Bengaluru: ರಾಜಾಜಿನಗರದಲ್ಲಿ ಪಿಸ್ತೂಲ್ ಹಿಡಿದು ಪಬ್ಗೆ ನುಗ್ಗಿದ ಅಪರಿಚಿತ ವ್ಯಕ್ತಿ
ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಪಬ್ಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಎಲ್ಲೆಡೆ ಓಡಾಡುತ್ತಿದ್ದ, ಏಕಾಏಕಿ ರಾಜಾಜಿನಗರದಲ್ಲಿರುವ ಜಾಮಿಟ್ರಿ ಪಬ್ಗೆ ಬಂದಿದ್ದಾರೆ. ಪೊಲೀಸ್, ಬಾಂಬ್ ಸ್ಕ್ವಾಡ್ ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಆತ ಯಾರು, ಯಾವ ಕಾರಣಗಳಿಗಾಗಿ ಪಬ್ಗೆ ಬಂದಿದ್ದಾನೆ, ಆತನ ಕೈಯಲ್ಲಿ ಪಿಸ್ತೂಲ್ ಇದ್ದಿದ್ದೇಕೆ ಎನ್ನುವ ಕುರಿತು ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಬೆಂಗಳೂರು, ಮೇ 12: ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಪಬ್(Pub)ಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಎಲ್ಲೆಡೆ ಓಡಾಡುತ್ತಿದ್ದ, ಏಕಾಏಕಿ ರಾಜಾಜಿನಗರದಲ್ಲಿರುವ ಜಾಮಿಟ್ರಿ ಪಬ್ಗೆ ಬಂದಿದ್ದಾರೆ. ಪೊಲೀಸ್, ಬಾಂಬ್ ಸ್ಕ್ವಾಡ್ ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಪಬ್‌ನಲ್ಲಿ ಆತ ಅವಿತುಕೊಂಡಿದ್ದು, ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಪಿಸ್ತೂಲ್ ಇರುವುದರಿಂದ ಈ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕಿದೆ. ಘಟನಾ ಸ್ಥಳದಲ್ಲಿ ಡ್ರೋನ್ ಹಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳತನಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಆಗಮಿಸಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ. ಅಧ್ಯ ಆತ ಪಬ್ನ ಒಳಗಡೆಯೇ ಅವಿತುಕೊಂಡಿದ್ದಾನೆ.
ವಿಕಾಶ್ ಕುಮಾರ್ ಎಂಬುವವರು ಹೇಳಿಕೆ ನೀಡಿದ್ದು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜಾಮಿಟ್ರಿ ಪಬ್ನ ಖಾಸಗಿ ಗಾರ್ಡ್ 112ಕ್ಕೆ ಕರೆ ಮಾಡಿದ್ದಾರೆ. ಪಬ್ನ ಹಿಂಬಾಗಿಲಿನಿಂದ ವೆಪನ್ ತೋರಿಸಿ ವ್ಯಕ್ತಿಯೊಬ್ಬ ಎಂಟ್ರಿಕೊಟ್ಟಿದ್ದು, ಆತ ಮಾಸ್ಕ್ ಧರಿಸಿದ್ದ, ಬೆದರಿಸಿದ್ದಾನೆ ಎಂದು ದೂರು ನೀಡಿದ್ದರು ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: ಶಿರಸಿ ನಗರಕ್ಕೆ ನೀರು ಪೂರೈಸುತ್ತಿದ್ದ ಪೈಪ್ಗಳು ಕಳ್ಳತನ: ಮೂವರು ಅಧಿಕಾರಿಗಳು ಪರಾರಿ
ಕ್ಯೂಆರ್ ಟೀಂ ಸೇರಿದಂತೆ ನಮ್ಮ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ, ಮ್ಯಾನೇಜರ್ ಡ್ರಾಯರ್ ನಲ್ಲಿ 50. ಸಾವಿರ ಕಳುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಸಿಸಿ ಕ್ಯಾಮರಾ ಬ್ಲಾಕ್ ಮಾಡಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಡೋರ್ ಬ್ರೇಕ್ ಮಾಡಿ ಎಂಟ್ರಿ ಕೊಟ್ಟಿದ್ದಾನೆ ಎತನಿಖೆ ಮುಂದುವರೆದಿದೆ.
ರಾಜಾಜಿನಗರದ ಜಾಮಿಟ್ರಿ ಪಬ್‌ನಲ್ಲಿ ಕಳ್ಳತನ ನಡೆದಿದೆ, ಬೆಂಗಳೂರಿನ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದಾರೆ. ಪಬ್ ಸಿಬ್ಬಂದಿ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಬಂದಿದ್ದರು, ಈಗಾಗಲೇ ಕಳ್ಳತನ ಮಾಡಿ ಪಬ್‌ನಿಂದ ಪರಾರಿಯಾಗಿದ್ದಾನೆ, ಕ್ಯಾಷ್ ಕೌಂಟರ್ ಒಡೆದು ಹಣ ದೋಚಿ ಕಳ್ಳ ಪರಾರಿ ಆಗಿದ್ದಾನೆ.
ಎಲ್ಲಾ ಸಿಸಿಟಿವಿ, ಲೈಟ್ ಆಫ್ ಮಾಡಿ ಕಳ್ಳತನ ಮಾಡಿದ್ದಾನೆ, ಪೊಲೀಸರು ಜಾಮಿಟ್ರಿ ಪಬ್‌ನಲ್ಲಿ ಸತತ 6 ಗಂಟೆ ಪರಿಶೀಲಿಸಿದ್ದಾರೆ, ಪಿಸ್ತೂಲ್ ಹಿಡಿದು ಬಂದಿದ್ದ ಎಂದು ಪಬ್ ಸಿಬ್ಬಂದಿ ಹೇಳಿದ್ದರು ಈ ಬಗ್ಗೆ ತನಿಖೆ ನಡೆಸುತ್ತೇವೆ-ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:33 am, Mon, 12 May 25




