ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು, ಮೋದಿ ಜೊತೆ ನಾವಿದ್ದೇವೆ; ಎಂ.ಬಿ. ಪಾಟೀಲ್
ಕಾಶ್ಮೀರದಲ್ಲಿ ಮತ್ತೆ ಪ್ರವಾಸೋದ್ಯಮ ಆರಂಭವಾಗಬೇಕು. ಪೆಹಲ್ಗಾಮ್ ಭಾರತದ ಸ್ವಿಟ್ಜರ್ಲೆಂಡ್. ಮತ್ತೆ ಅಲ್ಲಿ ಪ್ರವಾಸೋದ್ಯಮ ಶುರುವಾಗಬೇಕು. ಅದಕ್ಕೆ ಸೂಕ್ತ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಪೆಹಲ್ಗಾಮ್ ಘಟನೆ ಖಂಡಿಸಬೇಕು. ಉಗ್ರರು ಮಾಡಿದ್ದು ಹೇಡಿತನದ ಕೃತ್ಯ. ಹುಡುಕಿ ಹುಡುಕಿ ಉಗ್ರರನ್ನ ಕೊಲ್ಲಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಬೇಕು ಎಂದು ವಿಜಯಪುರ ನಗರದಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರ, ಏಪ್ರಿಲ್ 29: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ (Pahalgam Terror Attack) ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನ ಒಂದು ದರಿದ್ರ ದೇಶ. ಅದಕ್ಕೆ ಬೇರೆ ಕೆಲಸ ಇಲ್ಲ. ಅವರ ದೇಶದಲ್ಲೇ ಅವರ ಪರಿಸ್ಥಿತಿ ಹೀನಾಯವಾಗಿದೆ. ಯುದ್ಧಕ್ಕೆ ಹೆದರಿ ಪಾಕಿಸ್ತಾನದ ಸೈನಿಕರು, ಅಧಿಕಾರಿಗಳು ಓಡಿ ಹೋಗಿದ್ದಾರೆ. ಪಹಲ್ಗಾಮ್ ಘಟನೆ ಹೇಡಿಗಳ ಕೃತ್ಯ, ಹೇಯ ಕೃತ್ಯ. ಈಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಈ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ. ಕೇಂದ್ರ ಸರ್ಕಾರದ ಜೊತೆಗೆ, ಮೋದಿ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳಿವೆ. ಯುದ್ಧ ಬಹಳ ಎಚ್ಚರಿಕೆಯಿಂದ, ಪರಿಣಾಮಕಾರಿಯಾಗಿ ಆಗಬೇಕು ಎಂದು ಎಂ.ಬಿ. ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ಸೂಕ್ತ ಸೇನೆ ಪೊಲೀಸ್ ವ್ಯವಸ್ಥೆ ಬೇಕು. ಆಯಕಟ್ಟಿನ ಜಾಗದಲ್ಲಿ ಸೇನೆಯನ್ನು ನೇಮಿಸಬೇಕು. ಕಾಶ್ಮೀರದಲ್ಲಿ ಮತ್ತೆ ಪ್ರವಾಸೋದ್ಯಮ ಆರಂಭವಾಗಬೇಕು. ಪೆಹಲ್ಗಾಮ್ ಭಾರತದ ಸ್ವಿಟ್ಜರ್ಲೆಂಡ್. ಮತ್ತೆ ಅಲ್ಲಿ ಪ್ರವಾಸೋದ್ಯಮ ಶುರುವಾಗಬೇಕು. ಅದಕ್ಕೆ ಸೂಕ್ತ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಮಾನವೀಯತೆಯಲ್ಲಿ ನಂಬಿಕೆ ಇಟ್ಟವರು ಪೆಹಲ್ಗಾಮ್ ಘಟನೆ ಖಂಡಿಸಬೇಕು. ಉಗ್ರರು ಮಾಡಿದ್ದು ಹೇಡಿತನದ ಕೃತ್ಯ. ಹುಡುಕಿ ಹುಡುಕಿ ಉಗ್ರರನ್ನ ಕೊಲ್ಲಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಬೇಕು. ಕಾಶ್ಮೀರದಲ್ಲಿಯೂ ಪಾಕಿಸ್ತಾನಕ್ಕೆ ಬೆಂಬಲ ಇಲ್ಲ. ಕಾಶ್ಮೀರಿಗಳು ಭಾರತದ ಪರ, ಶಾಂತಿಯ ಕಡೆಗೆ ಇದ್ದಾರೆ. ಟೂರಿಸಂ ಡೆವಲಪ್ಮೆಂಟ್ ಆದ ಮೇಲೆ ಉಗ್ರರಿಗೆ ನೋಡಲು ಆಗಿಲ್ಲ. ಅದನ್ನು ಕೆಡಿಸಬೇಕೆಂದೇ ಈ ದಾಳಿ ನಡೆಸಿದ್ದಾರೆ ಎಂದು ವಿಜಯಪುರ ನಗರದಲ್ಲಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
