ಪಿಸ್ಟಲ್ ಹಿಡಿದು ಬೆಳಗಿನ ಜಾವ ಪಬ್ ನುಗ್ಗಿದ ಅಗಂತುಕ ಇಷ್ಟ್ಹೊತ್ತಾದರೂ ನಾಪತ್ತೆ, ಪೊಲೀಸರು ಕ್ಲೂಲೆಸ್!
ನಮ್ಮ ವರದಿಗಾರ ಹೇಳುವ ಪ್ರಕಾರ ಸುಮಾರು 50 ಪೊಲೀಸ್ ಸಿಬ್ಬಂದಿ ಪಬ್ಬನ್ನು ಘೇರಾವ್ ಮಾಡಿದ್ದಾರೆ. ಅಷ್ಟೆಲ್ಲ ಸಿಬ್ಬಂದಿ ಮತ್ತು ಡಿ-ಎಸ್ ಡಬ್ಲ್ಯೂ ಎ ಟಿ ಪಡೆ ಹುಡುಕುತ್ತಿದ್ದರೂ ಅವನು ಸಿಕ್ಕಿಲ್ಲವೆಂದರೆ, ಆಗಂತುಕ ಅಲ್ಲಿಲ್ಲ ಅಂತ ಕಾಣುತ್ತೆ, ಅಲ್ಲಿಂದ ಪರಾರಿಯಾಗಿರಬಹುದು. ಪಬ್ ಮುಚ್ಚುವ ಹಂತದಲ್ಲಿದ್ದ ಕಾರಣ ಸಿಸಿಟಿವಿ ಕೆಮೆರಾಗಳನ್ನು ಆಫ್ ಮಾಡಲಾಗಿತ್ತಂತೆ.
ಬೆಂಗಳೂರು, ಮೇ 12: ಕದನವಿರಾಮದ ಹೊರತಾಗಿಯೂ ಪಾಕಿಸ್ತಾನ ಪದೇಪದೆ ಅದರ ಉಲ್ಲಂಘನೆ ಮಾಡುತ್ತಿರೋದು ಗಡಿಯ ಜೊತೆ ದೇಶದ ಇತರ ಭಾಗಗಳಲ್ಲೂ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ. ಇಂಥ ಪರಿಸ್ಥಿಯಲ್ಲಿ ಇಂದು ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಆಗಂತುಕನೊಬ್ಬ ಪಿಸ್ಟಲ್ (pistol) ಕೈಯಲ್ಲಿ ಹಿಡಿದು ನಗರದ ರಾಜಾಜಿನಗರದಲ್ಲಿರುವ ಪಬ್ಬೊಂದನ್ನು ಪ್ರವೇಶಿಸಿದ್ದಾನೆ. ಕೂಡಲೇ ಪೊಲೀಸರಿಗೆ ಅಲರ್ಟ್ ಮಾಡಲಾಗಿದೆ ಮತ್ತು ಏರಿಯಾದಲ್ಲಿ ಉದ್ವಿಗ್ನ ಸ್ಥಿತಿಯನ್ನು ಉಂಟು ಮಾಡಿರುವ ಅಗುಂತಕನನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಅವನು ಪಬ್ನಲ್ಲಿ ಅಡಗಿ ಕೂತಿರುವ ಸಾಧ್ಯತೆ ಇದೆಯೆಂದು ಪೊಲೀಸರು ಹೇಳುತ್ತಿದ್ದಾರೆ. ಡಿ-ಎಸ್ ಡಬ್ಲ್ಯೂ ಎ ಪಡೆ ಸಹ ಸ್ಥಳದಲ್ಲಿದೆ.
ಇದನ್ನು ಓದಿ: ಬೆಂಗಳೂರಿನಲ್ಲಿ ತಡರಾತ್ರಿ 1 ಗಂಟೆ ವರೆಗೆ ಪಬ್ ತೆರೆಯಲು ಅವಕಾಶ: ಡಿಕೆ ಶಿವಕುಮಾರ್ ಭರವಸೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ