ರಾಕೇಶ್ ಪೂಜಾರಿಗೆ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿ ಅವರ ನಿಧನ ವಾರ್ತೆ ಎಲ್ಲರಿಗೂ ಶಾಕ್ ತರಿಸಿದೆ. ಅವರ ಆಪ್ತೆ ಎನಿಸಿಕೊಂಡಿದ್ದ ದಿವ್ಯಾ ಅವರು ರಾಕೇಶ್ ಪೂಜಾರಿ ಬಗ್ಗೆ ಹಾಗೂ ಅವರ ಕರಿಯರ್ ಬಗ್ಗೆ ಮತ್ತು ಅವರ ಜೊತೆಗಿನ ಆಪ್ತತೆ ಬಗ್ಗೆ ಮಾತನಾಡಿದ್ದಾರೆ. ಇದನ್ನು ಹೇಳುವಾಗ ಅವರು ಕಣ್ಣೀರು ಹಾಕಿದ್ದಾರೆ.
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ದಿವ್ಯಾ (Divya) ಅವರು ರಾಕೇಶ್ ಪೂಜಾರಿ ಸಾವಿನ ಬಗ್ಗೆ ಮಾತನಾಡಿದ್ದಾರೆ. ‘ನಾನು ತುಂಬಾನೇ ಭಾವುಕನಾಗಿರುತ್ತಿದ್ದೇನೆ. ಅವನ ಜೊತೆ ಅಷ್ಟು ಒಳ್ಳೆಯ ಒಡನಾಟ ಇತ್ತು. ಅನೀಶ್ ಅವರ ದಸ್ಕತ್ ಸಿನಿಮಾ ಬಂತು. ನನ್ನ ಮಗುನ ಕಾಲಿನ ಮೇಲೆ ಕೂರಿಸಿಕೊಂಡು ಇಡೀ ಸಿನಿಮಾ ನೋಡಿದ್ದಾನೆ. ಕಾಂತಾರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದಕ್ಕಾಗಿ ಬೇರೆ ಗೆಟಪ್ ಮಾಡಿಕೊಂಡಿದ್ದ. ಒಳ್ಳೆಯ ವ್ಯಕ್ತಿ. ಈ ಸುದ್ದಿಯನ್ನು ತಾಯಿ ಹೇಗೆ ಸಹಿಸಿಕೊಳ್ಳುತ್ತಾರೆ ಅನ್ನೋದು ಗೊತ್ತಿಲ್ಲ. ತಂಗಿಯ ಮದುವೆ ಆದಮೇಲೆ ನಾನು ಆಗ್ತೀನಿ ಎಂದಿದ್ದ’ ಎಂದು ಹಳೆಯ ಘಟನೆಯನ್ನು ಅವರು ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos