ರಾಕೇಶ್ ಪೂಜಾರಿ ಹೃದಯಾಘಾತಕ್ಕೊಳಗಾಗುವ ಮುನ್ನ ಮೆಹಂದಿ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ವಿಡಿಯೋ ಲಭ್ಯ
ವಿಡಿಯೋದಲ್ಲಿ ರಾಕೇಶ್ ಪೂಜಾರಿಯವರನ್ನು ಸಂಪೂರ್ಣವಾಗಿ ನೋಡಲಾಗಲ್ಲ. ಅವರು ಒಮ್ಮೆ ಎದೆ ಮುಟ್ಟಿಕೊಳ್ಳುವುದು ಕಾಣುತ್ತದೆ. ಆದರೆ ಹಾಗೆ ಮಾಡುವಾಗ ಅವರ ಮುಖದಲ್ಲಿ ಮುಗುಳ್ನಗು ಸಹ ಕಾಣುತ್ತದೆ. ಅಂದರೆ ಅವರು ಎದೆನೋವನ್ನು ಇಗ್ನೋರ್ ಮಾಡಿದ್ದಾರೆ. ಆರೋಗ್ಯವಂತರು ಮತ್ತು ಅವಿವಾಹಿತರಾಗಿದ್ದ ರಾಕೇಶ್ ಅವರನ್ನು ಕಾಯಿಲೆಗಳ್ಯಾವೂ ಕಾಡುತ್ತಿರಲಿಲ್ಲ.
ಉಡುಪಿ, ಮೇ 12: ಕಾಮಿಡಿ ಕಿಲಾಡಿಗಳು ಸೀಸನ್ 3 (Comedy Khiladigalu Season 3) ಗೆದ್ದು ಕನ್ನಡನಾಡಲ್ಲಿ ಮನೆ ಮಾತಾಗಿದ್ದ ರಾಕೇಶ್ ಪೂಜಾರಿ ಅವರು ಹೃದಯಾಘತಕ್ಕೊಳಗಾಗುವ ಮೊದಲು ಕಾರ್ಕಳ ಬಳಿಯಿರುವ ನಿಟ್ಟೆಯಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದರು ಎಂದು ವರದಿಯಾಗಿದ್ದು ಎಲ್ಲರಿಗೂ ಗೊತ್ತಿದೆ. ಆ ವಿಡಿಯೋ ನಮಗೆ ಸಿಕ್ಕಿದೆ. ಇದೇ ಕಾರ್ಯಕ್ರಮದ ಫೋಟೋವೊಂದನ್ನು ಅವರು ತಮ್ಮ ಇನ್ಸ್ಟಾ ಅಕೌಂಟ್ ನಲ್ಲಿ ಶೇರ್ ಮಾಡಿದ್ದು ಅದು ವೈರಲ್ ಆಗುತ್ತಿದೆ. ಕೇವಲ 33ರ ಪ್ರಾಯದ ರಾಕೇಶ್ ಪೂಜಾರಿ ಹೃದಯಾಘಾಗತಕ್ಕೊಳಗಾಗಿದ್ದು ಆಘಾತಕಾರಿ ಸಂಗತಿ.
ಇದನ್ನು ಓದಿ: ತಂಗಿಯ ಜೊತೆ ರಾಕೇಶ್ ಪೂಜಾರಿ ಕೊನೆಯ ರೀಲ್ಸ್ ನೋಡಿ; ಎಷ್ಟು ಖುಷಿಯಾಗಿದ್ರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: May 12, 2025 12:36 PM