AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟು ಅರ್ಥಗರ್ಭಿತವಾಗಿತ್ತು ನೋಡಿ 11 ವರ್ಷಗಳ ಹಿಂದೆ ಬಂದ ರಾಜ್ ಬಿ. ಶೆಟ್ಟಿ ನಿರ್ದೇಶನದ ಮೊದಲ ಕಿರುಚಿತ್ರ

ರಾಜ್ ಬಿ. ಶೆಟ್ಟಿ ಅವರ 2014ರ ಕಿರುಚಿತ್ರ ‘5 ಲೆಟರ್ಸ್’ ಆತ್ಮಹತ್ಯೆಯ ವಿರುದ್ಧ ಬಲವಾದ ಸಂದೇಶವನ್ನು ಹೊಂದಿದೆ. ‘ಬದುಕುವುದು ಬದುಕಿನ ಅತಿ ದೊಡ್ಡ ಗುರಿ’ ಎಂಬ ಸರಳ ಆದರೆ ಆಳವಾದ ಸಂದೇಶವನ್ನು ಈ ಕಿರುಚಿತ್ರ ತಿಳಿಸುತ್ತದೆ. ಈ ಕಿರುಚಿತ್ರವು ರಾಜ್ ಅವರ ಚಲನಚಿತ್ರ ನಿರ್ದೇಶನದ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಎಷ್ಟು ಅರ್ಥಗರ್ಭಿತವಾಗಿತ್ತು ನೋಡಿ 11 ವರ್ಷಗಳ ಹಿಂದೆ ಬಂದ ರಾಜ್ ಬಿ. ಶೆಟ್ಟಿ ನಿರ್ದೇಶನದ ಮೊದಲ ಕಿರುಚಿತ್ರ
ರಾಜ್
ರಾಜೇಶ್ ದುಗ್ಗುಮನೆ
|

Updated on: Aug 11, 2025 | 9:55 AM

Share

ರಾಜ್ ಬಿ. ಶೆಟ್ಟಿ (Raj B Shetty) ಅವರು ಇಂದು ನಿರ್ದೇಶನದಲ್ಲಿ ಪಳಗಿದ್ದಾರೆ. ನಿರ್ಮಾಣದಲ್ಲೂ ಅವರು ಯಶಸ್ಸು ಕಂಡಿದ್ದಾರೆ. ಹೀರೋ ಆಗಿ ಅವರು ನಟಿಸೋ ಸಿನಿಮಾಗಳು ಅದ್ಭುತ ಯಶಸ್ಸು ಕಾಣುತ್ತಿವೆ. ರಾಜ್ ಅವರು ಈ ಮೊದಲು ಆರ್​ಜೆ ಆಗಿದ್ದರು. ತುಳು ಸಿನಿಮಾ ಮಾರ್ಕೆಟಿಂಗ್ ತಂಡದಲ್ಲಿಯೂ ಕೆಲಸ ಮಾಡಿದ್ದರು. ಈಗ ಅವರ ನಿರ್ಮಾಣದ ‘ಸು ಫ್ರಮ್ ಸೋ’ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಸಿನಿಮಾ ಬಿಡುಗಡೆ ವೇಳೆ ಅವರ ಮೊದಲ ಶಾರ್ಟ್​ ಫಿಲ್ಮ್​ನ ಚರ್ಚೆ ಕೂಡ ಆಗುತ್ತಿದೆ.

ರಾಜ್​ ಬಿ. ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ‘ಒಂದು ಮೊಟ್ಟೆಯ ಕಥೆ’ ಅನ್ನೋದು ಎಲ್ಲರಿಗೂ ಗೊತ್ತು. ಈ ಚಿತ್ರ ತೆರೆಗೆ ಬಂದಿದ್ದು 2017ರಲ್ಲಿ. ಅದಕ್ಕೂ ಕೆಲ ವರ್ಷ ಮೊದಲು ಅವರು ಶಾರ್ಟ್​ ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದರು. ಅದರ ಹೆಸರು ‘5 ಲೆಟರ್ಸ್’. ಈ ಶಾರ್ಟ್​ ಫಿಲ್ಮ್ ಈಗಲೂ ಯೂಟ್ಯೂಬ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

‘ಕಾಂತಾರ’ ಬಿಡುಗಡೆ ಬಳಿಕ ಪ್ರಕಾಶ್ ತುಮ್ಮಿನಾಡು ಅವರು ಈ ಬಗ್ಗೆ ಕಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು. ರಾಜ್ ಅವರು ಈ ಮೊದಲು ಕಿರುಚಿತ್ರ ಮಾಡಿದ್ದಾಗಿ ಅವರು ಹೇಳಿದ್ದರು. ಈಗ ‘ಸು ಫ್ರಮ್ ಸೋ’ ರಿಲೀಸ್ ಬಳಿಕ ರಾಜ್ ಅವರ ಮೊದಲ ಕಿರುಚಿತ್ರ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ
Image
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ
Image
‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
Image
ಭಾನುವಾರ ‘ಸು ಫ್ರಮ್ ಸೋ’ ಊಹೆಗೂ ಮೀರಿದ ಕಲೆಕ್ಷನ್; ಲೆಕ್ಕಾಚಾರ ತಲೆಕೆಳಗೆ
Image
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ

ರಾಜ್ ಬಿ ಶೆಟ್ಟಿ ಶಾರ್ಟ್ ಸಿನಿಮಾ

ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ವಿಷಯ ಇಟ್ಟುಕೊಂಡು ‘5 ಲೆಟರ್ಸ್’ ಕಿರುಚಿತ್ರ ಮಾಡಿದ್ದರು ರಾಜ್ ಬಿ ಶೆಟ್ಟಿ. ‘ಬದುಕಿನ ಅತಿ ದೊಡ್ಡ ಗುರಿ ಬುದುಕುವುದು’ ಎಂಬುದೇ ಆ ಐದು ಪದ. ತುಂಬಾನೇ ಅರ್ಥಗರ್ಭಿತವಾಗಿ ಈ ಕಿರುಚಿತ್ರದಲ್ಲಿ ಅವರು ಹೇಳಿದ್ದರು. ಪ್ರವೀಣ್ ಶ್ರಿಯಾನ್ ಅವರು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. 2014ರ ಆಗಸ್ಟ್ 4ರಂದು ಈ ಕಿರುಚಿತ್ರ ಬಿಡುಗಡೆ ಕಂಡಿತ್ತು.

ಇದನ್ನೂ ಓದಿ: ‘ಕಾಟೇರ’ ಒಟ್ಟಾರೆ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ

ಈ ಕಿರುಚಿತ್ರದಿಂದ ರಾಜ್ ಅವರು ಅಪಾರ ಅನುಭವ ಪಡೆದಿದ್ದಾಗಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಕಾನ್ಫಿಡೆನ್ಸ್​ನಿಂದಲೇ ಅವರು ಸಿನಿಮಾ ಮಾಡುವ ಕಾರ್ಯಕ್ಕೆ ಮುಂದಾದರು. ಈಗ ಹಲವು ವಿಶಿಷ್ಠ ಸಿನಿಮಾಗಳನ್ನು ನೀಡುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.