AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾನುವಾರ ‘ಸು ಫ್ರಮ್ ಸೋ’ ಊಹೆಗೂ ಮೀರಿದ ಕಲೆಕ್ಷನ್; ಪಂಡಿತರ ಲೆಕ್ಕಾಚಾರ ತಲೆಕೆಳಗೆ

ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಚಿತ್ರ ಅದ್ಭುತ ಗಳಿಕೆ ಮಾಡುತ್ತಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ಭಾರೀ ಲಾಭ ಗಳಿಸುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ಚಿತ್ರದ ಯಶಸ್ಸು ನಿರೀಕ್ಷೆಗೂ ಮೀರಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನು ತೋರಿಸಿದೆ.

ಭಾನುವಾರ ‘ಸು ಫ್ರಮ್ ಸೋ’ ಊಹೆಗೂ ಮೀರಿದ ಕಲೆಕ್ಷನ್; ಪಂಡಿತರ ಲೆಕ್ಕಾಚಾರ ತಲೆಕೆಳಗೆ
ಸು ಫ್ರಮ್ ಸೋ
ರಾಜೇಶ್ ದುಗ್ಗುಮನೆ
|

Updated on:Aug 11, 2025 | 7:09 AM

Share

ಜೆಪಿ ತುಮುನಾಡು ನಿರ್ದೇಶನದ, ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ (Su From So Collection) ಸಿನಿಮಾ ವಿಚಾರದಲ್ಲಿ ಎಲ್ಲವೂ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಆಗುತ್ತಿದೆ. ಮೂರನೇ ಭಾನುವಾರ ಮುಗಿದರೂ ಸಿನಿಮಾದ ಗಳಿಕೆ ನಿಲ್ಲುತ್ತಿಲ್ಲ. ಈ ಚಿತ್ರ ಭಾನುವಾರ ಎಲ್ಲರ ಊಹೆಗೂ ಮೀರಿ ಗಳಿಕೆ ಮಾಡಿದೆ. ಇದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಇದೆ. ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಒಳ್ಳೆಯ ಗಳಿಕೆ ಆಗುತ್ತಿದೆ. ಮಲಯಾಳಂ ಪ್ರೇಕ್ಷಕರು ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.

‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಸಿನಿಮಾ ತಂಡದವರು ಕೂಡ ಇದೊಂದು ಒಳ್ಳೆಯ ಚಿತ್ರ ಎನ್ನುತ್ತಲೇ ಬರುತ್ತಿದ್ದರು. ಸಿನಿಮಾ ರಿಲೀಸ್ ಆದ ಬಳಿಕ ಬಾಯ್ಮಾತಿನ ಪ್ರಚಾರ ಸಿಕ್ಕಿದೆ. ಈ ಸಿನಿಮಾ ಎದುರು ರಿಲೀಸ್ ಆದ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರವೇ ಥಂಡ್ ಹೊಡೆದಿದೆ ಎಂದರೆ ನಂಬಲೇ ಬೇಕು. ಈ ರೀತಿಯಲ್ಲಿ ಸಿನಿಮಾ ಅಬ್ಬರಿಸುತ್ತಿದೆ.

ಈ ಚಿತ್ರದ ಬಜೆಟ್ 4.50 ಕೋಟಿ ರೂಪಾಯಿ. ಪ್ರಚಾರಕ್ಕೆ 1 ಕೋಟಿ ರೂಪಾಯಿ ಖರ್ಚಾಗಿದೆ. ಎಲ್ಲ ಸೇರಿದರೆ ಸಿನಿಮಾಗೆ ಸರಿ ಸುಮಾರು 5.50 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಬಹುದು. ಆದರೆ, ಪ್ರತಿ ವೀಕೆಂಡ್​ನಲ್ಲಿ ಸಿನಿಮಾ ಬಜೆಟ್​ಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ. ‘ಸು ಫ್ರಮ್ ಸೋ’ ಸಿನಿಮಾ 17ನೇ ದಿನವಾದ ಭಾನುವಾರ (ಆಗಸ್ಟ್ 10) 6.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಳೆದ ಭಾನುವಾರ ಕೂಡ ಇಷ್ಟೇ ಕಲೆಕ್ಷನ್ ಆಗಿತ್ತು. ಅದೇ ಹವಾ ಉಳಿಸಿಕೊಂಡು ಸಿನಿಮಾ ಸಾಗುತ್ತಿದೆ.

ಇದನ್ನೂ ಓದಿ
Image
ಮಹೇಶ್ ಬಾಬು ಇಷ್ಟೊಂದು ಶ್ರೀಮಂತರೇ? ನಟನ ಆಸ್ತಿ ಬಗ್ಗೆ ಇಲ್ಲಿದೆ ವಿವರ
Image
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ
Image
ತೆಲುಗು ರಿಲೀಸ್ ಬೆನ್ನಲ್ಲೇ ಮತ್ತೆ ಹೆಚ್ಚಿತು ‘ಸು ಫ್ರಮ್ ಸೋ’ ಕಲೆಕ್ಷನ್
Image
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ:  3ನೇ ವೀಕೆಂಡ್ ಕೂಡ ‘ಸು ಫ್ರಮ್ ಸೋ’ ಭರ್ಜರಿ ಕಲೆಕ್ಷನ್; ಒಟ್ಟು ಎಷ್ಟಾಯ್ತು?

ಚಿತ್ರದ ಒಟ್ಟಾರೆ ಗಳಿಕೆ ನೋಡೋದಾದರೆ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 63.ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಲ್ಲಿ ಮಲಯಾಳಂನಿಂದ ಸರಿ ಸುಮಾರು 4 ಕೋಟಿ ರೂಪಾಯಿ, 60-80 ಲಕ್ಷ ರೂಪಾಯಿ ತೆಲುಗಿನಿಂದ ಬಂದಿದೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 83 ಸಾವಿರ ಮಂದಿ ರೇಟಿಂಗ್ ನೀಡಿದ್ದು, 9.4 ರೇಟಿಂಗ್ ಪಡೆದುಕೊಂಡಿದೆ. ಚಿತ್ರ ಮತ್ತಷ್ಟು ದಿನ ಅಬ್ಬರಿಸುವ ಸೂಚನೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Mon, 11 August 25