AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್​​ ವಿಡಿಯೋ ವೈರಲ್

ರಾಹುಲ್ ವೈದ್ಯ ಅವರು ವಿರಾಟ್ ಕೊಹ್ಲಿಯನ್ನು ಜೋಕರ್ ಎಂದು ಕರೆದಿದ್ದಾರೆ. ಅಲ್ಲದೆ ಅವರ ಅಭಿಮಾನಿಗಳನ್ನು ಅವರು ಹೀಯಾಳಿಸಿದ್ದರು. ಕೊಹ್ಲಿ ತಮ್ಮನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿದ್​ದಾರೆ ಎಂದಿದ್ದ ಅವರು, ಆ ಬಳಿಕ ಈ ರೀತಿಯ ಹೇಳಿಕೆ ನೀಡಿದ್ದರು. ಇದೀಗ, ಅನುಷ್ಕಾ ಶರ್ಮಾ ಅವರಿಗೆ ಹಾಡು ಹಾಡಿ ಕೈಗೆ ಕಿಸ್ ಮಾಡಿದ ರಾಹುಲ್ ವೈದ್ಯ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.

ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್​​ ವಿಡಿಯೋ ವೈರಲ್
ಅನುಷ್ಕಾ-ರಾಹುಲ್ ಹಾಗೂ ಕೊಹ್ಲಿ
ರಾಜೇಶ್ ದುಗ್ಗುಮನೆ
|

Updated on:May 08, 2025 | 7:40 AM

Share

ಗಾಯಕ ರಾಹುಲ್ ವೈದ್ಯ ಅವರು ಇತ್ತೀಚೆಗೆ ಸುದ್ದಿಯಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಜೋಕರ್ ಎಂದು ಕರೆದಿದ್ದು ಅಲ್ಲದೆ, ಅವರ ಅಭಿಮಾನಿಗಳನ್ನು ಹೀಯಾಳಿಸಿದ್ದರು. ಅಲ್ಲದೆ, ವಿರಾಟ್ ಕೊಹ್ಲಿ ಅವರು ತನ್ನನನ್ನು ಬ್ಲಾಕ್ ಮಾಡಿದ್ದಾಗಿ ಅವರು ಊರಿಡಿ ಹೇಳಿಕೊಂಡು ಬರುತ್ತಿದ್ದಾರೆ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನುಷ್ಕಾ ಶರ್ಮಾ (Anushka Sharma) ಅವರಿಗಾಗಿ ಹಾಡು ಹೇಳಿದ್ದ ರಾಹುಲ್ ವೈದ್ಯ, ಅವರ ಕೈಗೆ ಕಿಸ್ ಮಾಡಿದ್ದರು. ಈ ವಿಡಿಯೋನ ಈಗ ಮತ್ತೆ ವೈರಲ್ ಮಾಡಲಾಗುತ್ತಿದೆ. ಈ ಹಳೆಯ ವಿಡಿಯೋ ವಿರಾಟ್ ಅವರನ್ನು ಕೆರಳಿಸಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಈಗ ವೈರಲ್ ಆಗಿರೋ ವಿಡಿಯೋ ತುಂಬಾನೇ ಹಳೆಯದು. ಆಗ ಇನ್ನೂ ವಿರಾಟ್ ಹಾಗೂ ಅನುಷ್ಕಾ ವಿವಾಹ ಆಗಿರಲಿಲ್ಲ. ಆ ಸಂದರ್ಭದಲ್ಲಿ ರಾಹುಲ್ ವೈದ್ಯ ಅವರು ವೇದಿಕೆ ಮೇಲೆ ಅನುಷ್ಕಾ ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಹಾಡನ್ನು ಹಾಡಿದ್ದರು. ಆ ಬಳಿಕ ಕೈಗೆ ಕಿಸ್ ಮಾಡಿದ್ದರು. ಅನೇಕರು ಇದನ್ನು ಮೀಮ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ರಾಹುಲ್ ವೈದ್ಯನ ಬ್ಲಾಕ್ ಮಾಡಲು ಈ ಹಳೆಯ ವಿಡಿಯೋ ಕಾರಣ ಎಂದು ಫನ್ ಮಾಡಲಾಗುತ್ತಿದೆ.

ಇದನ್ನೂ ಓದಿ
Image
ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು
Image
‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
Image
ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್; ಉಘೇ ಎಂದ ಬಾಲಿವುಡ್
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ

ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಅವನೀತ್ ಕೌರ್ ಫೋಟೋನ ಲೈಕ್ ಮಾಡಿ ಸುದ್ದಿ ಆಗಿದ್ದರು. ಆ ಬಳಿಕ ಸ್ಪಷ್ಟನೆ ನೀಡಿದ್ದ ಕೊಹ್ಲಿ ಗ್ಲಿಚ್​​ನಿಂದ ಲೈಕ್ ಒತ್ತಿ ಹೋಗಿದೆ ಎಂದಿದ್ದರು. ಇದನ್ನು ರಾಹುಲ್ ವೈದ್ಯ ಅವರು ಟೀಕಿಸಿದ್ದರು. ‘ವಿರಾಟ್ ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ಅದು ಎಲ್ಲರಿಗೂ ಗೊತ್ತಿದೆ. ಬಹುಶಃ ಅದು ಇನ್​ಸ್ಟಾಗ್ರಾಮ್ ಗ್ಲಿಚ್ ಇರಬಹುದು’ ಎಂದಿದ್ದರು. ‘ಇನ್​ಸ್ಟಾಗ್ರಾಮ್ ವಿರಾಟ್​ ಕೊಹ್ಲಿಗೆ ನಿನ್ನ ಪರವಾಗಿ ನಾನು ರಾಹುಲ್ ವೈದ್ಯನ ಬ್ಲಾಕ್ ಮಾಡುತ್ತೀನಿ ಎಂದಿರಬಹುದು’ ಎಂದು ಟೀಕಿಸಿದ್ದರು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಕೋಡಂಗಿ… ಅವನ ಅಭಿಮಾನಿಗಳು ಅದಕ್ಕಿಂತ ದೊಡ್ಡ ಕೋಡಂಗಿಗಳು!

ಇದಾದ ಬಳಿಕ ರಾಹುಲ್ ಹೋದಲ್ಲಿ, ಬಂದಲ್ಲಿ ವಿರಾಟ್ ಕೊಹ್ಲಿಯನ್ನು ಟೀಕಿಸುತ್ತಲೇ ಬಂದಿದ್ದರು . ‘ನನ್ನ ಇನ್​ಸ್ಟಾಗ್ರಾಮ್ ಅಕೌಂಟ್​ನಿಂದ ಯಾವುದಾದರೂ ಫೋಟೋ ಲೈಕ್ ಆದರೆ ಅದನ್ನು ತಪ್ಪು ತಿಳಿದುಕೊಳ್ಳಬೇಡಿ. ಅದರ ಬಗ್ಗೆ ಪಿಆರ್​ ಕೆಲಸ ಮಾಡಬೇಡಿ. ಅದು ಇನ್​ಸ್ಟಾಗ್ರಾಮ್ ಸಮಸ್ಯೆ’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Thu, 8 May 25

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್