ಕಾಂಗ್ರೆಸ್ ಮುಖಂಡರು ಹೀಗೇ ಆಡಿದರೆ 80 ಸೀಟೂ ಬರೋಲ್ಲ ಎಂದ ಕೆಜಿಎಫ್ ಬಾಬು; ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ವಾಗ್ವಾದ

KGF Babu: ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿಯಿಲ್ಲ. ಇಲ್ಲಿ ಬಂದವರಿಗೆ ಮರ್ಯಾದೆ ಕೊಡಲ್ಲವೆಂದು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಷರಾ ಬರೆಯುವ ರೀತಿ ಬಾಬು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರು ಹೀಗೇ ಆಡಿದರೆ 80 ಸೀಟೂ ಬರೋಲ್ಲ ಎಂದ ಕೆಜಿಎಫ್ ಬಾಬು; ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ವಾಗ್ವಾದ
ಕಾಂಗ್ರೆಸ್ ಮುಖಂಡರು ಹೀಗೇ ಆಡಿದರೆ 80 ಸೀಟೂ ಬರೋಲ್ಲ ಎಂದ ಕೆಜಿಎಫ್ ಬಾಬು; ಮುಖಂಡರ ವಾಗ್ವಾದ
Follow us
| Updated By: ಸಾಧು ಶ್ರೀನಾಥ್​

Updated on: Jan 06, 2023 | 2:27 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಎದುರಿಗೇ ಇದೆ. ನಾನಾ ಪಕ್ಷಗಳು, ಅಭ್ಯರ್ಥಿಗಳು, ಬೆಂಬಲಿಗರು ನೇರಾ ನೇರಾ, ಎದುರಾ ಎದುರಾ ಚುನಾವಣಾ ಆಟಗಳಾಡಲು ಅದಾಗಲೇ ಕಣಕ್ಕೆ ಇಳಿದಿದ್ದಾರೆ. ಅದರಲ್ಲೂ, ಒಂದು ರೀತಿ ಕಾಂಗ್ರೆಸ್​​ ಪಕ್ಷದಿಂದ (Congress) ಬಂಡಾಯ ಎದ್ದಿರುವ ರೀತಿಯಲ್ಲಿ ಕೆಜಿಎಫ್​ ಬಾಬು (KGF Babu) ಬೆಂಗಳೂರು ಹೃದಯ ಭಾಗದ ಚಿಕ್ಕಪೇಟೆ ಕ್ಷೇತ್ರದಲ್ಲಿ ಚುನಾವಣೆ ಘೋಷಣೆಗೂ ಮುನ್ನ ಕುಳಿತುಬಿಟ್ಟಿದ್ದಾರೆ. ಗೆಲುವು ಸಾಧಿಸುವವರಿಗೂ ಕ್ಷೇತ್ರ ಬಿಟ್ಟು ಕದಲುವುದಿಲ್ಲ ಅಂತಿದ್ದಾರೆ. ಹಗಲೂ ರಾತ್ರಿ ಜನಸೇವೆಯೇ ಜನಾರ್ದನ ಸೇವೆ ಎಂದು ಮತದಾರರ ಸೇವೆಯಲ್ಲಿ ತೊಡಗಿದ್ದಾರೆ.

ಈ ಮಧ್ಯೆ ಸ್ಥಳೀಯವಾಗಿ ಕಾಂಗ್ರೆಸ್​ ಮುಖಂಡರು ತಮಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕೆಜಿಎಫ್ ಬಾಬು ಅನೇಕ ಬಾರಿ ಅಲವತ್ತುಕೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಯೂ (KPCC) ಕಾಂಗ್ರೆಸ್ ನಾಯಕರು ಮತ್ತು ಬಾಬು ಮಧ್ಯೆ ಪರಸ್ಪರ ವಾಗ್ವಾದವಾದ ಪ್ರಸಂಗ ನಡೆದಿದೆ.

ಕಾಂಗ್ರೆಸ್​ ಕಚೇರಿಗೆ ಬಂದಿದ್ದ ಕೆಜಿಎಫ್ ಬಾಬು ಬಹಿರಂಗವಾಗಿಯೇ… ಕಾಂಗ್ರೆಸ್ ನವರು ಓವರ್ ಕಾನ್ಫಿಡೆನ್ಸ್ ನಲ್ಲಿ ಇದ್ದಾರೆ. ಹೀಗಾದ್ರೆ ಕಾಂಗ್ರೆಸ್ 80 ಸೀಟು ಸಹ ಬರಲ್ಲ ಎಂದು ಗುಟುರು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಪತ್ನಿ, ಮಕ್ಕಳನ್ನು ಬಿಟ್ಟು ಕೆಲಸ ಮಾಡ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಸಹ ಹಗಲಿರುಳು ಕೆಲಸ ಮಾಡ್ತಿದ್ದಾರೆ. ಆದರೆ ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿಯಿಲ್ಲ. ಇಲ್ಲಿ ಬಂದವರಿಗೆ ಮರ್ಯಾದೆ ಕೊಡಲ್ಲವೆಂದು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಷರಾ ಬರೆಯುವ ರೀತಿ ಬಾಬು ಹೇಳಿದ್ದಾರೆ.

ಇದನ್ನು ಕೇಳಿಸಿಕೊಂಡು ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ​ಕೆಜಿಎಫ್ ಬಾಬು ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕೆಜಿಎಫ್ ಬಾಬು ಮಾತಿಗೆ ಕೆರಳಿಕೆಂಡವಾದ ಕಾಂಗ್ರೆಸ್​ ನಾಯಕರು ಬಾಬುಗೆ ಆವಾಜ್ ಹಾಕಿದ್ದಾರೆ. ಬಾಬು ಹೀಗೆಲ್ಲ ಇಲ್ಲಿ ನಿಂತು ಮಾತಾಡಬೇಡ ಎಂದು ಕಾರ್ಯಕರ್ತರು ಗರಂ ಆಗಿದ್ದಾರೆ. ಆಗ ಕಾರ್ಯಕರ್ತರಿಗೇ ಕೆಜಿಎಫ್ ಬಾಬು ಆವಾಜ್ ಹಾಕಲು ಹೋಗಿದ್ದಾರೆ. ಆ ವೇಳೆ, ಕೈ ಮುಖಂಡರು ಕಾರ್ಯಕರ್ತರು ಬಾಬುಗೆ ಚಳಿ ಬಿಡಿಸಿ ಕೆಪಿಸಿಸಿ ಕಚೇರಿಯಿಂದ ಹೊರ ಕಳುಹಿಸಿದ ಪ್ರಸಂಗವೂ ನಡೆದಿದೆ.

ಕರ್ನಾಟಕ ಅಸೆಂಬ್ಲಿ ಚುನಾವಣೆ 2023 ಕುರಿತಾದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ