AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ಆ ದಿನ ಆಗಿದ್ದನ್ನು ವಿವರಿಸಿದ ಮಡೆನೂರು ಮನು

ಶಿವರಾಜ್​ಕುಮಾರ್ ನಿಜಕ್ಕೂ ಬಾಗಿಲು ತೆರೆದಿಲ್ಲವೇ? ಆ ದಿನ ಆಗಿದ್ದನ್ನು ವಿವರಿಸಿದ ಮಡೆನೂರು ಮನು

ರಾಜೇಶ್ ದುಗ್ಗುಮನೆ
|

Updated on: Jun 27, 2025 | 11:09 AM

Share

ಮಡೆನೂರು ಮನು ಅವರು ಈಗ ಹೋದಲ್ಲೆಲ್ಲ ವಿವಾದ ಮಾಡಿಕೊಳ್ಳುತ್ತಿದ್ದಾರೆ. ಅವರು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಈಗ ಅವರು ಒಂದು ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆಗಿರೋದು ಹಳೆಯ ವಿಡಿಯೋ ಎಂದು ಹೇಳಿದ್ದಾರೆ. ಏನಿದು ವಿವಾದ? ಆ ಬಗ್ಗೆ ಇಲ್ಲಿದೆ ವಿವರ.

ಮಡೆನೂರು ಮನು (Madenuru Manu) ಅವರ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಶಿವರಾಜ್​ಕುಮಾರ್ ಮನೆ ಎದುರು ಅವರು ಕಾಯುತ್ತಿರುವುದು ಕಂಡು ಬಂದಿತ್ತು. ಆದರೆ, ಶಿವಣ್ಣ ಬಾಗಿಲು ತೆರೆದಿರಲಿಲ್ಲ ಎಂದು ವರದಿ ಆಗಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ. ಈ ಬಗ್ಗೆ ಮಾತನಾಡಿದ್ದು, ಇದು ಹಳೆಯ ವಿಡಿಯೋ ಎಂದಿದ್ದಾರೆ. ಶಿವರಾಜ್​ಕುಮಾರ್ ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ಮನು ಇಲ್ಲಿಗೆ ಹೋಗಿದ್ದರಂತೆ. ಶಿವಣ್ಣ ಇಲ್ಲದ ವಿಚಾರ ಗೊತ್ತಾದ ಬಳಿಕ ಅವರು ವಾಪಸ್ ಬಂದಿದ್ದಾರೆ. ಹಳೆಯ ವಿಡಿಯೋ ವೈರಲ್ ಮಾಡಿ ಅಪಪ್ರಚಾರ ಮಾಡಬೇಡಿ ಎಂದು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.