AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್ ಜೊತೆಗಿನ ಫ್ರೆಂಡ್​ಶಿಪ್ ಈಗ ಹೇಗಿದೆ? ವಿವರಿಸಿದ ರಾಜ್ ಬಿ. ಶೆಟ್ಟಿ

ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಮಧ್ಯೆ ‘ಕಾಂತಾರ 2’ ಚಿತ್ರದಲ್ಲಿ ರಾಜ್ ಬರಹಗಾರನಾಗಿ ಕೆಲಸ ಮಾಡೋದಿಲ್ಲ ಎಂದಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಹೊಸ ಚಿತ್ರದ ಪ್ರಚಾರದ ವೇಳೆ, ರಿಷಬ್ ಅವರೊಂದಿಗಿನ ತಮ್ಮ ಬಾಂಡಿಂಗ್ ಉತ್ತಮವಾಗಿದೆ ಎಂದು ಅವರು ತಿಳಿಸಿದ್ದಾರೆ.  

ರಿಷಬ್ ಜೊತೆಗಿನ ಫ್ರೆಂಡ್​ಶಿಪ್ ಈಗ ಹೇಗಿದೆ? ವಿವರಿಸಿದ ರಾಜ್ ಬಿ. ಶೆಟ್ಟಿ
ರಾಜ್-ರಿಷಬ್
ರಾಜೇಶ್ ದುಗ್ಗುಮನೆ
|

Updated on: Aug 11, 2025 | 12:47 PM

Share

ರಿಷಬ್ ಶೆಟ್ಟಿ ಹಾಗೂ ರಾಜ್ ಬಿ. ಶೆಟ್ಟಿ ಅವರು ಹಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ‘ಕಾಂತಾರ’ ಚಿತ್ರದ ಕೆಲವು ದೃಶ್ಯಗಳನ್ನು ರಾಜ್ (Raj B Shetty) ಅವರೇ ಬರೆದಿದ್ದರು. ಆದರೆ, ‘ಕಾಂತಾರ 2’ ಚಿತ್ರದಲ್ಲಿ ರಾಜ್ ಅವರು ಕೆಲಸ ಮಾಡಿರಲಿಲ್ಲ. ಇದಕ್ಕೆ ಕಾರಣವನ್ನು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಈ ಬೆನ್ನಲ್ಲೇ ರಾಜ್ ಹಾಗೂ ರಿಷಬ್ ಗೆಳೆತನ ಹಳಸಿದೆ ಎಂದೆಲ್ಲ ವದಂತಿ ಹಬ್ಬಿತ್ತು. ಇದಕ್ಕೆ ರಾಜ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ ಬಿ. ಶೆಟ್ಟಿ ಅವರು ‘ಸು ಫ್ರಮ್ ಸೋ’ ಸಿನಿಮಾನ ನಟಿಸಿ, ನಿರ್ಮಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆ ಕಂಡಿದೆ. ಈ ಚಿತ್ರದ ಪ್ರಚಾರಕ್ಕಾಗಿ ರಾಜ್ ತೆಲುಗು ಯೂಟ್ಯೂಬ್ ಚಾನೆಲ್​ಗಳಿಗೆ ಸಂದರ್ಶನ ಕೊಟ್ಟಿದ್ದಾರೆ. ಈ ವೇಳೆ ಅವರು ರಿಷಬ್ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಕಾಟೇರ’ ಒಟ್ಟಾರೆ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ

ಇದನ್ನೂ ಓದಿ
Image
ಎಷ್ಟು ಅರ್ಥಗರ್ಭಿತವಾಗಿತ್ತು ನೋಡಿ 11 ವರ್ಷಗಳ ಹಿಂದೆ ಬಂದ ರಾಜ್ ಕಿರುಚಿತ್ರ
Image
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ
Image
‘ಕೂಲಿ’ ಚಿತ್ರದ ರಜನಿ ಸಂಭಾವನೆಯಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
Image
‘ಬ್ಲಾಕ್​ಬಸ್ಟರ್’; ಒಂದು ವಾರ ಮೊದಲೇ ಹೊರಬಿತ್ತು ಕೂಲಿ ಸಿನಿಮಾ ವಿಮರ್ಶೆ

ರಾಜ್ ಬಿ. ಶೆಟ್ಟಿ ಅವರು ‘ಚಾಯ್ ಬಿಸ್ಕೆಟ್ ಫುಡ್’ ಹೆಸರಿನ ಯೂಟ್ಯೂಬ್ ಚಾನೆಲ್​ಗೆ ಸಂದರ್ಶನ ನೀಡಿದ್ದಾರೆ. ತೆಲಂಗಾಣ ಸರ್ಕಾರದವರೇ ನಡೆಸೋ ಫಿಷ್ ಕ್ಯಾಂಟೀನ್​ಗೆ ಈ ಯೂಟ್ಯೂಬರ್ ಜೊತೆ ರಾಜ್ ತೆರಳಿದ್ದರು. ರಾಜ್ ಹೇಳಿ ಕೇಳಿ ಮಂಗಳೂರಿನವರು. ಮೀನು ಎಂದರೆ ಅವರಿಗೆ ಪಂಚ ಪ್ರಾಣ. ಹೈದರಾಬಾದ್​ನಲ್ಲಿ ಮೀನು ಸಿಗುತ್ತದೆ ಎಂದರೆ ಅವರು ಅದನ್ನು ಮಿಸ್ ಮಾಡಿಕೊಳ್ಳುವುದೇ ಇಲ್ಲ. ಹೀಗಾಗಿ, ಖುಷಿ ಖುಷಿಯಿಂದ ಈ ಕ್ಯಾಂಟೀನ್​ಗೆ ಭೇಟಿ ಕೊಟ್ಟಿದ್ದಾರೆ.

ರಾಜ್ ಬಿ. ಶೆಟ್ಟಿ ತೆಲುಗಿಗೆ ನೀಡಿದ ಸಂದರ್ಶನ

ಚಾಯ್ ಬಿಸ್ಕೆಟ್ ಫುಡ್ ಯೂಟ್ಯೂಬ್ ಚಾನೆಲ್ ನಿರೂಪಕ ವಿಡಿಯೋ ಕೊನೆಯಲ್ಲಿ ಪ್ರಶ್ನೆ ಒಂದನ್ನು ಕೇಳಿದರು. ‘ಆರ್​ಆರ್​ಆರ್​’ ಬಗ್ಗೆ ಹೇಳಿ ಎಂದರು. ‘ಆರ್​ಆರ್​ಆರ್ ಎಂದರೆ ರಿಷಬ್, ರಕ್ಷಿತ್ ಹಾಗೂ ರಾಜ್. ನಾವು ಕರಾವಳಿಯವರು. ನಮ್ಮನ್ನು ಶೆಟ್ಟಿ ಗ್ಯಾಂಗ್ ಎಂದು ಕರೆಯುತ್ತಾರೆ. ನಮಗೆ ಕರ್ನಾಟಕದ ಜನತೆ ಸಾಕಷ್ಟು ಪ್ರೀತಿ ತೋರಿಸಿದೆ. ನಾನು ಇಲ್ಲಿಗೆ ಬರೋದಕ್ಕೂ ಮೊದಲು ರಿಷಬ್ ನನಗೆ ಕರೆ ಮಾಡಿದ್ದ. ಅವನು ಅಭಿನಂದನೆ ತಿಳಿಸಿದ. ಈ ಸಿನಿಮಾದ ಕಲೆಕ್ಷನ್ ಫಾಲೋಅಪ್​ನ ಅವನು ಹೆಚ್ಚು ಮಾಡಿದ್ದಾನೆ’ ಎಂದರು ರಾಜ್. ಈ ಮೂಲಕ ಇಬ್ಬರ ಬಾಂಡಿಂಗ್ ಚೆನ್ನಾಗಿಯೇ ಇದೆ ಎಂಬುದನ್ನು ಸ್ಪಷ್ಟಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.