‘ಪುಷ್ಪ 2’ ಸಿನಿಮಾ ಮುರಿಯಲಿದೆಯೇ ‘ಬಾಹುಬಲಿ’, ‘RRR’ ಸಿನಿಮಾ ದಾಖಲೆ

Pushpa 2: ‘ಪುಷ್ಪ 2’ ಸಿನಿಮಾ ಇಂದು ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್ ಬಗ್ಗೆ ಕಳೆದ ಕೆಲ ತಿಂಗಳುಗಳಿಂದಲೂ ಚರ್ಚೆ ಜಾರಿಯಲ್ಲಿದೆ. ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಗಳಿಸಲಿದೆ? ಇಲ್ಲಿದೆ ಲೆಕ್ಕಾಚಾರ.

‘ಪುಷ್ಪ 2’ ಸಿನಿಮಾ ಮುರಿಯಲಿದೆಯೇ ‘ಬಾಹುಬಲಿ’, ‘RRR’ ಸಿನಿಮಾ ದಾಖಲೆ
ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Dec 05, 2024 | 12:18 PM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಇಂದು (ಡಿಸೆಂಬರ್ 05) ಬಿಡುಗಡೆ ಆಗಿದೆ. ಕೆಲವೆಡೆ ನಿನ್ನೆ ರಾತ್ರಿಯೇ ಸಿನಿಮಾದ ಪ್ರದರ್ಶನ ಆರಂಭವಾಗಿದೆ. ‘ಪುಷ್ಪ 2’ ಸಿನಿಮಾ ಭಾರಿ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಹಿಂದಿನ ಇನ್ಯಾವುದೇ ಸಿನಿಮಾಗಳಿಗೂ ಸಿಗದಷ್ಟು ಸ್ಕ್ರೀನ್​ಗಳು ‘ಪುಷ್ಪ 2’ ಸಿನಿಮಾಕ್ಕೆ ದೊರೆತಿವೆ. ಸಿನಿಮಾದ ಕಲೆಕ್ಷನ್ ಬಗ್ಗೆ ಕೆಲ ತಿಂಗಳ ಹಿಂದಿನಿಂದಲೂ ಲೆಕ್ಕಾಚಾರಗಳು ಪ್ರಾರಂಭವಾಗಿದ್ದು, ‘ಪುಷ್ಪ 2’ ಸಿನಿಮಾ ‘ಬಾಹುಬಲಿ’, ‘ಆರ್​ಆರ್​ಆರ್’, ‘ಕೆಜಿಎಫ್’ ಸಿನಿಮಾದ ದಾಖಲೆಗಳನ್ನು ಮುರಿಯಲಿದೆ ಎನ್ನಲಾಗುತ್ತಿದೆ. ಅಂದಹಾಗೆ ‘ಪುಷ್ಪ 2’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ? ಈ ಸಿನಿಮಾ ನಿಜಕ್ಕೂ ದಾಖಲೆ ಮುರಿಯಲಿದೆಯೇ?

‘ಪುಷ್ಪ 2’ ಸಿನಿಮಾದ ನಿರ್ಮಾಪಕರೇ ನೀಡಿರುವ ಮಾಹಿತಿಯಂತೆ ಈ ಸಿನಿಮಾ ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಆಗಿದೆ. ಯಾವ ಭಾರತೀಯ ಸಿನಿಮಾ ಸಹ ಒಂದೇ ಬಾರಿಗೆ 12 ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆ ಆಗಿಲ್ಲ. ಒಟ್ಟು ಸ್ಕ್ರೀನ್​ಗಳ ಸಂಖ್ಯೆ, ಸಿನಿಮಾಕ್ಕೆ ಆಗಿರುವ ಅಡ್ವಾನ್ಸ್ ಬುಕಿಂಗ್ ಇನ್ನಿತರೆಗಳ ಲೆಕ್ಕಾಚಾರದ ಪ್ರಕಾರ, ‘ಪುಷ್ಪ 2’ ಸಿನಿಮಾ ಮೊದಲ ದಿನ ವಿಶ್ವದಾದ್ಯಂತ ಸುಮಾರು 250 ರಿಂದ 300 ಕೋಟಿ ರೂಪಾಯಿ ಗಳಿಕೆ ಮಾಡಲಾಗಿದೆ. ಭಾರತದಲ್ಲಿಯೇ ಈ ಸಿನಿಮಾ ಸುಮಾರು 150 ರಿಂದ 200 ಕೋಟಿ ರೂಪಾಯಿ ಗಳಿಕೆ ಮಾಡಲಿದೆ.

ಇದನ್ನೂ ಓದಿ:‘ಪುಷ್ಪ 2’ ಚಿತ್ರದಲ್ಲಿ ದಂಡಿ ಕನ್ನಡದ ಕಲಾವಿದರು; ಯಾರ ಪಾತ್ರ ಹೇಗಿದೆ?

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಮೊದಲ ದಿನ ಭಾರತದಲ್ಲಿ 135 ಕೋಟಿ ರೂಪಾಯಿ ಗಳಿಕೆ ಮಾಡಿತ್ತು, ಇದು ದಾಖಲೆಯಾಗಿ ಬಾಕ್ಸ್ ಆಫೀಸ್​ನಲ್ಲಿ ಉಳಿದುಕೊಂಡಿತ್ತು. ‘ಆರ್​ಆರ್​ಆರ್’ ಸಿನಿಮಾ ವಿಶ್ವದಾದ್ಯಂತ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ 275 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ‘ಬಾಹುಬಲಿ 2’ ಸಿನಿಮಾ ಸಹ 200 ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ಅಲ್ಲಿಗೆ ಈಗ ಹಾಕಲಾಗಿರುವ ಅಂದಾಜಿನ ಪ್ರಕಾರ ‘ಪುಷ್ಪ 2’ ಸಿನಿಮಾ 250 ರಿಂದ 300 ಕೋಟಿ ಹಣ ಗಳಿಸಲಿದೆ. ಆ ಮೂಲಕ ‘ಕೆಜಿಎಫ್ 2’ ಹಾಗೂ ‘ಬಾಹುಬಲಿ 2’ ದಾಖಲೆ ಮುರಿಯಲಿದೆ.

ಈಗ ಪ್ರದರ್ಶನವಾಗುತ್ತಿರುವ ಶೋಗಳನ್ನು ಆಧರಿಸಿ ಯಾವ ಏರಿಯಾದಲ್ಲಿ ಏಷ್ಟು ಕಲೆಕ್ಷನ್ ಆಗಲಿದೆ ಎಂಬ ಅಂದಾಜು ಮಾಡಲಾಗಿದ್ದು, ‘ಪುಷ್ಪ 2’ ಸಿನಿಮಾ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಮೊದಲ ದಿನ ಸುಮಾರು 90 ಕೋಟಿ ರೂಪಾಯಿ ಗಳಿಸಲಿದೆಯಂತೆ. ಕರ್ನಾಟಕದಿಂದ 15 ಕೋಟಿ, ತಮಿಳುನಾಡಿನಿಂದ 8 ಕೋಟಿ ಗಳಿಸಲಿದೆ. ಕೇರಳದಿಂದ 7 ಕೋಟಿ ರೂಪಾಯಿ ಗಳಿಸಲಿದೆ. ಹಿಂದಿ ರಾಜ್ಯಗಳಿಂದ ಸುಮಾರು 80 ಕೋಟಿ ರೂಪಾಯಿ ಗಳಿಕೆ ಆಗಲಿದೆಯಂತೆ. ಅಲ್ಲಿಗೆ ಭಾರತದಿಂದ ಮಾತ್ರವೇ ಮೊದಲ ದಿನ 200 ಕೋಟಿ ಗಳಿಕೆ ಆಗಲಿದೆ. ವಿದೇಶಗಳಿಂದ ಸುಮಾರು 70 ಕೋಟಿ ಕಲೆಕ್ಷನ್ ಆಗುವ ಅಂದಾಜಿದ್ದು ಒಟ್ಟು ಕಲೆಕ್ಷನ್ 270 ಕೋಟಿ ರೂಪಾಯಿ ಆಗಲಿದೆ.

ಆದರೆ ‘ಬಾಹುಬಲಿ 2’ ಅಥವಾ ‘ಕೆಜಿಎಫ್ 2’, ‘ದಬಂಗ್’, ‘ಆರ್​ಆರ್​ಆರ್’ ಸಿನಿಮಾಗಳ ಲೈಫ್​ಟೈಮ್ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ‘ಪುಷ್ಪ 2’ ಮುರಿಯಬಲ್ಲದೇ ಎಂಬುದು ಪ್ರಶ್ನೆ. ಇದು ಸುಲಭವಲ್ಲ, ಆದರೆ ಅಸಾಧ್ಯವೇನಲ್ಲ. ‘ಪುಷ್ಪ 2’ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಪ್ರೇಕ್ಷಕರಿಂದ ವ್ಯಕ್ತವಾಗುತ್ತಿದ್ದು, ಸಿನಿಮಾ ದೊಡ್ಡ ಮೊತ್ತವನ್ನು ಮುಂದಿನ ಕೆಲ ವಾರಗಳಲ್ಲಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ