AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್

ರಾಜ್​ಕುಮಾರ್ ಮತ್ತು ಅಂಬರೀಷ್ ಅವರ ನಡುವೆ ಅಪ್ರತಿಮ ಬಾಂಧವ್ಯ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 'ಒಡಹುಟ್ಟಿದವರು' ಚಿತ್ರದ ಚಿತ್ರೀಕರಣದ ಒಂದು ಅಪರೂಪದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಅಂಬರೀಷ್ ಅವರು ಚಿತ್ರದ ಕಥೆ ಕೇಳದೆ, ರಾಜ್​ಕುಮಾರ್ ಅವರಿಗೆ ಎರಡು ಷರತ್ತುಗಳನ್ನು ವಿಧಿಸಿ ಚಿತ್ರದಲ್ಲಿ ನಟಿಸಿದರು.

‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
‘ಒಡಹುಟ್ಟಿದವರು’ ಸಿನಿಮಾ ಮಾಡಲು ರಾಜ್​ಕುಮಾರ್​ಗೆ ಎರಡು ಷರತ್ತು ಹಾಕಿದ್ದ ಅಂಬರೀಷ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Apr 30, 2025 | 8:01 AM

Share

ರಾಜ್​ಕುಮಾರ್ ಹಾಗೂ ಅಂಬರೀಷ್ (Ambareesh) ಅವರ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದವರು. ಇಬ್ಬರ ಮಧ್ಯೆ ಒಳ್ಳೆಯ ಒಡನಾಟ ಇತ್ತು. ರಾಜ್​ಕುಮಾರ್ ಎಂದರೆ ಅಂಬಿಗೆ ಎಲ್ಲಿಲ್ಲದ ಗೌರವ. ರಾಜ್​ಕುಮಾರ್ ಅವರಿಂದ ಅಂಬರೀಷ್ ಸಾಕಷ್ಟು ಪ್ರಭಾವಿತರಾಗಿದ್ದರು. ಇವರು ಅನೇಕ ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದು ಇದೆ. ‘ಒಡಹುಟ್ಟಿದವರು’ ಸಿನಿಮಾ ಶೂಟಿಂಗ್ ಸಂದರ್ಭದ ಒಂದು ಅಪರೂಪದ ಘಟನೆ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ ಕೇಳಿ.

ರಾಜ್​ಕುಮಾರ್ ಹಾಗೂ ಅಂಬರೀಷನ್ ಅವರು ‘ಒಡಹುಟ್ಟಿದವರು’ ಸಿನಿಮಾ ಮಾಡಿದರು. ದೊರೈ-ಭಗವಾನ್ ಇದನ್ನು ನಿರ್ದೇಶನ ಮಾಡಿದ್ದರು. ಚಿ ಉದಯ್ ಶಂಕರ್ ಹಾಗೂ ಭಗವಾನ್ ಇದಕ್ಕೆ ಕಥೆ ಬರೆದಿದ್ದರು. ವರದರಾಜ್ ಅವರು ಇದನ್ನು ನಿರ್ಮಾಣ ಮಾಡಿದ್ದರು. 1994ರಲ್ಲಿ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಕಥೆ ಕೇಳಲು ಬರುವಂತೆ ಅಂಬರೀಷ್ ಅವರಿಗೆ ಬುಲಾವ್ ಬಂತು. ಆದರೆ, ಅವರು ಕಥೆ ಕೇಳದೆ ಸಿನಿಮಾ ಒಪ್ಪಿಕೊಂಡರು. ಅಲ್ಲದೆ, ಎರಡು ಕಂಡೀಷನ್ ಕೂಡ ಹಾಕಿದರು ಅವರು. ಅದೇನು ಎಂಬುದನ್ನು ಅಂಬರೀಷ್ ಅವರು ಈ ಮೊದಲು ವಿವರಿಸಿದ್ದರು.

ಇದನ್ನೂ ಓದಿ
Image
ತಮನ್ನಾ ಹಾಟ್ ಅವತಾರಕ್ಕೆ ಬದಲಾಯ್ತು ‘ರೇಡ್ 2’ ಸೆನ್ಸಾರ್ ಪ್ರಮಾಣಪತ್ರ?  
Image
ಸಂಧ್ಯಾ ಥಿಯೇಟರ್ ಕಾಲ್ತುಳಿತ; ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶ್ರೀತೇಜ್
Image
‘ಬಾಹುಬಲಿ 2’ ಚಿತ್ರಕ್ಕೆ 8 ವರ್ಷ; ರೀ-ರಿಲೀಸ್ ದಿನಾಂಕ ಘೋಷಣೆ
Image
ಅವನು ಗೆಳೆಯನಲ್ಲ, ಸಹೋದ್ಯೋಗಿ; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?

‘ಒಡ ಹುಟ್ಟಿದವರು ಕಥೆ ಕೇಳಿ ಎಂಬ ಒತ್ತಾಯ ಬಂತು. ಹೀಗಾಗಿ ರಾಜ್​ಕುಮಾರ್ ಮನೆಗೆ ಹೋಗಿದ್ದೆ. ವರದಪ್ಪ, ಪಾರ್ವತಮ್ಮ, ದೊರೆ ಭಗವಾನ್, ಉದಯ್ ಶಂಕರ್ ಕೂತಿದ್ದರು. ಹೋದವನೆ ಬನ್ನಿ ಎಂದು ಸ್ವಾಗತ ಮಾಡಿದರು. ನಾನು ಕಥೆ ಕೇಳೋಕೆ ಬಂದಿಲ್ಲ ಎಂದು ಹೇಳಿದೆ. ನಂದು ಎರಡು ಕಂಡೀಷನ್ ಇದೆ ಒಪ್ಪಿಕೊಳ್ಳಿ ಎಂದು ಹೇಳಿದೆ’ ಎಂದಿದ್ದರು ಅಂಬರೀಷ್.

ರಾಜ್​ಕುಮಾರ್​ಗೆ ಅವರು ಎರಡು ಕಂಡೀಷನ್ ಹಾಕಿದರು. ‘ನನಗೆ ನೀವು ಬಯ್ಯಬಾರದು, ನಿಮಗೆ ನಾನು ಬಯ್ಯೋದಿಲ್ಲ. ನಾನು ನಿಮಗೆ ಹೊಡೆಯಲ್ಲ, ನೀವು ನನಗೆ ಹೊಡೆಯಬಾರದು. ಕಸ ಗುಡಿಸೋ ಪಾರ್ಟ್ ಕೊಡಿ ಮಾಡಿ ಬಿಡ್ತೀನಿ ಎಂದು ಹೇಳಿದ್ದೆ’ ಎಂಬುದಾಗಿ ಅಂಬಿ ವಿವರಿಸಿದ್ದರು.

ಇದನ್ನೂ ಓದಿ: ಶಿವರಾಜ್​ಕುಮಾರ್ ಜೊತೆ ನಟಿಸಿದ ಈ ನಟಿ ಈಗ ಐಟಿ ಉದ್ಯೋಗಿ

ನಾಳೆ ನಿಂದು ಮೊದಲ ಶಾಟ್ ಎಂದರು. ‘ರಾಜ್​ಕುಮಾರ್ ಅವರ ಕಥೆ. ಅವರೇ ಹೀರೋ. ಅವರದ್ದು ಮೊದಲು ತೆಗೆಯಿರಿ. ಬಾಸ್ ವಾಟ್ ಟೈಮ್ ಶೂಟಿಂಗ್ ಎಂದು ಕೇಳಿದೆ. ಎನಿಟೈಮ್ ಎಂದು ರಾಜ್​ಕುಮಾರ್ ಹೇಳಿದರು. ಹೀಗಾಗಿ, ಅವರದ್ದೇ ಮೊದಲು ಶೂಟ್ ಮಾಡುವಂತೆ ನಾನು ಹೇಳಿದೆ. ಆ ಬಳಿಕ ಹಾಗೆ ಮಾಡಿದರು’ ಎಂದು ಅಂಬಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:58 am, Wed, 30 April 25