ಚಾಮುಂಡಿ ಬೆಟ್ಟದಲ್ಲಿ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ: ಪೊಲೀಸ್ ಕಮೀಷನರ್
ಗಣ್ಯರ ಆಗಮನದಿಂದಲೇ ನೂಕುನುಗ್ಗಲು ಮತ್ತು ಗಲಾಟೆ ಸಂಭವಿಸುವುದರಿಂದ ಅವರಿಗೆ ಬೆಳಗ್ಗೆ 5ರಿಂದ 10ರವರೆಗೆ ಮಾತ್ರ ದೇವಿಯ ದರ್ಶನಕ್ಕೆ ಬರುವಂತೆ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಹಾಗೆಯೇ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಬೇರೆ ಮಂತ್ರಿಗಳು ತಮ್ಮ ಬೆಂಬಲಿಗರಿಗೆ ಪಾಸ್ ನೀಡದಂತೆ ವಿನಂತಿಸಿಕೊಂಡಿದ್ದೇವೆ, ಗಣ್ಯರ ಜೊತೆ ಅವರ ಹಿಂಬಾಲಕರು, ಬೆಂಬಲಿಗರು ಆಗಮಿಸುವುದನ್ನು ತಡೆಯಾಲಾಗುವುದು ಎಂದು ಕಮೀಷನರ್ ಹೇಳಿದರು.
ಮೈಸೂರು, ಜೂನ್ 27: ಇಂದು ಆಷಾಢಮಾಸದ ಮೊದಲ ಶುಕ್ರವಾರ (first Friday), ಹಾಗಾಗಿ ನಗರದ ಜಗತ್ಪ್ರಸಿದ್ಧ ಚಾಮುಂಡಿದೇವಿ ದೇವಸ್ಥಾನದ ಅವರಣದಲ್ಲಿ ಭಕ್ತರು ಜಾತ್ರೆಯಂತೆ ನೆರೆದಿದ್ದಾರೆ. ಬೆಂಗಳೂರು ಕಾಲ್ತುಳಿತ ಪ್ರಕರಣ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮೇಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಾಟು ಮಾಡಲಾಗಿದೆ ಮತ್ತು ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ನಮ್ಮ ಪ್ರತಿನಿಧಿಗೆ ವಿವರಗಳನ್ನು ನೀಡಿದ್ದಾರೆ. ಯಾವುದೇ ಅಹಿತಕರ ಘಟನೆ ಜರುಗದಂತೆ ನಿಗಾ ವಹಿಸಲು ಇಬ್ಬರು ಡಿಸಿಪಿ, ಒಬ್ಬ ಹೆಚ್ಚುವರಿ ಎಸ್ಪಿ, 1,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 100 ಹೋಮ್ ಗಾರ್ಡ್ ಮತ್ತು ಮಹಿಳಾ ತಂಡವೂ ಸೇರಿದಂತೆ 4 ಕೆಎಸ್ಅರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಸೀಮಾ ಲಾಟ್ಕರ್ ಹೇಳಿದರು.
ಇದನ್ನೂ ಓದಿ: Aashada Month: ಜೂನ್ 26ರಿಂದ ಆಷಾಢ ಮಾಸ ಆರಂಭ, ಈ ಕೆಲಸಗಳನ್ನು ತಪ್ಪಾಗಿ ಕೂಡ ಮಾಡಬೇಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
