ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ಹೃದಯಾಘಾತದಿಂದ ನಿಧನರಾದ ನಟ ರಾಕೇಶ್ ಪೂಜಾರಿ ಅವರ ಅಂತಿಮ ದರ್ಶನ ಪಡೆಯಲು ನಟಿ ರಕ್ಷಿತಾ ಪ್ರೇಮ್ ಆಗಮಿಸಿದ್ದಾರೆ. ಈ ವೇಳೆ ಅವರು ಕಂಬನಿ ಮಿಡಿದರು. ರಾಕೇಶ್ ಪೂಜಾರಿ ಅವರು ‘ಕಾಮಿಡಿ ಕಿಲಾಡಿಗಳು ಸೀಸನ್ 3’ ಶೋ ವಿನ್ ಆಗಿದ್ದರು. ಅವರಿಗೆ ಚಿತ್ರರಂಗದ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿನ್ನರ್ ಆಗಿದ್ದ ರಾಕೇಶ್ ಪೂಜಾರಿ (Rakesh Poojari) ಅವರು ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಚಿತ್ರರಂಗದ ಅನೇಕರು ಆಗಮಿಸಿದ್ದಾರೆ. ಕಿರುತೆರೆ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ರಾಕೇಶ್ ಪೂಜಾರಿ ಅವರು ಬ್ಯುಸಿ ಆಗಿದ್ದಾರೆ. ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಶೋ ಮೂಲಕ ಅವರು ಮನೆಮಾತಾಗಿದ್ದರು. ಈ ಶೋನ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ (Rakshita Prem) ಅವರು ಉಡುಪಿಗೆ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಅವರು ಕಣ್ಣೀರು ಸುರಿಸಿದರು. ರಾಕೇಶ್ ಅವರ ಪ್ರತಿಭೆಯನ್ನು ರಕ್ಷಿತಾ ಹೊಗಳುತ್ತಿದ್ದರು. ಅಂಥ ಕಲಾವಿದನ ಅಗಲಿಕೆಗೆ ಅವರು ಈಗ ಕಂಬನಿ ಮಿಡಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos