ರಾಕೇಶ್ ಪೂಜಾರಿಯನ್ನು ಕಳೆದುಕೊಂಡ ತಾಯಿಯ ವೇದನೆ ಎಣಿಕೆಗೆ ಸಿಗಲಾರದು
ರಾಕೇಶ್ ಪೂಜಾರಿ ಕೇವಲ 33 ವರ್ಷ ವಯಸ್ಸಾಗಿತ್ತು, ಮನೆಯ ಜವಾಬ್ದಾರಿಯೆಲ್ಲ ಅವರ ಮೇಲಿತ್ತು ಮತ್ತು ಅದನ್ನು ಅವರು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ರಾಕೇಶ್ ಒಬ್ಬ ಕಮೇಡಿಯನ್, ನಟ ಆಗಿದ್ದರ ಜೊತೆಗೆ ಒಳ್ಳೆಯ ವ್ಯಕ್ತಿ ಕೂಡ ಆಗಿದ್ದರು. ಅವರ ಸ್ನೇಹಿತರು ರಾಕೇಶ್ ಒಳ್ಳೆಯತನ ಬಗ್ಗೆ, ಸ್ನೇಹಿತರ ವಿಷಯದಲ್ಲಿ ಅವರಲ್ಲಿದ್ದ ಭಾವನೆಗಳ ಬಗ್ಗೆ ಮಾತಾಡಿದ್ದಾರೆ.
ಉಡುಪಿ, ಮೇ 24: ಪುತ್ರ ಶೋಕ ನಿರಂತರ ಅಂತ ಹೇಳೋದು ನಿಜ. ತಂದೆ ತಾಯಿಗಳು (parents) ತಮ್ಮ ಮಕ್ಕಳು ಸಾಯುವುದನ್ನು ನೋಡಲಾರರು. ಎಷ್ಟೇ ಕಠೋರ ಮನಸ್ಸಿನವನಾಗಿದ್ದರೂ ತಮಗಿಂತ ಮೊದಲು ಮಕ್ಕಳು ಸಾಯುವುದನ್ನು ಇಷ್ಟಪಡಲಾರು, ನಿನ್ನೆ ರಾತ್ರಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ನಟ ಮತ್ತು ರಿಯಾಲಿಟಿ ಶೋ ವಿಜೇತ ರಾಕೇಶ್ ಪೂಜಾರಿಯವರ ತಾಯಿಯ ವೇದನೆ ಅವರು ಪಡುತ್ತಿರುವ ಸಂಕಟ ನೋಡಿದರೆ ಎಂಥವರಿಗೂ ಕರುಳು ಕಿತ್ತು ಬರುತ್ತದೆ. ಅವರಿಗೆ ಒಬ್ಬ ಮಗ ಒಬ್ಬ ಮಗಳು, ಕುಟುಂಬವನ್ನು ರಾಕೇಶ್ ನಡೆಸುತ್ತಿದ್ದರು. ಮಗನನ್ನು ಕಳೆದುಕೊಂಡ ಬಾಳು ಇನ್ನು ಬರುಡು ಅಂತ ತಾಯಿಗೆ ಅನಿಸುತ್ತಿರುತ್ತದೆ.
ಇದನ್ನು ಓದಿ: ‘ನೀವು ಸದಾ ನಮ್ಮ ಹೃದಯದಲ್ಲಿರುತ್ತೀರಿ’; ರಾಕೇಶ್ ಪೂಜಾರಿ ಸಾವಿಗೆ ರಕ್ಷಿತಾ ಭಾವುಕ ಪೋಸ್ಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ