AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್ವುಡ್​ಗೆ ರಿಯಲ್ ಸ್ಟಾರ್ ಉಪ್ಪಿ ಮಗ ಆಯುಷ್ ಎಂಟ್ರಿ; ಯಶ್ ಸಿನಿಮಾ ಡೈರೆಕ್ಟರ್ ನಿರ್ದೇಶನ  

ಉಪೇಂದ್ರರ ಪುತ್ರ ಆಯುಷ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅವರ ಮೊದಲ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಂತ್ರಾಲಯದಲ್ಲಿ ನಡೆದಿದೆ. ಪುರುಷೋತ್ತಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವೇಣು ಗೋಪಾಲ್ ಛಾಯಾಗ್ರಹಣ ಮಾಡಲಿದ್ದಾರೆ. ಆಯುಷ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಫಿಟ್‌ನೆಸ್ ಮೇಲೆ ಗಮನ ಹರಿಸಿದ್ದಾರೆ.

ಸ್ಯಾಂಡಲ್ವುಡ್​ಗೆ ರಿಯಲ್ ಸ್ಟಾರ್ ಉಪ್ಪಿ ಮಗ ಆಯುಷ್ ಎಂಟ್ರಿ; ಯಶ್ ಸಿನಿಮಾ ಡೈರೆಕ್ಟರ್ ನಿರ್ದೇಶನ  
ಆಯುಷ್- ಉಪೇಂದ್ರ
ರಾಜೇಶ್ ದುಗ್ಗುಮನೆ
|

Updated on: May 12, 2025 | 1:39 PM

Share

ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಸಾಮಾನ್ಯ. ಸಾಕಷ್ಟು ಸಿದ್ಧತೆಗಳೊಂದಿಗೆ ಅವರು ನಟನೆಗೆ ಕಾಲಿಡುತ್ತಾರೆ. ಈಗ ಉಪೇಂದ್ರ ಅವರ ಮಗ ಆಯುಷ್ (Ayush) ಬಣ್ಣದ ಲೋಕಕ್ಕೆ ಕಾಲಿಡಲು ರೆಡಿ ಆಗಿದ್ದಾರೆ. ಉಪ್ಪಿ ಪುತ್ರನ ಹುಟ್ಟುಹಬ್ಬದ ದಿನದಂದು ಇಡೀ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದೆ. ಈ ವೇಳೆ ಆಯುಷ್ ಮೊದಲ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ ಎಂದು ವರದಿ ಆಗಿದೆ.

ಉಪೇಂದ್ರ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ದೇಶಕರಾಗಿ ಹೆಸರು ಮಾಡಿರೋ ಅವರು ಆ ಬಳಿಕ ಹೀರೋ ಆಗಿ ಮಿಂಚಿದರು. ಆಯುಷ್ ತಾಯಿ ಪ್ರಿಯಾಂಕಾ ಉಪೇಂದ್ರ ಕೂಡ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗ ಅವರು ತಮ್ಮ ಮಗನನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಲು ರೆಡಿ ಆಗಿದ್ದಾರೆ. ಈ ವಿಚಾರ ಉಪ್ಪಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ.

ಹಾಗಾದರೆ, ಈ ಚಿತ್ರಕ್ಕೆ ನಿರ್ದೇಶಕ ಯಾರು? ಆ ಮಾಹಿತಿ ಕೂಡ ಹೊರ ಬಿದ್ದಿದೆ. ಯಶ್ ಸಿನಿಮಾ ನಿರ್ದೇಶನ ಮಾಡಿದ ಡೈರೆಕ್ಟರ್ ಆಯುಷ್​ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಅವರು ಬೇರಾರೂ ಅಲ್ಲ, ಪುರುಷೋತ್ತಮ್. ಯಶ್ ಹಾಗೂ ಭಾಮಾ ಒಟ್ಟಾಗಿ ನಟಿಸಿದ್ದ ‘ಮೊದಲ ಸಲ’ ಚಿತ್ರವನ್ನು ಪುರುಷೋತ್ತಮ್ ಡೈರೆಕ್ಷನ್ ಮಾಡಿದ್ದರು. ಈಗ ಅವರು ಆಯುಷ್ ಮೊದಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಇದನ್ನೂ ಓದಿ
Image
‘ಸದಾ ಹೃದಯದಲ್ಲಿರುತ್ತೀರಿ’; ರಾಕೇಶ್ ಸಾವಿಗೆ ರಕ್ಷಿತಾ ಭಾವುಕ ಪೋಸ್ಟ್
Image
ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನೆಲ್ಲ ಆಯ್ತು? ವಿವರಿಸಿದ ಜಿಜಿ
Image
‘ಕಾಂತಾರ: ಚಾಪ್ಟರ್ 1’ ಶೂಟ್ ಮುಗಿಸಿ ಬಂದಿದ್ದ ರಾಕೇಶ್ ಪೂಜಾರಿ
Image
ವಿಧಿ ಕ್ರೂರ; ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ

ಆಯುಷ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಮಂತ್ರಾಲಯಕ್ಕೆ ಉಪ್ಪಿ ಕುಟುಂಬ ಹಾಗೂ ನಟಿ ತಾರಾ ಕುಟುಂಬ ಭೇಟಿ ನೀಡಿದೆ. ತಾರಾ ಪತಿ ವೇಣು ಗೋಪಾಲ್ ಉಪ್ಪಿ ಪುತ್ರನ ಮೊದಲ ಸಿನಿಮಾಗೆ ಛಾಯಾಗ್ರಹಣ ಮಾಡಲಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯಿಂದ ಉಪೇಂದ್ರ ಡಿಸ್ಚಾರ್ಜ್; ರಿಯಲ್ ಸ್ಟಾರ್​ಗೆ ಎದುರಾದ ಆರೋಗ್ಯ ಸಮಸ್ಯೆ ಏನು?

ಆಯುಷ್ ಅವರು ಯುವ ಹೀರೋ ಆಗಿದ್ದರಿಂದ, ನಾಯಕಿ ಆಗಿ ಯಾವ ಯುವ ನಟಿಯನ್ನು ಚಿತ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ. ಆಯುಷ್ ಅವರು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಜಿಮ್​ಗೆ ತೆರಳಿ ಫಿಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.