ರಾಜ್ಕುಮಾರ್ ಸದಾ ಬಿಳಿ ಪಂಚೆ, ಶರ್ಟ್ನಲ್ಲೇ ಇರುತ್ತಿದ್ದರೇಕೆ? ಆ ಘಟನೆಯೇ ಕಾರಣ
ರಾಜ್ಕುಮಾರ್ ಅವರು ತಮ್ಮ ಜೀವನದ ಒಂದು ಹಂತದಲ್ಲಿ ಬಿಳಿ ಪಂಚೆ ಮತ್ತು ಶರ್ಟ್ ಧರಿಸಲು ಆರಂಭಿಸಿದರು. ಇದಕ್ಕೆ ಕಾರಣ ಮದ್ರಾಸ್‌ನಲ್ಲಿ ಒಬ್ಬ ಅಭಿಮಾನಿಯು ಅವರಿಗೆ ಹೇಳಿದ ಮಾತು. ಅಭಿಮಾನಿಯ ಮಾತು ಅವರ ಮೇಲೆ ಆಳವಾದ ಪ್ರಭಾವ ಬೀರಿತು. ಈ ಘಟನೆಯ ನಂತರ ಅವರು ಸದಾ ಸರಳ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗೌರವವನ್ನು ಗಳಿಸಿದರು.

ರಾಜ್ಕುಮಾರ್ (Rajkumar) ಅವರು ಒಂದು ವಯಸ್ಸನ್ನು ದಾಟಿದ ಬಳಿಕ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ನಲ್ಲೇ ಹೆಚ್ಚು ಕಾಣಿಸಿಕೊಂಡರು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಈ ಬಗ್ಗೆ ಅವರು ಕೂಡ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಈಗ ರಾಜ್ಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ. ರಾಜ್ಕುಮಾರ್ ಬಿಳಿ ಪಂಚೆ ಹಾಗೂ ಶರ್ಟ್ನಲ್ಲೇ ಕಾಣಿಸಿಕೊಳ್ಳುತ್ತಿದ್ದು ಏಕೆ ಎಂಬುದಕ್ಕೆ ಉತ್ತರ ಸಿಕ್ಕಿದೆ.
ರಾಜ್ಕುಮಾರ್ ಅವರು ಸರಳತೆಗೆ ಮತ್ತೊಂದು ಹೆಸರಾಗಿದ್ದರು. ಸದಾ ಸಿಂಪಲ್ ಉಡುಗೆಯಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದರು. ಎಂದಿಗೂ ಅವರು ಡ್ರೆಸ್ ವಿಚಾರದಲ್ಲಿ ಮೆರೆದವರಲ್ಲ. ಅಷ್ಟೇ ಏಕೆ ದುಬಾರಿ ಕಾರುಗಳನ್ನು ತೆಗೆದುಕೊಂಡು ಓಡಾಡಿದವರಲ್ಲ. ರಾಜ್ಕುಮಾರ್ ಸರಳತೆ ಮೂಲಕ ಗಮನ ಸೆಳೆದವರು. ಆದರೆ, ರಾಜ್ಕುಮಾರ್ ಅವರು ಈ ಮೊದಲು ಜೀನ್ಸ್ ಹಾಕುತ್ತಿದ್ದರು. ಒಂದು ಘಟನೆ ಅವರನ್ನು ಬದಲಾಯಿಸಿತು.
ಆರ್ಜೆ ಮಯೂರ್ ಅವರು ನಡೆಸುತ್ತಿರುವ ‘ಗೋಲ್ಡ್ ಕ್ಲಾಸ್ ವಿತ್ ಮಯೂರ್’ ಯೂಟ್ಯೂಬ್ ಚಾನೆಲ್ಗೆ ಹಿರಿಯ ನಿರ್ದೇಶಕ ಪ್ರವೀಣ್ ನಾಯಕ್ ಅವರು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ರಾಜ್ಕುಮಾರ್ ಬಗ್ಗೆ ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.
ರಾಜ್ಕುಮಾರ್ ಅವರು ಸ್ಟೈಲಿಶ್ ಆಗಿಯೇ ಓಡಾಡಿಕೊಂಡಿದ್ದರು. ಜೀನ್ಸ್ ಹಾಕುತ್ತಿದ್ದರು. ಆದರೆ, ಮದ್ರಾಸ್‌ನಲ್ಲಿ ಓರ್ವ ವ್ಯಕ್ತಿ ಹೇಳಿದ ಮಾತು ಅವರನ್ನು ಪ್ರಭಾವಿಗೊಳಿಸಿತು. ‘ರಾಜ್ಕುಮಾರ್ ಅವರು ಮದ್ರಾಸ್ ವಿಮಾನ ನಿಲ್ದಾಣದಲ್ಲಿ ಇಳಿದು ಬಂದರು. ಆಗ ತಮಿಳಿನ ವ್ಯಕ್ತಿಯೊಬ್ಬರು ನಮಸ್ಕಾರ, ನಿಮ್ಮ ಸಿನಿಮಾಗಳನ್ನು ನೋಡುತ್ತೇನೆ ಎಂದು ರಾಜ್ಕುಮಾರ್ ಬಳಿ ಹೇಳಿದರು’ ಎಂದು ಮಾತು ಆರಂಭಿಸಿದರು ಪ್ರವೀಣ್.
View this post on Instagram
‘ನಿಮ್ಮನ್ನು ನೋಡಿದರೆ ಗೌರವ ಭಾವನೆ ಮೂಡುತ್ತದೆ. ಆದರೆ, ಈ ರೀತಿ ಜೀನ್ಸ್ ಹಾಕಿದರೆ ನಿಮ್ಮ ಪಾತ್ರಗಳೇ ನೆನಪಿಗೆ ಬರುತ್ತವೆ. ನಿಮಗೆ ಬಿಳಿ ಪಂಚೆ-ಶರ್ಟ್ ಚೆನ್ನಾಗಿ ಕಾಣುತ್ತದೆ. ಗೌರವ ಹಾಗೆಯೇ ಉಳಿಯುತ್ತದೆ’ ಎಂದರಂತೆ. ಇದು ರಾಜ್ಕುಮಾರ್ ಮೇಲೆ ಸಾಕಷ್ಟು ಪ್ರಭಾವ ಬೀರಿತು.
ಇದನ್ನೂ ಓದಿ: ‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್ಕುಮಾರ್ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
ರಾಜ್ಕುಮಾರ್ ತಂದೆ ಕೂಡ ಬಿಳಿ ಪಂಚೆ, ಶರ್ಟ್ ಹಾಕುತ್ತಿದ್ದರು. ‘ಸ್ಟೈಲ್ ಮಾಡೋಕೆ ಜಾಗ ಇದೆ. ಅದುವೇ ರಂಗಭೂಮಿ. ಅಲ್ಲಿ ಮಾಡು’ ಎಂದು ರಾಜ್ಕುಮಾರ್ ತಂದೆ ಹೇಳಿದ್ದರಂತೆ. ಅದು ಕೂಡ ರಾಜ್ಕುಮಾರ್ಗೆ ನೆನಪಿಗೆ ಬಂತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Tue, 13 May 25







