AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ವರ್ಷದ ಬಳಿಕ ಸಿನಿಮಾ ಪ್ರಾರಂಭಿಸಿದ ಶಾರುಖ್, ಮುಂದುವರೆದ ಹಿಟ್ ಜೋಡಿ

Shah Rukh Khan: ಶಾರುಖ್ ಖಾನ್ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಯ್ತು. ಶಾರುಖ್ ಖಾನ್ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡು ಒಂದೂವರೆ ವರ್ಷವಾಯ್ತು. ಇದೀಗ ಕೊನೆಗೂ ಶಾರುಖ್ ಖಾನ್ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುತ್ತಿದ್ದಾರೆ. ಹೊಸ ಸಿನಿಮಾಕ್ಕೆ ತಮ್ಮ ಲಕ್ಕಿ ನಟಿಯನ್ನೇ ನಾಯಕಿಯನ್ನಾಗಿ ಆರಿಸಿದ್ದಾರೆ.

ಎರಡು ವರ್ಷದ ಬಳಿಕ ಸಿನಿಮಾ ಪ್ರಾರಂಭಿಸಿದ ಶಾರುಖ್, ಮುಂದುವರೆದ ಹಿಟ್ ಜೋಡಿ
Srk
ಮಂಜುನಾಥ ಸಿ.
|

Updated on: Apr 29, 2025 | 5:22 PM

Share

ಶಾರುಖ್ ಖಾನ್ ಪಾಲಿಗೆ 2023 ಅದ್ಭುತ ವರ್ಷವಾಗಿತ್ತು. ಸಾಲು-ಸಾಲಾಗಿ ಹಿಂದಿ ಸಿನಿಮಾಗಳು ಮುಳುಗುತ್ತಿರುವ ಸಮಯದಲ್ಲಿ ಶಾರುಖ್ ಖಾನ್ ಒಂದೇ ವರ್ಷ ಬರೋಬ್ಬರಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. 2023ರಲ್ಲಿ ಶಾರುಖ್ ಖಾನ್ ನಟನೆಯ ‘ಪಠಾಣ್‘, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ಬಿಡುಗಡೆ ಆದವು. ಮೂರೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆದವು. ‘ಡಂಕಿ’ 2023ರ ಡಿಸೆಂಬರ್​ನಲ್ಲಿ ಬಿಡುಗಡೆ ಆಯ್ತು. ಅದಾದ ಬಳಿಕ ಒಂದೂವರೆ ವರ್ಷ ಬಿಡುವು ಪಡೆದ ಶಾರುಖ್ ಖಾನ್ ಇದೀಗ ಮತ್ತೆ ಸಿನಿಮಾ ಚಿತ್ರೀಕರಣ ಶುರು ಮಾಡುತ್ತಿದ್ದಾರೆ. ಅದೂ ಅವರ ಅದೃಷ್ಟದ ನಾಯಕಿ ಜೊತೆಗೆ.

ಶಾರುಖ್ ಖಾನ್ ‘ಕಿಂಗ್’ ಹೆಸರಿನ ಆಕ್ಷನ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಲೇ ಇದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಇದೀಗ ಈ ಸಿನಿಮಾದ ಚಿತ್ರೀಕರಣ ಶುರುವಾಗುವ ಸಮಯ ಬಂದಿದೆ. ‘ಕಿಂಗ್’ ಸಿನಿಮಾ ಮೇ ತಿಂಗಳಲ್ಲಿ ಪ್ರಾರಂಭ ಆಗಲಿದೆಯಂತೆ.

ಇದನ್ನೂ ಓದಿ:ಹೊಸ ಮನೆಗೆ ವಾಸ್ತವ್ಯ ಬದಲಿಸಿದ ಶಾರುಖ್ ಖಾನ್, ಕೊಡುತ್ತಿರುವ ಬಾಡಿಗೆ ಎಷ್ಟು?

‘ಕಿಂಗ್’ ಸಿನಿಮಾದಲ್ಲಿ ನಾಯಕಿಯಾಗಿ ಶಾರುಖ್ ಖಾನ್​ರ ಲಕ್ಕಿ ನಟಿ ನಟಿಸಲಿದ್ದಾರೆ. ‘ಕಿಂಗ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಒಟ್ಟಿಗೆ ನಟಿಸುತ್ತಿರುವ ಐದನೇ ಸಿನಿಮಾ ಇದಾಗಲಿದೆ. ಶಾರುಖ್ ಹಾಗೂ ದೀಪಿಕಾ ಜೋಡಿಯಾಗಿ ನಟಿಸಿದ ಐದೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್​ಪ್ರೆಸ್’, ‘ಹ್ಯಾಪಿ ನ್ಯೂ ಇಯರ್’, ‘ಪಠಾಣ್’ ಸಿನಿಮಾಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದು ಆ ಎಲ್ಲ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.

ಇತ್ತೀಚೆಗಷ್ಟೆ ತಾಯಿಯಾಗಿರುವ ದೀಪಿಕಾ ಪಡುಕೋಣೆ, ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದರು. ‘ಕಲ್ಕಿ 2898 ಎಡಿ’ ಸಿನಿಮಾದ ಬಳಿಕ ಯಾವುದೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿರಲಿಲ್ಲ. ಇದೀಗ ‘ಕಿಂಗ್’ ಸಿನಿಮಾ ಮೂಲಕ ಅವರೂ ಸಹ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ತಾಯಿಯಾಗಿದ್ದ ದೀಪಿಕಾ ಪಡುಕೋಣೆ ಅವರ ದೇಹ ತೂಕ ಸಹಜವಾಗಿಯೇ ಹೆಚ್ಚಾಗಿತ್ತು. ಇದೀಗ ದೇಹ ತೂಕ ಇಳಿಸಿಕೊಂಡು ಮತ್ತೆ ಹಳೆ ಶೇಪ್​ಗೆ ಬರುತ್ತಿದ್ದಾರಂತೆ ದೀಪಿಕಾ ಪಡುಕೋಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ