ನಂದಿಹಿಲ್ಸ್ ಅಭಿವೃದ್ದಿಗೆ ಪಣ: ಪ್ರವಾಸಿಗರ ಕುಂದು ಕೊರತೆ ಆಲಿಸಿದ ಸಚಿವ, ಶೀಘ್ರದಲ್ಲಿ ರೋಪ್ ವೇ ಕಾಮಗಾರಿಗೆ ಚಾಲನೆ
ಬೆಂಗಳೂರಿನ ಹತ್ತಿರವಿರುವ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ರೋಪ್ ವೇ ಯೋಜನೆಯ ವಿಳಂಬದ ಬಗ್ಗೆ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಪ್ರವಾಸಿಗರೊಂದಿಗೆ ಚರ್ಚಿಸಿದ್ದಾರೆ. ವಾರಾಂತ್ಯದಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಸೌಕರ್ಯಗಳನ್ನು ಸುಧಾರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ, ಮೇ 12: ಅದು ಮೊದಲೇ ಪ್ರಕೃತಿ ಸೌಂದರ್ಯವನ್ನು ಹೊದ್ದುಕೊಂಡು ಮಲಗಿರುವ ವಿಶ್ವವಿಖ್ಯಾತ ಗಿರಿಧಾಮ (nandi hills). ಅಲ್ಲಿಗೆ ಹೋಗಿ ಕೆಲಕಾಲ ವಿಹರಿಸಿದರೆ ಅದೇನೊ ಮನಸ್ಸಿಗೆ ಒಂಥರಾ ಆಹ್ಲಾದಕರವಾಗುತ್ತೆ. ಹಾಗಾಗಿ ಬೆಂಗಳೂರಿನ ಜನ, ವೀಕೆಂಡ್ ಬಂದರೆ ಸಾಕು, ಅಲ್ಲಿಗೆ ನುಗ್ಗತ್ತಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನಲೆ, ನಿನ್ನೆ ಸಚಿವ ಡಾ. ಎಂ.ಸಿ.ಸುಧಾಕರ್ (Dr MC Sudhakar) ಭೇಟಿ ನೀಡಿ, ಪ್ರವಾಸಿಗರ ಜೊತೆ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದ್ದಾರೆ.
ಮುಗಿಲೇತ್ತರಕ್ಕೆ ಬೆಳೆದು ನಿಂತ ಬೆಟ್ಟ. ಬೆಟ್ಟಕ್ಕೆ ಮುತ್ತಿಕ್ಕುವ ಬೆಳ್ಳಿ ಮೋಡಗಳು. ಒಂದೆಡೆ ತಂಗಾಳಿಯೊಂದಿಗೆ ತೇಲಿ ಬರುವ ಬೆಳ್ಳಿ ಮೋಡಗಳ ಚೆಲ್ಲಾಟ, ಮತ್ತೊಂದೆಡೆ ಚುಮು ಚುಮು ಚಳಿಯ ನಾದಲೀಲೆ, ಇಂಥ ರಮಣೀಯ ಪ್ರಕೃತಿ ಸೊಬಗುನ್ನು ಕಾಣಲು ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಹೋಗಬೇಕು.
ಇದನ್ನೂ ಓದಿ: Nandi Hills ropeway: ನಂದಿ ಬೆಟ್ಟ ರೋಪ್ ವೇಗೆ ಕೇಂದ್ರ ಅರಣ್ಯ ಇಲಾಖೆಯಿಂದ ಸಿಕ್ತು ಗ್ರೀನ್ ಸಿಗ್ನಲ್
ಹೌದು! ಪ್ರಕೃತಿ ಸೊಬಗಿಗೆ ಖ್ಯಾತಿಯಾಗಿರುವ ನಂದಿಬೆಟ್ಟಕ್ಕೂ ರಾಜಧಾನಿ ಬೆಂಗಳೂರಿನ ಪ್ರವಾಸಿಗಳಿಗೂ ಅದೇನೊ ಒಂಥರಾ ನಂಟು. ಇನ್ನೂ ವೀಕೆಂಡ್ ಬಂದರೆ ಸಾಕು, ಗಿರಿಧಾಮ ಜನರಿಂದ ತುಂಬಿ ತುಳುಕುತ್ತೆ. ಆದರೆ ಗಿರಿಧಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನಲೆ ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ಗಿರಿಧಾಮಕ್ಕೆ ಭೇಟಿ ನೀಡಿ, ಪ್ರವಾಸಿಗರ ಜೊತೆ ಚರ್ಚಿಸಿದರು.
ಸಚಿವ ಡಾ. ಎಂ.ಸಿ.ಸುಧಾಕರ್ ಟ್ವೀಟ್
ಚಿಕ್ಕಬಳ್ಳಾಪುರ ಜನತೆಯ ಕನಸಿನ ನಂದಿ ರೋಪ್ವೇ ಯೋಜನೆಗೆ ಸಕಲ ಸಿದ್ಧತೆ..!! ಸಾರಿಗೆ, ಪಾರ್ಕಿಂಗ್, ಜನಸಂದಣಿ ನಿಯಂತ್ರಣ ಮತ್ತು ಪ್ರವಾಸಿಗರ ಅನುಕೂಲತೆಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಯಿತು. ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಶ್ರೀ ರಾಜೇಂದ್ರರವರು ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.#NandiHills #Chikkaballapur l pic.twitter.com/DExjCmcz2z
— Dr MC Sudhakar (@drmcsudhakar) May 11, 2025
ಇನ್ನೂ ಬೆಂಗಳೂರಿನ ಯುವಕ ಯುವತಿಯರ ಹಾಟ್ ಸ್ಪಾಟ್ ಆಗಿರುವ ಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಸರ್ಕಸ್ ನಡೆದಿದ್ದು, ಒಂದೊಂದು ಸರ್ಕಾರಗಳು ಒಂದೊಂದು ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ. ಆದರೆ ಅಧಿಕೃತ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ತಂಡವನ್ನು ನಿನ್ನೆ ಗಿರಿಧಾಮಕ್ಕೆ ಕರೆ ತಂದು, ರೋಪ್ ವೇ ಕಾಮಗಾರಿ ಆರಂಭಿಸುವ ಕುರಿತು ಚರ್ಚೆ ಮಾಡಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೆ ತೋರಣವಾದ ತಬೂಬಿಯಾ ರೋಸಿಯಾ ಮರದ ಹೂವುಗಳು
ನಂದಿಗಿರಿಧಾಮದಲ್ಲಿ ಪ್ಯಾಸೇಂಜರ್ ರೋಪ್ ವೇ ಈಗ ಆಗುತ್ತೆ, ಆಗ ಆಗುತ್ತೆ ಅಂತ ಕಳೆದ ಹತ್ತು ವರ್ಷಗಳಿಂದ ಪ್ರಚಾರ ಮಾಡಲಾಗುತ್ತಿದೆ. ಆದರೆ ಇದುವರೆಗೂ ಅಧಿಕೃತವಾಗಿ ರೋಪ್ ವೇ ಕಾಮಗಾರಿ ಮಾತ್ರ ಆರಂಭವಾಗಿಲ್ಲ, ಈಗ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ರೋಪ್ ವೇ ನಿರ್ಮಾಣ ಮಾಡಲು ಆಸಕ್ತಿ ತೋರಿದ್ದು, ಸಾಕಾರವಾಗುತ್ತಾ ಕಾದು ನೋಡಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




