AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls: ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಕೆಜಿಎಫ್ ಬಾಬು, ಹೆಚ್ ಡಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು ಯಾಕೆ?

Karnataka Assembly Polls: ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ಕೆಜಿಎಫ್ ಬಾಬು, ಹೆಚ್ ಡಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2023 | 7:18 PM

Share

ಬೇರೆ ರಾಜ್ಯಗಳಿಂದ ಹೈರ್ ಮಾಡಿರುವ ಅಂಗರಕ್ಷಕರ ಭದ್ರತೆಯಲ್ಲಿ ತಿರಗಾಡುತ್ತಿರುವ ಬಾಬು ಹೆಸರು ಕೊನೆ ಘಳಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸೇರಿದರೆ ಆಶ್ಚರ್ಯವಿಲ್ಲ.

ಬೆಂಗಳೂರು: ಇದೊಂದು ಅನಿರೀಕ್ಷಿತ ಬೆಳವಣಿಗೆ. ಕಾಂಗ್ರೆಸ್ ಪಕ್ಷದಿಂದ ಗೊಂಡಿರುವ ಕೆಜಿಎಫ್ ಬಾಬು (KGF Babu) ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿಯಾದರು. ಭೇಟಿ ನಡೆದಿದ್ದು ಯಶವಂತಪುರದ ಜೆಡಿಎಸ್ ಕಾರ್ಯಕರ್ತರೊಬ್ಬರ ಮನೆಯಲ್ಲಿ. ಬಾಬು, ಕುಮಾರಸ್ವಾಮಿಯವ ಕಾಲು ಮುಟ್ಟಿ ನಮಸ್ಕರಿಸಿದ್ದು ಮತ್ತು ಜೆಡಿಎಸ್ ನಾಯಕ ಅವರ ಬೆನ್ನ ಮೇಲೆ ಕೈಯಿಟ್ಟು ಆಶೀರ್ವದಿಸಿದ್ದು ಏನನ್ನೋ ಸೂಚಿಸುತ್ತದೆ ಮಾರಾಯ್ರೇ. ಕುಮಾರಸ್ವಾಮಿ ಅಭ್ಯರ್ಥಿಗಳ ಎರಡನೇ ಪಟ್ಟಿ (second list) ಇನ್ನೂ ಬಿಡುಗಡೆಯಾಗಿಲ್ಲ, ಬೇರೆ ರಾಜ್ಯಗಳಿಂದ ಹೈರ್ ಮಾಡಿರುವ ಅಂಗರಕ್ಷಕರ ಭದ್ರತೆಯಲ್ಲಿ ತಿರಗಾಡುತ್ತಿರುವ ಬಾಬು ಹೆಸರು ಕೊನೆ ಘಳಿಗೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಸೇರಿದರೆ ಆಶ್ಚರ್ಯವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ