India-Pakistan War Updates: ಸೇನೆಯಿಂದ ಬುಲಾವ್, 7-ದಿನದ ಹಸುಳೆಯನ್ನು ಬಿಟ್ಟು ದೇಶಸೇವೆಗೆ ಹೊರಟ ಕಲಬುರಗಿ ಯೋಧ
ಬೀದರ್ ಜಿಲ್ಲೆ ಚಂದಾಪುರ ಗ್ರಾಮದ ಬಸವಕಿರಣ್ ತಂಗಿಯ ಮದುವೆ ಅಂತ ಬಂದಿದ್ದರು, ಹಾಗೆಯೇ ಮಂಡ್ಯದ ರಾಘವೇಂದ್ರ ಅವರು ಮಂಡ್ಯದಲ್ಲಿ ತಾವು ಕಟ್ಟಿಸಿದ ನೂತನ ಮನೆಯ ಪ್ರವೇಶಕ್ಕೆ ರಜೆ ಹಾಕಿ ಬಂದಿದ್ದರು, ಮಹಾರಾಷ್ಟ್ರದ ಮನೋಜ್ ಜ್ಞಾನೇಶ್ವರ್ ಪಾಟೀಲ್ ಅವರ ಮದುವೆ ಮೇ 5 ರಂದು ನಡೆಯಿತು, ಆದರೆ ಮೇ 8ಕ್ಕೆ ಅವರಿಗೆ ಬುಲಾವ್ ಬಂತು. ನಮ್ಮ ಸೈನಿಕರ ನಿಷ್ಠೆ, ಕರ್ತವ್ಯಬದ್ಧತೆಗೊಂದು ಸಲಾಂ.
ಬೆಂಗಳೂರು, ಮೇ 12: ದೇಶ ರಕ್ಷಣೆಯ ಕರೆಗಿಂತ ಮಿಗಿಲಾದದ್ದು ಮತ್ತೊಂದಿಲ್ಲ ನಮ್ಮ ಸೈನಿಕರಿಗೆ. ಬೇರೆ ಬೇರೆ ಕಾರಣಗಳಿಂದಾಗಿ ರಜೆ ಪಡೆದು ಸ್ವಂತ ಊರಿಗೆ ಮರಳಿದ್ದ ಯೋಧರು ಪಾಕಿಸ್ತಾನದ ಜೊತೆ ಯುದ್ಧ ಆರಂಭವಾಗುವ ಸೂಚನೆ ಹಿನ್ನೆಲೆಯಲ್ಲಿ ವಾಪಸ್ಸು ಬರುವಂತೆ ಮೇಲಧಿಕಾರಿಗಳಿಂದ ಕರೆಬಂದು ಕೂಡಲೇ ತಾವು ಊರಿಗೆ ಬಂದಿದ್ದ ಉದ್ದೇಶಗಳನ್ನು ಬದಿಗೊತ್ತಿ ತಮ್ಮ ಕರ್ತವ್ಯದ ಸ್ಥಳಗಳಿಗೆ ವಾಪಸ್ಸು ಹೋಗುತ್ತಿದ್ದಾರೆ. ಕಲಬುರಗಿಯ ಧುತ್ತರ್ ಗಾಂವ್ ಗ್ರಾಮದ ಹಣಮಂತರಾಯ ತಮ್ಮ 7-ದಿನದ ಹಸುಳೆ ಮತ್ತು ಬಾಣಂತಿ ಪತ್ನಿಯನ್ನು ಊರಲ್ಲಿ ಬಿಟ್ಟು ಶ್ರೀನಗರಕ್ಕೆ ತೆರಳಿದರು, ವಿಜಯಪುರ ಬಬಲೇಶ್ವರ ಕ್ಷೇತ್ರದ ಸಿದ್ದಪ್ಪ ಬಿಎಸ್ಎಫ್ ನಲ್ಲಿ ಕೆಲಸ ಮಾಡುತ್ತಿದ್ದು ಅವರು ಕೂಡ ಇದೇ ಟ್ರೈನಲ್ಲಿ ವಾಪಸ್ಸು ಹೋದರು.
ಇದನ್ನು ಓದಿ: ಪಾಕಿಸ್ತಾನದ ಬಳಿ ಪ್ರಬಲ ಡಿಫೆನ್ಸ್ ಸಿಸ್ಟಂ ಇದ್ದರೂ ವಿಫಲವಾಗಿದ್ದು ಹೇಗೆ? ಭಾರತದ ತಂತ್ರ, ಜಾಣ್ಮೆ ಬಿಚ್ಚಿಟ್ಟ ಜಾನ್ ಸ್ಪೆನ್ಸರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ