ತಮನ್ನಾ ಹಾಟ್ ಅವತಾರಕ್ಕೆ ಬದಲಾಯ್ತು ‘ರೇಡ್ 2’ ಸೆನ್ಸಾರ್ ಪ್ರಮಾಣಪತ್ರ?
ಅಜಯ್ ದೇವಗನ್ ಅವರ ‘ರೇಡ್ 2’ ಚಿತ್ರದ ಬಿಡುಗಡೆಗೆ ಸಾಕಷ್ಟು ನಿರೀಕ್ಷೆ ಇದೆ. ತಮನ್ನಾ ಅವರ "ನಶಾ" ಹಾಡಿನ ಕಾರಣದಿಂದ ಚಿತ್ರದ ಪ್ರಮಾಣಪತ್ರ ಯು/ಎ 7+ ನಿಂದ ಯು/ಎ 13+ ಗೆ ಬದಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ನಿರ್ಮಾಪಕರು ಇದನ್ನು ನಿರಾಕರಿಸಿದ್ದು, ಚಿತ್ರದ ಕೆಲವು ದೃಶ್ಯಗಳ ಕಾರಣಕ್ಕೆ ಪ್ರಮಾಣಪತ್ರ ಬದಲಾಗಿದೆ ಎಂದು ಹೇಳಿದ್ದಾರೆ.

‘ರೇಡ್’ ಬಳಿಕ ಅಜಯ್ ದೇವಗನ್ ಅವರು ‘ರೇಡ್ 2’ (Raid 2 Movie) ಚಿತ್ರದ ಮೂಲಕ ಬರುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಿತೇಷ್ ದೇಶ್ಮುಖ್ ಅವರು ಭ್ರಷ್ಟ ರಾಜಕಾರಣಿ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ‘ನಶಾ..’ ಹೆಸರಿನ ಹಾಡಿಗೆ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದಾರೆ. ‘ಜೈಲರ್’ ಚಿತ್ರದ ‘ಕಾವಾಲ..’ ಹಾಡು ಹಾಗೂ ‘ಸ್ತ್ರೀ 2’ ಚಿತ್ರದ ‘ಆಜ್ ಕಿ ರಾತ್..’ ಹಾಡುಗಳು ಸೂಪರ್ ಹಿಟ್ ಆದವು. ಈಗ ‘ರೇಡ್ 2’ ಚಿತ್ರದ ‘ನಶಾ..’ ಹಾಡಿನ ಸಮಯ. ಈ ಹಾಡಿನ ಕಾರಣಕ್ಕೆ ಸಿನಿಮಾ ಪ್ರಮಾಣ ಪತ್ರ ಬದಲಾಯಿತು ಎಂದು ಹೇಳಲಾಗುತ್ತಿದೆ. ಇದಕ್ಕೆ ನಿರ್ಮಾಪಕರು ಉತ್ತರ ನೀಡಿದ್ದಾರೆ.
ಈ ಮೊದಲು ಸಿನಿಮಾಗೆ ‘ಯು/ಎ 7+’ ಪ್ರಮಾಣ ಪತ್ರ ನೀಡಲಾಗಿತ್ತು. ಆದರೆ, ಈಗ ಇದನ್ನು ‘ಯು/ಎ 13+’ ಬದಲಾಯಿಸಲಾಗಿದೆ. ಅಂದರೆ ಸಿನಿಮಾನ ಎಲ್ಲರೂ ವೀಕ್ಷಿಸಬಹುದು. ಆದರೆ, 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಚಿತ್ರ ನೋಡುತ್ತಾರೆ ಎಂದರೆ ಅವರ ಜೊತೆ ಪಾಲಕರು ಇರಲೇಬೇಕು. ಇದಕ್ಕೆ ‘ನಶಾ’ ಹಾಡು ಕಾರಣ ಎನ್ನಲಾಗಿತ್ತು. ಆದರೆ, ಈ ಬಗ್ಗೆ ನಿರ್ಮಾಪಕ ಅಭಿಷೇಕ್ ಪಾಠಕ್ ಹೇಳೋದೇ ಬೇರೆ.
‘ಈ ರೀತಿ ಆಗಿದ್ದು ತಮನ್ನಾ ಹೆಜ್ಜೆ ಹಾಕಿದ ಹಾಡಿನ ಕಾರಣದಿಂದಾಗಿ ಅಲ್ಲ. ಸಿನಿಮಾಗಳಲ್ಲಿ ಕೆಲವು ದೃಶ್ಯಗಳನ್ನು ಕಟ್ ಮಾಡಬೇಕಿತ್ತು. ಆದರೆ, ಆ ದೃಶ್ಯಗಳಿಗೆ ನಾವು ಬದ್ಧರಾಗಿದ್ದೇವೆ. ಅದನ್ನು ಬದಲಿಸುತ್ತಿಲ್ಲ. ಹೀಗಾಗಿ, ಸರ್ಟಿಫಿಕೇಟ್ ಬದಲಾಗಿದೆ. ಆದಾಗ್ಯೂ ನಮಗೆ ಯು/ಎ ಪ್ರಮಾಣಪತ್ರವೇ ಸಿಕ್ಕಿದೆ. ಆದ್ದರಿಂದ ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ಹೇಳಿದ್ದಾರೆ.
‘ರೇಡ್ 2’ ಚಿತ್ರದ ಕೆಲವು ದೃಶ್ಯಗಳನ್ನು ಟ್ರಿಮ್ ಮಾಡಿದ ಕಾರಣಕ್ಕೆ ತಮನ್ನಾ ಅವರ ನಶಾ ಮತ್ತು ಯೋ ಯೋ ಹನಿ ಸಿಂಗ್ ಅವರ ಮನಿ ಮನಿ ಹಾಡನ್ನು ಚಿತ್ರಕ್ಕೆ ಸೇರಿಸಲಾಯಿತು ಎಂಬ ಮಾತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ‘ನಶಾ ಹಾಡನ್ನು ಕೊಂಚ ತಡವಾಗಿ ಸೇರಿಸಲಾಗಿದೆ ಎಂಬುದು ನಿಜ. ಆದರೆ, ಇದನ್ನು ಅಗತ್ಯತೆ ಇದ್ದಿದ್ದಕ್ಕೆ ಸೇರಿಸಿದ್ದು. ಈ ಹಾಡನ್ನು ಸುಂದರವಾಗಿ ಹೆಣೆಯಲಾಗಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಿಯಾರಾ ಪತಿಯ ಸಿನಿಮಾನಲ್ಲಿ ತಮನ್ನಾ ಭಾಟಿಯಾಗೇನು ಕೆಲಸ
‘ನೀವು ಸಿನಿಮಾ ನೋಡಿದರೆ ಈ ಹಾಡುಗಳು ಸಂಬಂಧ ಇಲ್ಲದ್ದಾಗ ಬರುತ್ತದೆ ಅಥವಾ ಹಾಡು ಸುಮ್ಮನೆ ಸೇರಿಸಲ್ಪಟ್ಟಿದೆ ಎಂದು ನಿಮಗೆ ಅನಿಸುವುದಿಲ್ಲ. ಅದನ್ನು ನಿರೂಪಣೆಯಲ್ಲಿ ಚೆನ್ನಾಗಿ ಬೆರೆಸಲಾಗಿದೆ. ಯೋ ಯೋ ಹನಿ ಸಿಂಗ್ ಅವರ ಹಾಡನ್ನೂ ಜನರು ನಿಜವಾಗಿಯೂ ಆನಂದಿಸುತ್ತಾರೆ’ ಎಂದು ಅವರು ಭರವಸೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.