AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​

VIDEO: ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​

ಝಾಹಿರ್ ಯೂಸುಫ್
|

Updated on:May 12, 2025 | 11:32 AM

Share

Bangladesh A vs New Zealand A: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಎ ತಂಡವು 50 ಓವರ್​ಗಳಲ್ಲಿ 226 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಎ ತಂಡವು 48.2 ಓವರ್​ಗಳಲ್ಲಿ 231 ರನ್ ಬಾರಿಸಿದೆ. ಈ ಮೂಲಕ ಕಿವೀಸ್ ಪಡೆ 4 ವಿಕೆಟ್​ಗಳ ಜಯ ಸಾಧಿಸಿದೆ.

ಬಾಂಗ್ಲಾದೇಶ್ ಎ ಹಾಗೂ ನ್ಯೂಝಿಲೆಂಡ್ ಎ ತಂಡಗಳ ನಡುವಣ ಪಂದ್ಯದ ವೇಳೆ ವಿಕೆಟ್ ಕೀಪರ್ ಮಾಡಿದ ಮಹಾ ಎಡವಟ್ಟಿನ ವಿಡಿಯೋವೊಂದು ವೈರಲ್ ಆಗಿದೆ. ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಎ ತಂಡವು 50 ಓವರ್​ಗಳಲ್ಲಿ 226 ರನ್ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಎ ತಂಡವು 4 ಓವರ್‌ಗಳಲ್ಲಿ 35 ರನ್ ಕಲೆಹಾಕಿತು. 5ನೇ ಓವರ್​ನಲ್ಲಿ ಇಬಾದತ್ ಹೊಸೈನ್ ದಾಳಿಗೆ ಇಳಿದಿದ್ದರು. ಈ ವೇಳೆ ಬಾಂಗ್ಲಾದೇಶ್ ಎ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ನೂರುಲ್ ಹಸನ್ ವಿಕೆಟ್ ಹಿಂದೆ ನಿಲ್ಲುವುದು ಬಿಟ್ಟು ಮೊದಲ ಸ್ಲಿಪ್​ ಸ್ಥಾನದತ್ತ ನಿಂತರು. ಆದರೆ ಅದಕ್ಕೂ ಮುನ್ನ ಅವರು ವಿಕೆಟ್ ಹಿಂದೆ ತಮ್ಮ ಹೆಲ್ಮೆಟ್ ಇರಿಸಿರುವುದನ್ನು ಮರೆತಿದ್ದಾರೆ.

ಇತ್ತ ಇಬಾದತ್ ಹೊಸೈನ್ ಎಸೆದ ಚೆಂಡನ್ನು ಡೇಲ್ ಫಿಲಿಪ್ಸ್ ಬಿಟ್ಟಿದ್ದಾರೆ. ಅತ್ತ ವಿಕೆಟ್ ಹಿಂದೆ ಕೀಪರ್ ಇಲ್ಲದಿದ್ದರಿಂದ ಚೆಂಡು ನೇರವಾಗಿ ಹೋಗಿ ಹೆಲ್ಮೆಟ್​ಗೆ ಬಡಿದಿದೆ. ಐಸಿಸಿ ನಿಯಮದ ಪ್ರಕಾರ, ಮೈದಾನದಲ್ಲಿರುವ ಹೆಲ್ಮೆಟ್‌ಗೆ ಚೆಂಡು ತಗುಲಿದರೆ ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡಬೇಕು. ಅದರಂತೆ ನ್ಯೂಝಿಲೆಂಡ್ ತಂಡಕ್ಕೆ ಹೆಚ್ಚುವರಿಯಾಗಿ 5 ರನ್​ಗಳು ಲಭಿಸಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಬಾಂಗ್ಲಾದೇಶ್ ಎ ತಂಡದ ನಾಯಕ ನೂರಲ್ ಹಸನ್ ಟ್ರೋಲ್ ಆಗುತ್ತಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಎ ತಂಡವು 50 ಓವರ್​ಗಳಲ್ಲಿ 226 ರನ್​ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಎ ತಂಡವು 48.2 ಓವರ್​ಗಳಲ್ಲಿ 231 ರನ್ ಬಾರಿಸಿದೆ. ಈ ಮೂಲಕ ಕಿವೀಸ್ ಪಡೆ 4 ವಿಕೆಟ್​ಗಳ ಜಯ ಸಾಧಿಸಿದೆ.

 

Published on: May 12, 2025 11:30 AM