AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಹುಬಲಿ 2’ ಚಿತ್ರಕ್ಕೆ 8 ವರ್ಷ; ರೀ-ರಿಲೀಸ್ ದಿನಾಂಕ ಘೋಷಣೆ

'ಬಾಹುಬಲಿ 2' ಚಿತ್ರವು ತನ್ನ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಚಿತ್ರದ ಮರುಬಿಡುಗಡೆಯನ್ನು ಘೋಷಿಸಲಾಗಿದೆ. ನಿರ್ಮಾಪಕರು ಈ ಸುದ್ದಿಯನ್ನು ಅನೌನ್ಸ್ ಮಾಡಿದ್ದು, ಹಲವು ಆಶ್ಚರ್ಯಕರ ಅಂಶಗಳನ್ನು ಚಿತ್ರದಲ್ಲಿ ಸೇರಿಸಲಾಗುವುದು ಎಂಬ ಮಾಹಿತಿ. ಈ ಸುದ್ದಿಯು ಪ್ರಭಾಸ್, ಅನುಷ್ಕಾ ಶೆಟ್ಟಿ ಮತ್ತು ರಾಜಮೌಳಿ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ.

‘ಬಾಹುಬಲಿ 2’ ಚಿತ್ರಕ್ಕೆ 8 ವರ್ಷ; ರೀ-ರಿಲೀಸ್ ದಿನಾಂಕ ಘೋಷಣೆ
ಬಾಹುಬಲಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Apr 29, 2025 | 10:58 AM

Share

ಖ್ಯಾತ ನಿರ್ದೇಶಕ ಎಸ್​ಎಸ್​ ರಾಜಮೌಳಿ (SS Rajamouli) ನಿರ್ದೇಶನದ, ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಟನೆಯ ‘ಬಾಹುಬಲಿ 2’ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 8 ವರ್ಷಗಳು ಕಳೆದಿವೆ. 250 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರವು 1700 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಸಿನಿಮಾ ರೀ-ರಿಲೀಸ್ ಪ್ಲ್ಯಾನ್ ಬಗ್ಗೆ ತಂಡ ಮಾತನಾಡಿದೆ. ಈ ಸಿನಿಮಾ ಮತ್ತೆ ರೀ-ರಿಲೀಸ್ ಆಗೋದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.  ಈ ವಿಚಾರ ಫ್ಯಾನ್ಸ್ ಖುಷಿಯನ್ನು ಹೆಚ್ಚಿಸಿದೆ. ವಿಶೇಷ ದಿನದಂದೇ ಈ ಬಗ್ಗೆ ಘೋಷಣೆ ಆಗಿದ್ದು ವಿಶೇಷ.

ರಾಜಮೌಳಿ ಅವರು ‘ಬಾಹುಬಲಿ’ ಚಿತ್ರವನ್ನು ನಿರ್ದೇಶನ ಮಾಡಿದರು. ಆ ಬಳಿಕ ಅವರು ಕೈಗೆ ಎತ್ತಿಕೊಂಡಿದ್ದು ‘ಬಾಹುಬಲಿ 2’ ಚಿತ್ರವನ್ನು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಳಿಕ ರಾಜಮೌಳಿ ಖ್ಯಾತಿ ಹೆಚ್ಚಿದ್ದಂತೂ ಸುಳ್ಳಲ್ಲ. ಈಗ ಸಿನಿಮಾನ ಥಿಯೇಟರ್​ಗೆ ತರೋಕೆ ಪ್ಲ್ಯಾನ್​ಗಳು ನಡೆದಿವೆ. 2025ರ ಅಕ್ಟೋಬರ್​ನಲ್ಲಿ ‘ಬಾಹುಬಲಿ’ ಸಿನಿಮಾದ ಮೊದಲ ಭಾಗ ರಿಲೀಸ್ ಆಗಲಿದೆ. ಹೆಚ್ಚಿನ ಸರ್​ಪ್ರೈಸ್​ಗಳು ಇನ್ನು ರಿವೀಲ್ ಆಗಲಿವೆ.

ಶೋಬು ಯರಲಗಡ್ಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಾಹುಬಲಿ ಚಿತ್ರವನ್ನು ಅಕ್ಟೋಬರ್​ನಲ್ಲಿ ಬಿಡುಗಡೆ ಮಾಡುತ್ತೇನೆ ಎಂದಿರೋ ಅವರು, ಇದು ಕೇವಲ ರೀ-ರೀಲೀಸ್ ಆಗಿರುವುದಿಲ್ಲ ಎನ್ನುವ ಭರವಸೆಯನ್ನು ನೀಡಿದ್ದಾರೆ. ಹಲವು ಸರ್​ಪ್ರೈಸ್​ಗಳು ಕೂಡ ಇರಲಿವೆಯಂತೆ. ಅಂದರೆ, ಸಿನಿಮಾದಲ್ಲಿ ಇಲ್ಲದೇ ಇದ್ದ ದೃಶ್ಯಗಳು ಇದರಲ್ಲಿ ಸೇರ್ಪಡೆ ಆಗುತ್ತವೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
Image
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
Image
ಅವನು ಗೆಳೆಯನಲ್ಲ, ಸಹೋದ್ಯೋಗಿ; ಅಕ್ಷಯ್-ಪರೇಶ್ ಮಧ್ಯೆ ಯಾವುದೂ ಸರಿ ಇಲ್ಲ?
Image
ಬಸ್ ಡ್ರೈವರ್ ಆಗಿದ್ದ ಯಶ್ ತಂದೆ ಈಗ ನಿರ್ಮಾಪಕ; ಹೊಸ ಬ್ಯಾನರ್ ಶುರು?
Image
ನಾನಿಗೆ ಕನ್ನಡ ಪಾಠ ಮಾಡಿದ ಶ್ರೀನಿಧಿ ಶೆಟ್ಟಿ; ಎಷ್ಟು ಕ್ಯೂಟ್ ನೋಡಿ

ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆ ಮುರಿಯಲು ರೆಡಿ ಆದ ‘ಪುಷ್ಪ 2’ ಸಿನಿಮಾ

ಪ್ರಭಾಸ್ ಅವರು ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರದ್ದು ದ್ವಿಪಾತ್ರ. ಈ ಸಿನಿಮಾದಲ್ಲಿ ಬಾಹುಬಲಿ ಆಗಿ ಅವರು ಸಾಕಷ್ಟು ಇಷ್ಟ ಆದರು. ಅಲ್ಲದೆ, ರಾಣಾ ದಗ್ಗುಬಾಟಿ, ತಮನ್ನಾ, ಅನುಷ್ಕಾ ಶೆಟ್ಟಿ, ಸತ್ಯರಾಜ್, ರೋಹಿಣಿ, ಅಡಿವಿ ಶೇಷ್ ಹಾಗೂ ಇತರರು ಸಿನಿಮಾದಲ್ಲಿ ಇದ್ದರು. ಈ ಚಿತ್ರ ರೀ-ರಿಲೀಸ್ ಆದರೆ, ಒಂದಷ್ಟು ದಾಖಲೆಗಳು ಮುರಿಯೋದು ಪಕ್ಕಾ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:57 am, Tue, 29 April 25