AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಕೊಡುವುದಾಗಿ ಕೋಟ್ಯಂತರ ರೂ ವಂಚನೆ: ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿರುವಾಗಲೇ ಬಂಧನ

ಕೋಟ್ಯಂತರ ರೂ ಸಾಲ ಕೊಡಿಸುವ ಆಮಿಷ ಒಡ್ಡಿ ಶ್ರೀಮಂತ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ 200 ಕೋಟಿಗೂ ಅಧಿಕ ವಂಚಿಸಿದ ನಟೋರಿಯಸ್ ವಂಚಕನನ್ನು ಬಂಧಿಸಿದ್ದಾರೆ. ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿರುವಾಗಲೇ ಮಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯ ಐಷಾರಾಮಿ ಬಂಗಲೆಯಲ್ಲಿ ಹೈಡ್ ಔಟ್ ರೂಮ್​ ಇರುವುದು ಕೂಡ ಪತ್ತೆ ಆಗಿದೆ.

ಸಾಲ ಕೊಡುವುದಾಗಿ ಕೋಟ್ಯಂತರ ರೂ ವಂಚನೆ: ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿರುವಾಗಲೇ ಬಂಧನ
ಮಂಗಳೂರು ಪೊಲೀಸರಿಂದ ಆರೋಪಿಯ ಬಂಧನ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 18, 2025 | 11:40 AM

Share

ಮಂಗಳೂರು, ಜುಲೈ 18: ಸಾಲ ಕೊಡುವುದಾಗಿ ಕೋಟ್ಯಂತರ ರೂ ಹಣ ಪಡೆದು ಉದ್ಯಮಿಗಳಿಗೆ ವಂಚಿಸಿದ (Fraud) ನಟೋರಿಯಸ್​ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ (arrest). ರೋಹನ್ ಸಲ್ಡಾನಾ (45) ಬಂಧಿತ ಆರೋಪಿ. ಗುರುವಾರ ರಾತ್ರಿ ಜಪ್ಪಿನಮೊಗರುವಿನ‌ಲ್ಲಿರುವ ತನ್ನ ಐಷರಾಮಿ ಬಂಗಲೆಯಲ್ಲಿ ಮಲೇಶಿಯಾ ಯುವತಿರ ಜೊತೆ ಪಾರ್ಟಿ ಮಾಡುತ್ತಿರುವಾಗಲೇ ಎಂಟ್ರಿ ಕೊಟ್ಟ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ದೇಶದ ಐಷಾರಾಮಿ ವ್ಯಕ್ತಿಗಳು ಮತ್ತು ಉದ್ಯಮಿಗಳೇ ಈತನ ಟಾರ್ಗೆಟ್. ಸುಮಾರು ವರ್ಷಗಳಿಂದ ಇದನ್ನೇ ಕಾಯಕ ಮಾಡಿಕೊಂಡಿರುವ ರೋಹನ್​ 200 ಕೋಟಿಗೂ ಅಧಿಕ ಹಣ ವಂಚಿಸಿದ್ದಾನೆ. ಸದ್ಯ ಉದ್ಯಮಿಯೊಬ್ಬರು ನೀಡಿದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.

ಶ್ರೀಮಂತ ವ್ಯಕ್ತಿಗಳಿಗೆ ಗಾಳ

ಆರೋಪಿ ರೋಹನ್ ಸಲ್ಡಾನಾ, ಭೂ ವ್ಯವಹಾರ ಸೇರಿ ಉದ್ಯಮಿಯೆಂದು ಬಿಂಬಿಸಿಕೊಂಡು ಶ್ರೀಮಂತರ ವಿಶ್ವಾಸ ಗಳಿಸುತ್ತಿದ್ದ. ಹೊರರಾಜ್ಯ, ಹೊರ ಜಿಲ್ಲೆಯ ಶ್ರೀಮಂತ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದ. ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಮಾಡುತ್ತಿದ್ದ. ಈತನ ಬಂಗಲೆ, ಜೀವನಶೈಲಿಗೆ ಉದ್ಯಮಿಗಳು ಮಾರುಹೋಗಿದ್ದರು. ಬಣ್ಣದ ಮಾತಿಗೆ ಮರುಳಾಗಿ ಹಿಂದು-ಮುಂದು ನೋಡದೆ ಕೋಟ್ಯಂತರ ರೂ ಹಣ ನೀಡಿದ್ದಾರೆ.

ಇದನ್ನೂ ಓದಿ
Image
ಶುಶ್ರುತಿ ಸಹಕಾರ ಬ್ಯಾಂಕ್ ವಂಚನೆ: ಇಡಿ ತನಿಖೆ ವೇಳೆ ಆಘಾತಕಾರಿ ಅಂಶ ಬಯಲಿಗೆ
Image
ಶಾಸಕಿ ಕಚೇರಿಯನ್ನೇ ಬಿಡದ ಕಳ್ಳರು: ಹಣ, ಚಿನ್ನ-ಬೆಳ್ಳಿ ಆಭರಣ ದೋಚಿ ಪರಾರಿ
Image
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
Image
ಡ್ರಗ್ಸ್ ಸಾಗಾಟ ಆರೋಪ: ಕಲಬುರಗಿ ಕಾಂಗ್ರೆಸ್ ಮುಖಂಡ ಮಹಾರಾಷ್ಟ್ರದಲ್ಲಿ ಬಂಧನ

ಇದನ್ನೂ ಓದಿ: ಶುಶ್ರುತಿ ಸಹಕಾರ ಸೌಹಾರ್ದ ಬ್ಯಾಂಕ್ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಇಡಿ ಎಂಟ್ರಿ: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಯಲಿಗೆ

ಮೊದಲ ಸುತ್ತಿನ ಮಾತುಕತೆ ಬಳಿಕ ಉದ್ಯಮಿಗಳಿಗೆ ತನ್ನ ವಂಚನೆ ಜಾಲದ ಖೆಡ್ಡಾಕ್ಕೆ ಬೀಳಿಸುತ್ತಿದ್ದ ರೋಹನ್, 50 ಕೋಟಿಯಿಂದ 100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದ. ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ  ಉದ್ಯಮಿಗಳಿಗೆ ನಾನಾ ನೆಪ ಹೇಳಿ ಎಸ್ಕೇಪ್ ಆಗುತ್ತಿದ್ದ. ಹೀಗೆ ಕೇವಲ 3 ತಿಂಗಳಲ್ಲೇ 45 ಕೋಟಿ ರೂ ವ್ಯವಹಾರ ನಡೆಸಿರುವುದು ಪತ್ತೆ ಆಗಿದೆ.

ಹೈಡ್ ಔಟ್ ರೂಮ್

ಆರೋಪಿ ರೋಹನ್ ಸಲ್ಡಾನಾನ ಐಷಾರಾಮಿ ಬೆಡ್ ರೂಮ್​​ ಬಳಿ ಹೈಡ್ ಔಟ್ ರೂಮ್ ಇದೆ. ಬೆಡ್ ರೂಮ್​​ ಕಬೋರ್ಡ್ ಒಳಗೆ ಒಂದು ಹಿಡನ್ ಡೋರ್​ ಇದೆ. ಅದನ್ನು ತಳ್ಳಿದ್ದರೆ ವಿಶಾಲವಾದ ರೂಮ್​ ಇದೆ. ಪೊಲೀಸರು ಅಥವಾ ಮೋಸ ಹೋದವರು ಬಂದರೆ ಇದೇ ರೂಮ್​ನಲ್ಲಿ ಆತ ಅಡಗಿಕೊಳ್ಳುತ್ತಿದ್ದ.

ಇನ್ನು ರೋಹನ್ ಸಲ್ಡಾನಾ ಮನೆ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ಮನೆ ತುಂಬಾ ವಿದೇಶಿ ಮದ್ಯಗಳ ರಾಶಿಯೇ ಇದೆ. ಕೋಟಿ ಕೋಟಿ ಮೌಲ್ಯದ ವಿದೇಶಿ ಮದ್ಯ ಮನೆಯಲ್ಲಿ ಪತ್ತೆ ಆಗಿದೆ. ಬಂದ ಅತಿಥಿಗಳಿಗೆ ರಾಜಾತಿಥ್ಯ ಸುಗುತ್ತಿತ್ತು. ಮನೆಯ ಬಾರ್ ಕೌಂಟರ್ ಐಷಾರಾಮಿ ಪಬ್​​ನ್ನು ಮೀರಿಸುವಂತಿದೆ.

ರೋಹನ್ ಸಲ್ಡಾನಾ ಯಾರು?

ರೋಹನ್ ಸಲ್ಡಾನಾ ಹುಟ್ಟುತ್ತಲೇ ಶ್ರೀಮಂತನಲ್ಲ. 2016ರವರೆಗೂ ಕಷ್ಟದ ಜೀವನ ಮಾಡುತ್ತಿದ್ದ. ವಂಚನೆಯ ಜಾಲಕ್ಕೂ ಮುನ್ನ ಮುಂಬೈಯಲ್ಲಿ ಕೆಲಸ ಮಾಡಿಕೊಂಡಿದ್ದ. ತನಗೆ ಪ್ರಸಿದ್ಧ ಉದ್ಯಮಿಗಳ ಪರಿಚಯ ಇದೆ ಅಂತಾ ಹೇಳಿಕೊಳ್ಳುತ್ತಿದ್ದ.

ಇದನ್ನೂ ಓದಿ: Karnataka Smart Meter Scam | ಸ್ಮಾರ್ಟ್ ಮೀಟರ್ ಅಕ್ರಮ ಆರೋಪ: ಸಚಿವ ಕೆಜೆ ಜಾರ್ಜ್​ಗೆ ಸಂಕಷ್ಟ, ಕೋರ್ಟ್​ ಮೆಟ್ಟಿಲೇರಿದ ಬಿಜೆಪಿ

2016ರ ಬಳಿಕ ವಂಚನೆಯ ಜಾಲಕ್ಕೆ ಕೈ ಹಾಕಿದ್ದ. ಹಣದಾಸೆಯಿಂದ ವಂಚನೆಯ ಜಾಲವನ್ನು ವಿಸ್ತಾರ ಮಾಡಿಕೊಂಡಿದ್ದ. ಇದೇ ವರ್ಷ ಜನವರಿಯಲ್ಲಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಆ ಬಳಿಕ ಕೋಟ್ಯಂತರ ರೂ. ವಂಚನೆ ಗೆ ಕೈ ಹಾಕಿದ್ದ. ಈ ನಿಟ್ಟಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 40 ಕೋಟಿ ರೂ. ವ್ಯವಹಾರ ಮಾಡಿದ್ದ. ಕಳೆದ ತಿಂಗಳು 10 ಕೋಟಿ ರೂ. ಮೌಲ್ಯದ ಫಿಶಿಂಗ್ ಬೋಟ್ ತಯಾರು ಮಾಡಲು ಹೂಡಿಕೆ ಮಾಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:12 am, Fri, 18 July 25