- Kannada News Photo gallery Rakshita Prem Emotional Post about Late Comedy Khiladigalu fame Rakesh Poojary
‘ನೀವು ಸದಾ ನಮ್ಮ ಹೃದಯದಲ್ಲಿರುತ್ತೀರಿ’; ರಾಕೇಶ್ ಪೂಜಾರಿ ಸಾವಿಗೆ ರಕ್ಷಿತಾ ಭಾವುಕ ಪೋಸ್ಟ್
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಅವರು ನಿಧನ ಹೊಂದಿದ್ದಾರೆ. ಅವರ ಸಾವು ಅನೇಕರಿಗೆ ಶಾಕ್ ತಂದಿದೆ. ಆಪ್ತ ವಲಯದವರ ಬಳಿ ಈ ಸುದ್ದಿಯನ್ನು ಒಪ್ಪಲಾಗುತ್ತಿಲ್ಲ. ಈಗ ಅವರ ಸಾವಿಗೆ ನಟಿ ರಕ್ಷಿತಾ ಪ್ರೇಮ್ ಅವರು ಕಂಬನಿ ಮಿಡಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
Updated on: May 12, 2025 | 9:00 AM

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಅವರು ಇಂದು (ಮೇ 12) ನಿಧನ ಹೊಂದಿದ್ದಾರೆ. ಅವರಿಗೆ ಹೃದಯಘಾತ ಆಯಿತು. ಅವರು ಈ ವೇಳೆ ನಿಟ್ಟೆಯಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಅವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ.

ರಾಕೇಶ್ ಅವರಿಗೆ ಈಗ ಕೇವಲ 33 ವರ್ಷ ವಯಸ್ಸಾಗಿತ್ತು. ರಾಕೇಶ್ ಅವರು ಈಗ ಅಮ್ಮ ಮತ್ತು ತಂಗಿಯನ್ನು ಅಗಲಿದ್ದಾರೆ. ಇಡೀ ಮನೆಯ ಜವಾಬ್ದಾರಿ ಅವರ ಬಳಿಯೇ ಇತ್ತು. ಆದರೆ, ಈಗ ಅವರೇ ಇಲ್ಲದಂತೆ ಆಗಿದೆ. ಇದು ನಿಜಕ್ಕೂ ಶಾಕಿಂಗ್ ಸುದ್ದಿ.

ರಾಕೇಶ್ ಅವರು ‘ಕಾಮಿಡಿ ಕಿಲಾಡಿಗಳು ಸೀಸನ್ 3’ನ ಭಾಗ ಆಗಿದ್ದರು. ಅವರು ಇದರ ವಿನ್ನರ್ ಕೂಡ ಆದರು. ಇದರ ಜಡ್ಜ್ ಸ್ಥಾನದಲ್ಲಿ ರಕ್ಷಿತಾ ಪ್ರೇಮ್ ಇದ್ದರು. ಹೀಗಾಗಿ, ಅವರ ಜೊತೆ ರಾಕೇಶ್ಗೆ ಒಳ್ಳೆಯ ಬಾಂಧವ್ಯ ಬೆಳೆಯಿತು.

ರಾಕೇಶ್ ನಿಧನಕ್ಕೆ ರಕ್ಷಿತಾ ಪ್ರೇಮ್ ಕಂಬನಿ ಮಿಡಿದಿದ್ದಾರೆ. ‘ರಾಕೇಶ್ ಬಳಿ ಇನ್ಯಾವಗಲೂ ಮಾತನಾಡಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಕಾಮಿಡಿ ಕಿಲಾಡಿಗಳು ನನ್ನ ಹೃದಯಕ್ಕೆ ಹತ್ತಿರವಾದ ಶೋ. ಈ ಶೋನ ಸ್ಪರ್ಧಿ ರಾಕೇಶ್ ಒಳ್ಳೆಯ ವ್ಯಕ್ತಿ ಆಗಿ ಕಾಣಿಸಿದ್ದರು’ ಎಂದಿದ್ದಾರೆ ಅವರು.

‘ರಾಕೇಶ್ ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ನಿಮ್ಮನ್ನು ಹಾಗೂ ನಿಮ್ಮ ನಗುವನ್ನು ನಾವು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಅವರು ಬರೆದುಕೊಂಡಿದ್ದಾರೆ. ರಕ್ಷಿತಾ ಅವರು ಮಾಡಿರೋ ಪೋಸ್ಟ್ ವೈರಲ್ ಆಗಿದೆ.




