ನಾಡದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಡ್ರೈಫ್ರೂಟ್ಸ್ ಮತ್ತು ಬಾದಾಮಿ ಹಾಲಿನ ವ್ಯವಸ್ಥೆ
ಭಕ್ತರು ಇನ್ನೂ ಹಲವಾರು ಕುಂದುಕೊರತೆಗಳನ್ನು ಟಿವಿ9 ಗಮನಕ್ಕೆ ತಂದಿದ್ದರು. ಹಣ ತೆತ್ತು ಪಾಸ್ ಪಡೆದವರು ಮತ್ತು ಪಾಸ್ ಪಡೆಯದವರನ್ನು ಒಂದೇ ಸಾಲಲ್ಲಿ ಕಳಿಸಲಾಗುತ್ತಿದೆ ಎಂಬ ದೂರಿತ್ತು. ಅದಲ್ಲದೆ ವಿಐಪಿಗಳ ಜೊತೆ ಅವರ ಬೆಂಬಲಿಗರು ಮತ್ತು ಹಿಂಬಾಲಕರು ದೇವಸ್ಥಾನದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ, ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಭಕ್ತರು ಹೇಳಿದ್ದರು.
ಮೈಸೂರು, ಜುಲೈ 4: ನಿಮಗೆ ನೆನಪಿರಬಹುದು, ಕಳೆದ ಶುಕ್ರವಾರ ಅಂದರೆ ಆಷಾಢಮಾಸದ ಮೊದಲ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಭಕ್ತರು ಜಾತ್ರೆಯಂತೆ ಸೇರಿದ್ದರು ಮತ್ತು ದರ್ಶನಕ್ಕೆ ಮಾಡಿರುವ ವ್ಯವಸ್ಥೆ ಬಗ್ಗೆ ಕಿಡಿಕಾರುತ್ತಿದ್ದರು. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಡ್ರೈಫ್ರೂಟ್ಸ್ ಮತ್ತು ಬಾದಾಮಿ ಹಾಲು ಒದಗಿಸುವ ಏರ್ಪಾಟು ಮಾಡೋದಾಗಿ ಇಲ್ಲಿನ ವ್ಯವಸ್ಥಾಪಕ ಮಂಡಳಿ ಹೇಳಿತ್ತಂತೆ. ಆದರೆ, ಭಕ್ತರು ಅವಿಗಳನ್ನು ನೀಡುತ್ತಿಲ್ಲ ಎಂದು ರೋಷದಿಂದ ಹೇಳಿದ್ದನ್ನು ನಾವು ವರದಿ ಮಾಡಿದ್ದೆವು. ಎರಡನೇ ಶುಕ್ರವಾರವಾಗಿರುವ ಇಂದು ಭಕ್ತರ ಸಂಖ್ಯೆ ಹೆಚ್ಚಿಲ್ಲ. ಡ್ರೈಫ್ರೂಟ್ಸ್ ಮತ್ತು ಬಾದಾಮಿ ಹಾಲನ್ನು ಭಕ್ತರಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಗುಡ್ ನ್ಯೂಸ್: ಸುಗಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ