AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಸ್ಟ್ ರೂಮ್​ನಲ್ಲಿ ವಿದೇಶಿ ಯುವತಿಯರು, ಮದ್ಯ ರಾಶಿ! ಮಂಗಳೂರು ನಟೋರಿಯಸ್‌ ವಂಚಕನ ರಹಸ್ಯ ಕೋಣೆ ಹೇಗಿತ್ತು ನೋಡಿ

ಗೆಸ್ಟ್ ರೂಮ್​ನಲ್ಲಿ ವಿದೇಶಿ ಯುವತಿಯರು, ಮದ್ಯ ರಾಶಿ! ಮಂಗಳೂರು ನಟೋರಿಯಸ್‌ ವಂಚಕನ ರಹಸ್ಯ ಕೋಣೆ ಹೇಗಿತ್ತು ನೋಡಿ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jul 18, 2025 | 11:51 AM

Share

200 ಕೋಟಿ ರೂ. ವಂಚಿಸಿದ ಕೇಸ್​ನಲ್ಲಿ ಮಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿರುವ ನಟೋರಿಯಸ್‌ ವಂಚಕ ರೋಹನ್ ಸಲ್ಡಾನಾ ಐಷಾರಾಮಿ ಬಂಗಲೆ ಹೇಗಿದೆ? ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಯಲ್ಲಿ ಏನೇನಿದೆ? ವಿದೇಶಿ ಯುವತಿಯರ ಜತೆ ಆತನ ಐಷಾರಾಮಿ ಬದುಕು ಹೇಗಿತ್ತು? ಎಲ್ಲ ವಿವರಗಳುಳ್ಳ ವಿಡಿಯೋ ಇಲ್ಲಿದೆ.

ಮಂಗಳೂರು, ಜುಲೈ 18: ದೇಶದ ಐಷಾರಾಮಿ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಸುಮಾರು 200 ಕೋಟಿ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಮಂಗಳೂರಿನ ರೋಹನ್ ಸಲ್ಡಾನಾ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇದರ ಬೆನ್ನಲ್ಲೇ ಆತ ವಾಸವಿದ್ದ ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಯ ರಹಸ್ಯಗಳು ಹೊರಬಿದ್ದಿವೆ. ಆತ ಈ ಬಂಗಲೆಗೆ ಅನೇಕ ವಿದೇಶಿ ಯವತಿರಯನ್ನು ಕರೆಸಿಕೊಂಡು ಪಾರ್ಟಿ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಗೆಸ್ಟ್ ರೂಮ್​ನಲ್ಲಿ ವಿದೇಶಿ ಯುವತಿಯರನ್ನು ಇರಿಸಿಕೊಳ್ಳುತ್ತಿದ್ದ. ಇಡೀ ಕೋಣೆಯಲ್ಲಿ, ಫ್ರಿಡ್ಜ್​ನಲ್ಲಿ ವಿದೇಶಿ ಮದ್ಯದ ಬಾಟಲ್​​ಗಳ ರಾಶಿಯೇ ಪತ್ತೆಯಾಗಿವೆ. ಅಲ್ಲದೆ, ಅಡಗಿಕೊಳ್ಳಲು ರಹಸ್ಯ ಕೋಣೆಯೊಂದೂ ಅಲ್ಲಿತ್ತು. ರೋಹನ್ ಸಲ್ಡಾನಾ ಐಷಾರಾಮಿ ಬಂಗಲೆ, ರಹಸ್ಯ ಕೋಣೆಯ ಇಂಚಿಂಚೂ ಮಾಹಿತಿ ವಿಡಿಯೋ ಸಹಿತ ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಸಾಲ ಕೊಡುವುದಾಗಿ ಕೋಟ್ಯಂತರ ರೂ ವಂಚನೆ: ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿರುವಾಗಲೇ ಬಂಧನ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Pruthviraj
Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More