‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು; ಉಪೇಂದ್ರ ಪಡೆದಿದ್ದೆಷ್ಟು?
Coolie Movie Cast Remuneration: ರಜನಿಕಾಂತ್ ಅವರ 'ಕೂಲಿ' ಚಿತ್ರವು ಆಗಸ್ಟ್ 14 ರಂದು ಬಿಡುಗಡೆಯಾಗುತ್ತಿದೆ. 375 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಜನಿಕಾಂತ್ ಅವರಿಗೆ 150 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಲೋಕೇಶ್ ಕನಕರಾಜ್, ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್ ಮುಂತಾದವರು ಕೂಡ ಒಳ್ಳೆಯ ಸಂಭಾವನೆ ಪಡೆದಿದ್ದಾರೆ.

‘ಜೈಲರ್’ ಚಿತ್ರದ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ಪಡೆದ ಸೂಪರ್‌ಸ್ಟಾರ್ ರಜನಿಕಾಂತ್ ಈಗ ‘ಕೂಲಿ’ (Coolie Movie) ರಿಲೀಸ್ಗೆ ಕಾದಿದ್ದಾರೆ. ಈ ವಾರ (ಆಗಸ್ಟ್ 14) ಸಿನಿಮಾ ಚಿತ್ರ ಬಿಡುಗಡೆ ಕಾಣಲಿದೆ. 74ನೇ ವಯಸ್ಸಿನಲ್ಲೂ ತಮ್ಮ ಶಕ್ತಿ ಮೀರಿ ಕೆಲಸ ಮಾಡಿತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ದೊಡ್ಡ ಮಟ್ಟದಲ್ಲಿ ಸಂಭಾವನೆ ಕೊಡಲಾಗುತ್ತಿದೆ. ಈ ಚಿತ್ರಕ್ಕೆ ಭಾರಿ ಹೈಪ್ ಇದೆ. ಈ ಸಿನಿಮಾದಲ್ಲಿ ರಜನಿ ಹಾಗೂ ಇತರ ಕಲಾವಿದರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.
ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರಕ್ಕೆ ತೆಲುಗು ನಟ ನಾಗಾರ್ಜುನ, ಕನ್ನಡದ ಸ್ಟಾರ್ ಹೀರೋ, ಉಪೇಂದ್ರ ಮತ್ತು ಬಹುಭಾಷಾ ನಟಿ ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ರಜನಿ ವೃತ್ತಿಜೀವನದ 171 ನೇ ಚಿತ್ರವಾಗಿ ಬರುತ್ತಿರುವ ಈ ಚಿತ್ರದ ಬಗ್ಗೆ ಸುದ್ದಿಗಳು ನಿರಂತರವಾಗಿ ಚರ್ಚೆ ಆಗುತ್ತಿವೆ. ಈ ಚಿತ್ರವನ್ನು ಸುಮಾರು 350 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.
ಈಗ, ಈ ಚಿತ್ರದ ಬಜೆಟ್ ಮತ್ತು ಸಂಭಾವನೆಯ ಬಗ್ಗೆ ಚಲನಚಿತ್ರ ವಲಯಗಳಲ್ಲಿ ಹಲವು ಸುದ್ದಿಗಳಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಈ ಚಿತ್ರಕ್ಕಾಗಿ ರಜನಿ ಅವರಿಗೆ 150 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ. ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ 50 ಕೋಟಿ ರೂ.ಗಳವರೆಗೆ ಸಂಭಾವನೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆಮಿರ್ ಖಾನ್ಗೆ 20 ಕೋಟಿ ರೂಪಾಯಿ, ನಾಗಾರ್ಜುನಗೆ 10 ಕೋಟಿ ರೂಪಾಯಿ, ಸತ್ಯರಾಜ್ಗೆ ಕೋಟಿ ರೂಪಾಯಿ, ಶ್ರುತಿ ಹಾಸನ್, ಉಪೇಂದ್ರಗೆ 4 ಕೋಟಿ ರೂಪಾಯಿ, ಸೌಬಿನ್ ಶಾಹಿರ್ಗೆ 1 ಕೋಟಿ ರೂಪಾಯಿ, ವಿಶೇಷ ಹಾಡಿನಲ್ಲಿ ಮಿಂಚಿದ ಪೂಜಾ ಹೆಗ್ಡೆಗೆ 3 ಕೋಟಿ ರೂಪಾಯಿ, ಸಂಗೀತ ಸಂಯೋಜನೆ ಮಾಡಿದ ಅನಿರುದ್ಧ್ಗೆ 15 ಕೋಟಿ ರೂಪಾಯಿ ಸಂಭಾವನೆ ಕೊಡಲಾಗಿದೆ.
ಇದನ್ನೂ ಓದಿ: ‘ವಾರ್ 2’ Vs ‘ಕೂಲಿ’: ಬುಕ್ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?
ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ. ಅಮೇಜಾನ್ ಮೂಲಕ್ ಆರ್ಡರ್ ಮಾಡುವ ವಸ್ತುಗಳ ಮೇಲೆ ಕೂಲಿ ರ್ಯಾಪರ್ ಬಂದಿದೆ. ಈ ರೀತಿಯಲ್ಲಿ ಹಲವು ಪ್ರಚಾರ ಮಾಡಲಾಗಿದೆ. ಅದಕ್ಕಾಗಿ ಅವರು 25 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟು ಸೇರಿಸಿದರೆ, ಈ ಚಿತ್ರದ ಬಜೆಟ್ 375 ರೂ.ಗಳಿಗಿಂತ ಹೆಚ್ಚಾಗಿರುತ್ತದೆ. ಇದು ರಜನಿ ವೃತ್ತಿಜೀವನದಲ್ಲಿ ಅತಿ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರವಾಗಿದೆ ಎಂಬುದು ವಿಶೇಷವಾಗಿದೆ.
ಈ ಚಿತ್ರವು ಈ ವರ್ಷ ಆಗಸ್ಟ್ 14 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ತೆಲುಗು ಜೊತೆಗೆ, ಈ ಚಿತ್ರವು ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:49 am, Mon, 11 August 25







