ಶಾರುಖ್ ಮೋಸ ಮಾಡಿದರೆ…; ಗೌರಿ ಖಾನ್ ಬೋಲ್ಡ್ ಉತ್ತರ ಮೆಚ್ಚಲೇಬೇಕು
ಶಾರುಖ್ ಮತ್ತು ಗೌರಿ ಖಾನ್ ಅವರ ಸುದೀರ್ಘ ವಿವಾಹ ಜೀವನ ಮತ್ತು ಅವರ ಅಚಲ ಪ್ರೇಮದ ಬಗ್ಗೆ ಈ ಲೇಖನ ತಿಳಿಸುತ್ತದೆ. ವಿಭಿನ್ನ ಧರ್ಮಗಳ ಹೊರತಾಗಿಯೂ ಅವರ ಪ್ರೇಮ ನಿಜವಾದ ಸಾಕ್ಷಿಯಾಗಿದೆ. ಗೌರಿಯವರ ಧೈರ್ಯದ ಉತ್ತರ ಮತ್ತು ಅವರ ವಿಶ್ವಾಸವು ಅನೇಕರಿಗೆ ಸ್ಫೂರ್ತಿಯಾಗಿದೆ.

ಗೌರಿ ಖಾನ್ ಹಾಗೂ ಶಾರುಖ್ ಖಾನ್ (Shah Rukh Khan) ಸುಖ ಸಂಸಾರ ನಡೆಸುತ್ತಿದ್ದಾರೆ. ಇವರು 1991ರ ಅಕ್ಟೋಬರ್ 25ರಂದು ವಿವಾಹ ಆದರು. ಶಾರುಖ್ ಖಾನ್ ಹಾಗೂ ಗೌರಿ ಧರ್ಮ ಬೇರೆ ಆದರೂ ಇವರಿಗೆ ಅದು ಸಮಸ್ಯೆ ಎನಿಸಿಲ್ಲ. ಶಾರುಖ್ ಖಾನ್ ಅವರು ಎಂದಿಗೂ ಗೌರಿಗೆ ಮೋಸ ಮಾಡಿಲ್ಲ. ಒಂದೊಮ್ಮೆ ಮಾಡಿಬಿಟ್ಟರೆ? ಈ ಪ್ರಶ್ನೆ ಗೌರಿ ಖಾನ್ಗೆ ಈ ಮೊದಲು ಎದುರಾಗಿತ್ತು. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದರು. ಅವರ ಉತ್ತರ ಅನೇಕರಿಗೆ ಅಚ್ಚರಿ ತಂದಿತ್ತು.
2005ರಲ್ಲಿ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು ಗೌರಿ ಖಾನ್. ಈ ವೇಳೆ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ‘ಹೀರೋಗಳ ಮೇಲೆ ಸಾಕಷ್ಟು ಜನರ ಕಣ್ಣಿರುತ್ತದೆ. ನಿಮಗೆ ಇದಕ್ಕೆ ಏನಾದರೂ ಇನ್ಸೆಕ್ಯೂರ್ ಭಾವನೆ ಕಾಡುತ್ತದೆಯೇ’ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದರು. ‘ನನಗೆ ಈ ಪ್ರಶ್ನೆಗಳ ಬಗ್ಗೆ ಅಸಹ್ಯವಿದೆ. ಜನರು ಈ ಪ್ರಶ್ನೆಗಳನ್ನು ಕೇಳಲು ಬಯಸಿದಾಗ ನಾನು ಬ್ಲ್ಯಾಂಕ್ ಆಗುತ್ತೇನೆ. ನನಗೆ ನಿಜವಾಗಿಯೂ ಕಿರಿಕಿರಿಯಾಗುತ್ತದೆ. ಒಂದೊಮ್ಮೆ ಶಾರುಖ್ ನನ್ನ ಜೊತೆ ಇರಲೇ ಬಾರದು ಎಂದು ಹಣೆಯಲ್ಲಿ ಬರೆದುಕೊಂಡಿದ್ದರೆ ನನಗೆ ಬೇರೊಬ್ಬರನ್ನು ಹುಡುಕಿ ಕೊಡು ಎಂದು ನಾನು ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತೇನೆ. ಅವನು ಸುಂದರವಾಗಿ ಇರಬೇಕು ಎಂದು ನಾನು ಬಯಸುತ್ತೇನೆ’ ಎಂದಿದ್ದರು ಅವರು.
‘ನಾನು ಇದನ್ನು ದೇವರ ಬಳಿ ಕೇಳಿಕೊಳ್ಳೋದು. ಬೇರೆಯ ವ್ಯಕ್ತಿ ಜೊತೆ ಇರಲು ಅವರು ಬಯಿಸಿದರೆ ನನಗೇನು ತೊಂದರೆ. ಒಳ್ಳೆಯದೇ. ಬೇರೆಯವರ ಜೊತೆ ಜೀವನ ಸಾಗಿಸೋಣ ಎನ್ನುತ್ತೇನೆ’ ಎಂದು ಗೌರಿ ಖಾನ್ ಬೋಲ್ಡ್ ಉತ್ತರ ನೀಡಿದ್ದರು.
ಇದನ್ನೂ ಓದಿ: ಗೌರಿ ಖಾನ್ ಒಡೆತನದ ರೆಸ್ಟೋರೆಂಟ್ನಲ್ಲಿ ನಕಲಿ ಪನ್ನೀರ್ ಬಳಕೆ? ವ್ಯಕ್ತವಾಯ್ತು ಟೀಕೆ
ಆದರೆ, ಶಾರುಖ್ ಖಾನ್ ಆ ರೀತಿ ಅಲ್ಲ. ತನ್ನನ್ನು ನಂಬಿ ಬಂದ ಪತ್ನಿಯನ್ನು ಅವರು ಕೈ ಬಿಡಲೇ ಇಲ್ಲ. ಈ ದಂಪತಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಮ್ ಖಾನ್ ಹೆಸರಿನ ಮಕ್ಕಳು ಇದ್ದಾರೆ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಪ್ರೀತಿಸಿ ಮದುವೆ ಆದವರು. ಇವರ ವಿವಾಹಕ್ಕೆ ವಿರೋಧ ಇತ್ತು. ಆದರೆ, ಗೌರಿ ಮದುವೆ ಆದರು. ವಿವಾಹ ಆದ ಬಳಿಕವೂ ಗೌರಿ ತಮ್ಮ ಹೆಸರನ್ನು ಬದಲಿಸಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







