AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನ ಮಗ ಮತ್ತು ಅವನ ಮಾವ ಮುಸ್ತಾಫಾ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಅಂತ ವಿವರಿಸಿದ ಕೆಜಿಎಫ್ ಬಾಬು

ತನ್ನ ಮಗ ಮತ್ತು ಅವನ ಮಾವ ಮುಸ್ತಾಫಾ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಅಂತ ವಿವರಿಸಿದ ಕೆಜಿಎಫ್ ಬಾಬು

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 16, 2025 | 3:01 PM

Share

ಮಗನ ಮದುವೆಯ ಬಳಿಕ ಅವನು ಮತ್ತು ಮುಸ್ತಾಫಾ ಪುನಃ ₹200 ಕೋಟಿ ಸಾಲ ಕೇಳಿಕೊಂಡು ಬಾಬು ಅವರಲ್ಲಿಗೆ ಬಂದಾಗ, ಮೊದಲಿನ ₹45 ಕೋಟಿ ಬ್ಯಾಂಕ್​ಗೆ ಕಟ್ಟದ ಕಾರಣ ಅವರ ಬೇಡಿಕೆಯನ್ನು ಸಾರಾಸಗಟು ತಿರಸ್ಕರಿಸಿದ್ದಾರೆ. ಮದುವೆ ಸಂದರ್ಭದಲ್ಲಿ ಇವರು ತಮ್ಮ ಸೊಸೆಯ ಮೇಲೆ ಸುಮಾರು ₹20 ಕೋಟಿ ಮೌಲ್ಯದ ವಜ್ರಾಭರಣಗಳನ್ನು ಹಾಕಿದ್ದಾರಂತೆ, ಆದರೆ ಅವೆಲ್ಲ ಈಗ ಎಲ್ಲಿವೆ ಅನ್ನೋದೇ ಗೊತ್ತಾಗ್ತಿಲ್ಲ ಎಂದು ಬಾಬು ಹೇಳುತ್ತಾರೆ. ಸಾಲ ನೀಡದ ಕಾರಣ ತನ್ನ ಮಗ ಮತ್ತು ಅವನ ಮಾವ ಮುಸ್ತಾಫಾ ಜನರನ್ನು ಕರೆತಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬಾಬು ಹೇಳುತ್ತಾರೆ.

ಬೆಂಗಳೂರು, ಜುಲೈ 16: ಕೆಜಿಎಫ್ ಬಾಬು (KGF Babu) ಕನ್ನಡಿಗರಿಗೆಲ್ಲ ಪರಿಚಿತರು. ಬಾಬು ಫುಲ್ ಟೈಮ್ ರೀಯಲ್ಟರ್ ಮತ್ತು ಪಾರ್ಟ್ ಟೈಮ್ ರಾಜಕಾರಣಿ (part time politician). ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರು. ಜೆಡಿಎಸ್ ಪಕ್ಷದ ಜೊತೆ ಗುರುತಿಸಿಕೊಳ್ಳುವ ಯತ್ನ ಸಫಲವಾಗಲಿಲ್ಲ. ಈಗ ತನಗೆ ಮಗ ಮತ್ತು ಅವನ ಮಾವನಿಂದ ಸಂಕಷ್ಟ ಎದುರಾಗಿದೆ ಎಂದು ಅವರು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಮಗನ ಮದುವೆಗೆ ಮುಂಚೆ ಅವರ ಬೀಗ ಗುಲಾಂ ಮುಸ್ತಾಫಾ ಎನ್ನುವವರು ಎಸ್​ಬಿಐನಲ್ಲಿ ರೂ. 60 ಕೋಟಿ ಸಾಲ ಮಾಡಿದ್ದಾರಂತೆ. ಅದರೆ ಅದರಲ್ಲಿ ಕೇವಲ ಅದರಲ್ಲಿ ಕೇವಲ ₹15 ಕೋಟಿ ಮರುಪಾವತಿ ಮಾಡಿ ₹45 ಕೋಟಿ ಬಾಕಿ ಕಟ್ಟದೆ ಇದ್ದಾಗ ಬಾಬು ಅವರೇ ತಮ್ಮ ₹ 200 ಕೋಟಿಯ ಆಸ್ತಿಯನ್ನು ಅಡಮಾನ ಇಟ್ಟು ಮುಸ್ತಾಫಾರನ್ನು ಸಂಕಷ್ಟದಿಂದ ಪಾರು ಮಾಡಿದ್ದರಂತೆ. ಮುಸ್ತಾಫಾ ಜೊತೆ ಪಾಲುದಾರನಾಗಿದ್ದ ಸಂಸ್ಥೆಯೊಂದು ₹45 ಕೋಟಿ ಬಾಕಿಯಲ್ಲಿ 15 ಕೋಟಿ ಬ್ಯಾಂಕ್​​ಗೆ ಪಾವತಿಸಿದರೂ ಮುಸ್ತಾಫಾ ಮಾತ್ರ ಏನನ್ನೂ ಪಾವತಿಸಿಲ್ಲ, ₹30 ಕೋಟಿ ಬ್ಯಾಂಕ್ ಸಾಲ ಹಾಗೆಯೇ ಇದೆ ಎಂದು ಬಾಬು ಹೇಳುತ್ತಾರೆ.

ಇದನ್ನೂ ಓದಿ:  Karnataka Assembly Polls: ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಕೆಜಿಎಫ್ ಬಾಬು, ಹೆಚ್ ಡಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು ಯಾಕೆ?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 16, 2025 02:58 PM