AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದ್ದೆಗೆ ಹಚ್ಚಿದ ಬೆಂಕಿ ನಿಯಂತ್ರಣ ತಪ್ಪಿ 20ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು ಭಸ್ಮ

ಗದ್ದೆಗೆ ಹಚ್ಚಿದ ಬೆಂಕಿ ನಿಯಂತ್ರಣ ತಪ್ಪಿ 20ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು ಭಸ್ಮ

ಅಮೀನ್​ ಸಾಬ್​
| Edited By: |

Updated on:Oct 28, 2026 | 4:22 PM

Share

ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ಗ್ರಾಮದಲ್ಲಿ ಭತ್ತದ ಗದ್ದೆ ಸ್ವಚ್ಛಗೊಳಿಸಲು ಬೆಂಕಿ ಹಚ್ಚಿದ ಪರಿಣಾಮ 20ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು, ಮೋಟರ್‌ಗಳು ಸುಟ್ಟು ಭಸ್ಮವಾಗಿವೆ. ಆಂಧ್ರ ಮೂಲದ ಗುತ್ತಿಗೆ ರೈತರೇ ಇದಕ್ಕೆ ಕಾರಣ ಎಂದು ಸ್ಥಳೀಯ ರೈತರು ಆರೋಪಿಸಿದ್ದು, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬರಗಾಲದ ನಡುವೆ ಈ ನಷ್ಟ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಯಾದಗಿರಿ, ಅ.28: ಭೀಕರ ಬರಗಾಲದ ನಡುವೆಯೂ ಯಾದಗಿರಿ ಜಿಲ್ಲೆಯ ಅನ್ನದಾತರು ಭೀಮಾ ಮತ್ತು ಕೃಷ್ಣಾ ನದಿಗಳ ನೀರನ್ನು ಬಳಸಿಕೊಂಡು ಭತ್ತ ಬೆಳೆದಿದ್ದಾರೆ. ಕೊಯ್ಲು ಪೂರ್ಣಗೊಂಡ ನಂತರ, ರೈತರು ಮುಂದಿನ ಬೆಳೆಗಾಗಿ ಗದ್ದೆಗಳನ್ನು ಸ್ವಚ್ಛಗೊಳಿಸಲು ಭತ್ತದ ಹುಲ್ಲಿಗೆ ಬೆಂಕಿ ಹಚ್ಚುವುದು ವಾಡಿಕೆ. ಆದರೆ, ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ಗ್ರಾಮದಲ್ಲಿ ಈ ಬಾರಿ ಬೆಂಕಿ ನಿಯಂತ್ರಣ ತಪ್ಪಿ ಭಾರಿ ಅನಾಹುತಕ್ಕೆ ಕಾರಣವಾಗಿದೆ. ಗದ್ದೆಗಳಿಗೆ ಹಚ್ಚಿದ ಬೆಂಕಿ ಪಕ್ಕದಲ್ಲಿದ್ದ 20ಕ್ಕೂ ಹೆಚ್ಚು ರೈತರ ಪಂಪ್‌ಸೆಟ್‌ಗಳು, ಮೋಟರ್‌ಗಳು, ಕೇಬಲ್‌ಗಳು ಮತ್ತು ತಾಮ್ರದ ತಂತಿಗಳಿಗೆ ವ್ಯಾಪಿಸಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಈ ಘಟನೆಗೆ ಆಂಧ್ರ ಮೂಲದ ಗುತ್ತಿಗೆ ರೈತರು ಕಾರಣ ಎಂದು ಅಬ್ಬೆತುಮಕೂರು ಗ್ರಾಮದ ರೈತರು ಆರೋಪಿಸಿದ್ದಾರೆ. ತಮ್ಮ ಗಮನಕ್ಕೆ ತಾರದೆ ಗದ್ದೆಗಳಿಗೆ ಬೆಂಕಿ ಹಚ್ಚಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಾಲ ಮಾಡಿ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದ ರೈತರು, ಈಗ ಸಂಪೂರ್ಣವಾಗಿ ಕಂಗಾಲಾಗಿದ್ದಾರೆ. ನಷ್ಟ ಪರಿಹಾರ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 28, 2026 04:21 PM

Follow Us
ಅಮೀನ್​ ಸಾಬ್​
ಅಮೀನ್​ ಸಾಬ್​

ಅಮೀನ್​ ಸಾಬ್​ ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದಾರೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿಸಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಹವ್ಯಾಸ ಕ್ರಿಕೆಟ್ ಆಡುವುದು, ಮಾನವೀಯ ಮೌಲ್ಯಗಳುಳ್ಳ ಸುದ್ದಿಗಳನ್ನ ವರದಿ ಮಾಡುವುದು.

Read More