ಭಾರತದಲ್ಲಿ ಬ್ಯಾಟಿಂಗ್ ಪ್ರತಿಭೆಗಳ ಕೊರತೆಯಿಲ್ಲ, ಅದರೆ ಕೊಹ್ಲಿಯಂಥ ಮತ್ತೊಬ್ಬ ಬ್ಯಾಟರ್ ಸಿಗಲಾರ
ಒಂದು ನಿರ್ದಿಷ್ಟ ಅವಧಿಯಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್, ಒಡಿಐ ಮತ್ತು ಟಿ20ಐ-ಮೂರೂ ಅವೃತಿಗಳಲ್ಲಿ 50 ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದ ವಿಶ್ವದ ಏಕಮಾತ್ರ ಆಟಗಾರನಾಗಿದ್ದರು. ಮೊನ್ನೆ ಭಾರತಕ್ಕೆ ಎರಡನೇ ಸಲ ಟಿ20ಐ ವಿಶ್ವಕಪ್ ಗೆದ್ದುಕೊಟ್ಟ ನಂತರ ಅವರು ಭಾರತದ ಪರ ಇನ್ನು ಟಿ20 ಆಡಲ್ಲ ಅಂತ ಹೇಳಿದ್ದರು. ಒಡಿಐಗಳಲ್ಲಿ ಚೇಸ್ ಮಾಸ್ಟರ್ ಆಗಿರುವ ಕೊಹ್ಲಿ ಈ ಫಾರ್ಮಾಟ್ನಲ್ಲಿ 57.88 ಸರಾಸರಿಯನ್ನು ಹೊಂದಿದ್ದಾರೆ.
ಬೆಂಗಳೂರು, ಮೇ 12: ಸಾಂಪ್ರದಾಯಿಕ ಕ್ರಿಕೆಟ್ ಆವೃತ್ತಿಯಲ್ಲಿ ಇನ್ನು ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸೊಬಗು, ಅಗ್ರೆಷನ್, ಎದುರಾಳಿ ಶಿಬಿರವನ್ನು ನುಗ್ಗಿ ಆಕ್ರಮಣ ಮಾಡುವ ವೈಖರಿ, ಆ್ಯಂಟಿಕ್ಸ್, ತಡವಿದರೆ ಸುಮ್ಮನೆ ಬಿಡಲ್ಲವೆಂಬ ಛಲಗಾರಿಕೆ ಕಾಣಸಿಗದು. ಕ್ರಿಕೆಟ್ ಮೈದಾನದಲ್ಲಿ ಅಕ್ಷರಶಃ ಕಿಂಗ್ ಆಗಿದ್ದ ಕೊಹ್ಲಿ, ರೋಹಿತ್ ಶರ್ಮಾ ನಂತರ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಭಾರತಕ್ಕೆ ಮತ್ತೊಬ್ಬ ಕೊಹ್ಲಿ ಸಿಗಲಾರ. ಅವರು ರಿಟೈರಾಗಲಿ ಅಂತ ಕೆಲವರು ಹೇಳುತ್ತಿದ್ದಿದ್ದು ನಿಜವಾದರೂ, ಮೊನ್ನೆಯಷ್ಟೇ ಇನ್ನೂ ಮೂರು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುತ್ತೇನೆಂದಿದ್ದ ಕೊಹ್ಲಿ ಅದ್ಯಾಕೆ ನಿವೃತ್ತಿ ಘೋಷಿಸಿದರೋ? ಅವರ ಮತ್ತು ಕೋಚ್ ಗೌತಮ್ ಗಂಭೀರ್ ನಡುವೆ ಉತ್ತಮ ಬಾಂಧವ್ಯ ಇಲ್ಲದಿರೋದು ವಿದಾಯ ಹೇಳಲು ಕಾರಣವಾಯಿತೇ?
ಇದನ್ನು ಓದಿ: Virat Kohli: ವಿರಾಟ್ ಕೊಹ್ಲಿ ನಿವೃತ್ತಿ? ನಿರ್ಧಾರ ಬದಲಿಸುವಂತೆ ಬಿಸಿಸಿಐ ಮನವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್

ಪ್ರಿಯಾಂಕ್ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ

ಫೈಲ್ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
