉತ್ಸವಮೂರ್ತಿಗೆ ಮಾಡಿರುವ ಸಿಂಹವಾಹಿನಿ ಅಲಂಕಾರವನ್ನು ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ದೇವಸ್ಥಾನದ ವ್ಯವಸ್ಥಾಪಕ ಮತ್ತು ಆಡಳಿತ ಮಂಡಳಿಯು ಸ್ಥಳೀಯ ಪೊಲೀಸರ ನೆರವಿನಿಂದ ತಾಯಿಯ ದರ್ಶನಕ್ಕೆ ಭಕ್ತರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿರೋದು ಕಾಣುತ್ತಿದೆ. ಕಡೆಯ ಶುಕ್ರವಾರದ ಹಿನ್ನೆಲೆಯಲ್ಲಿ ಅಮ್ಮನ ದರ್ಶನಕ್ಕೆ ಬರುವವರ ಸಂಖ್ಯೆ ಅಪರಿಮಿತವಾಗಿರಲಿದೆ.
ಮೈಸೂರು, ಜುಲೈ 18: ಇವತ್ತು ಆಷಾಢ ಮಾಸದ ನಾಲ್ಕನೇ ಮತ್ತು ಕೊನೆಯ ಶುಕ್ರವಾರ (last Friday). ಚಾಮುಂಡಿ ಬೆಟ್ಟದಲ್ಲಿರುವ ನಾಡದೇವತೆ ಚಾಮುಂಡೇಶ್ವರಿ ತಾಯಿ ಸರ್ವಾಲಂಕಾರ ಭೂಷಿತೆ. ದೇವಸ್ಥಾನವಂತೂ ಬಗೆ ಬಗೆಯ ಹೂಗಳಿಂದ ಕಂಗೊಳಿಸುತ್ತಿದೆ. ದೇವಾಲಯದ ಅಲಂಕಾರ ನೋಡಲು ಎರಡು ಕಣ್ಣು ಸಾಲದು. ತಾಯಿ ಚಾಮುಂಡಿಗೂ ಹಲವಾರು ಬಗೆಯ ಹೂಗಳು ಮತ್ತು ನವಿಲಿನ ಹಾರದ ಅಲಂಕಾರ ಮಾಡಲಾಗಿದೆ. ರಾಜ್ಯದ ನಾನಾಭಾಗಗಳಿಂದ ಆಗಮಿಸಿರುವ ಭಕ್ತಾದಿಗಳು ಬೆಳಗಿನ ಜಾವ 4.30ರಿಂದ ಸರತಿ ಸಾಲಲ್ಲಿ ನಿಂತು ಅಮ್ಮನ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಚಾಮುಂಡಿ ದೇವಿಗೆ ಇವತ್ತು ವಿಶೇಷ ಪೂಜೆಗಳು ನಡೆಯುತ್ತಿವೆ.
ಇದನ್ನೂ ಓದಿ: ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಡ್ರೈಫ್ರೂಟ್ಸ್ ಮತ್ತು ಬಾದಾಮಿ ಹಾಲಿನ ವ್ಯವಸ್ಥೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos