ಮೊದಲು 30 ಶೋ, ಈಗ 100ಕ್ಕೂ ಅಧಿಕ ಶೋಗಳಿವೆ: ‘418’ ಸಿನಿಮಾ ಬಗ್ಗೆ ಚೈತ್ರಾ ಆಚಾರ್ ಖುಷಿ
ನಟಿ ಚೈತ್ರಾ ಆಚಾರ್ ಅವರು ಅಭಿನಯಿಸಿರುವ ‘418’ ಸಿನಿಮಾ ಬಿಡುಗಡೆ ಆಗಿದೆ. ಹಾರರ್ ಕಥಾಹಂದರದ ಈ ಸಿನಿಮಾದ ಸುದ್ದಿಗೋಷ್ಠಿಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಡಲಾಯಿತು. ಈ ವೇಳೆ ಟಿವಿ9 ಜೊತೆ ಮಾತನಾಡಿದ ಚೈತ್ರಾ ಆಚಾರ್ ಅವರು ‘418’ ಸಿನಿಮಾ ಬಗ್ಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ.
ನಟಿ ಚೈತ್ರಾ ಆಚಾರ್ ಅವರು ಅಭಿನಯಿಸಿರುವ ‘418’ ಸಿನಿಮಾ ಬಿಡುಗಡೆ ಆಗಿದೆ. ಹಾರರ್ ಕಥಾಹಂದರದ ಈ ಸಿನಿಮಾದ ಸುದ್ದಿಗೋಷ್ಠಿಯನ್ನು ಬೆಂಗಳೂರಿನಲ್ಲಿ ಮಾಡಲಾಯಿತು. ಈ ವೇಳೆ ಟಿವಿ9 ಜೊತೆ ಮಾತನಾಡಿದ ಚೈತ್ರಾ ಆಚಾರ್ ಅವರು ‘418’ ಸಿನಿಮಾ ಬಗ್ಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ. ಇದು ತೆಲುಗಿನ ಸಿನಿಮಾ. ಕನ್ನಡಕ್ಕೂ ಡಬ್ ಆಗಿದೆ. ಈ ಸಿನಿಮಾದಲ್ಲಿ ಕನ್ನಡದ ಹಲವರು ಕೆಲಸ ಮಾಡಿದ್ದಾರೆ. ‘ಇದು ತುಂಬ ಖುಷಿಕೊಡುವ ವಿಷಯ. ಈ ಕಥೆಯನ್ನು ಕನ್ನಡಲ್ಲೇ ಮಾಡಬೇಕು ಅಂತ ಅಂದುಕೊಂಡಿದ್ದೆವು. ಆದರೆ ನಿರ್ಮಾಪಕರು ತೆಲುಗಿನವರಾದ ಕಾರಣದಿಂದ ಸಿನಿಮಾ ತೆಲುಗಿನಲ್ಲಿ ಆಯಿತು. ಎಲ್ಲ ಕಡೆಗಳಲ್ಲಿ ಸಿನಿಮಾಗೆ ಮೆಚ್ಚುಗೆ ಸಿಗುತ್ತಿದೆ. ಕರ್ನಾಟಕದಲ್ಲಿ ಕೇವಲ 30 ಶೋ ಇತ್ತು. ಈಗ 100ಕ್ಕೂ ಅಧಿಕ ಶೋಗಳು ಇವೆ. ಇದರಿಂದ ನಮಗೆ ಖುಷಿಯಾಗಿದೆ’ ಎಂದು ಚೈತ್ರಾ ಆಚಾರ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

