ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
‘ಕಾಂತಾರ’ ಪ್ರೀಕ್ವೆಲ್ನಲ್ಲಿ ರಾಕೇಶ್ ಪೂಜಾರಿ ಅವರು ನಟಿಸುತ್ತಿದ್ದರು. ‘ರಾಕೇಶ್ ಬಗ್ಗೆ ಯಾರಿಗೂ ಹೊಟ್ಟೆಕಿಚ್ಚು ಇರಲಿಲ್ಲ. ಎಲ್ಲರಿಗೂ ಅವರು ಮುದ್ದಿನ ಕಂದನಾಗಿದ್ದರು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಅವರಿಗೆ ಅವಕಾಶ ಸಿಕ್ಕರೆ ಎಲ್ಲರೂ ಖುಷಿಪಡುತ್ತಿದ್ದರು’ ಎಂದು ಗೋವಿಂದೇ ಗೌಡ ಹೇಳಿದ್ದಾರೆ.
ಕಾಮಿಡಿ ಕಿಲಾಡಿಗಳು (Comedy Khiladigalu) ಖ್ಯಾತಿಯ ನಟ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಘಟನೆಯಿಂದ ಇಡೀ ಚಿತ್ರತಂಡಕ್ಕೆ ಶಾಕ್ ಆಗಿದೆ. ರಾಕೇಶ್ ಪೂಜಾರಿ (Rakesh Poojari) ಜೊತೆ ನಟ ಗೋವಿಂದೇ ಗೌಡ ಅವರು ಆಪ್ತರಾಗಿದ್ದಾರೆ. ಅಗಲಿದ ಗೆಳೆಯನ ಬಗ್ಗೆ ಗೋವಿಂದೇ ಗೌಡ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾವೆಲ್ಲ ಒಟ್ಟಿಗೆ ಇದ್ದವರು. ಕಲಾವಿದನಾಗಿ ಹಾಗೂ ವ್ಯಕ್ತಿಯಾಗಿ ಇಷ್ಟ ಆಗುತ್ತಿದ್ದರು. ನಮ್ಮ ಕುಟುಂಬದ ಸದಸ್ಯನ ರೀತಿ ಇದ್ದರು. ಅಂಥ ವ್ಯಕ್ತಿ ಸಿಗುವುದು ಕಷ್ಟ. ಅವರ ಸ್ನೇಹ ನಮಗೆ ಸಿಕ್ಕಿದ್ದು ಅದೃಷ್ಟ. ಅವರ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ’ ಎಂದು ಗೋವಿಂದೇ ಗೌಡ (Govinde Gowda) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos