- Kannada News Photo gallery Kannada Actors in Pushpa 2 Movie here is the details of cast cinema News In Kannada
‘ಪುಷ್ಪ 2’ ಚಿತ್ರದಲ್ಲಿ ದಂಡಿ ಕನ್ನಡದ ಕಲಾವಿದರು; ಯಾರ ಪಾತ್ರ ಹೇಗಿದೆ?
‘ಪುಷ್ಪ 2’ ಸಿನಿಮಾ ಇಂದು (ಡಿಸೆಂಬರ್ 5) ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮೊದಲಾದವರು ನಟಿಸಿದ್ದಾರೆ. ಇದು ತೆಲುಗು ಸಿನಿಮಾ. ಇದರಲ್ಲಿ ಕನ್ನಡದವರೂ ನಟಿಸಿ ಗಮನ ಸೆಳೆದಿದ್ದಾರೆ. ಆ ಕಲಾವಿದರ ಬಗ್ಗೆ ಇಲ್ಲಿದೆ ವಿವರ.
Updated on: Dec 05, 2024 | 11:59 AM

ರಶ್ಮಿಕಾ ಮಂದಣ್ಣ ಕನ್ನಡದ ನಟಿಯಾದರೂ ಸದ್ಯ ಟಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಪರಭಾಷೆಯಲ್ಲಿ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ‘ಪುಷ್ಪ 2’ ಚಿತ್ರದಲ್ಲಿ ಇರುವ ಕನ್ನಡದ ಕಲಾವಿದರ ಪೈಕಿ ರಶ್ಮಿಕಾ ಕೂಡ ಒಬ್ಬರು. ಅವರು ಸಿನಿಮಾ ಉದ್ದಕ್ಕೂ ಕಾಣಿಸಿಕೊಳ್ಳುತ್ತಾರೆ.

‘ಕಿಸ್ಸಕ್..’ ಹಾಡಿನಲ್ಲಿ ಶ್ರೀಲೀಲಾ ಅವರು ಕಾಣಿಸಿಕೊಂಡಿದ್ದಾರೆ. ಈ ಹಾಡು ಭರ್ಜರಿ ಟ್ರೆಂಡ್ ಸೃಷ್ಟಿ ಮಾಡಿದೆ. ಈ ಹಾಡಿನಲ್ಲಿ ಶ್ರೀಲೀಲಾ ಅವರು ತಮ್ಮ ಗ್ಲಾಮರ್ ತೋರಿಸಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಾಡು ಗಮನ ಸೆಳೆದಿದೆ.

ತಾರಕ್ ಪೊನ್ನಪ್ಪ ಅವರು ವಿಲನ್ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ‘ಪುಷ್ಪ 2’ ಚಿತ್ರದ ದ್ವೀತಿಯಾರ್ಧದಲ್ಲಿ ಬರುವ ಅವರು ಪ್ರಮುಖ ಪಾತ್ರ ಒಂದಕ್ಕೆ ಬಣ್ಣ ಹಚ್ಚಿದ್ದಾರೆ. ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಸೃಷ್ಟಿ ಆಗಿದೆ.

‘ಪುಷ್ಪ’ ಚಿತ್ರದಲ್ಲಿ ಧನಂಜಯ್ ಅವರು ಜಾಲಿ ರೆಡ್ಡಿ ಹೆಸರಿನ ಪಾತ್ರ ಮಾಡಿದ್ದರು. ಮೊದಲ ಭಾಗದಲ್ಲಿ ಅವರು ಗಾಯಗೊಂಡಿದ್ದರು. ದ್ವಿತೀಯಾರ್ಧದಲ್ಲಿ ಅವರ ಆಗಮನ ಆಗುತ್ತದೆ. ಯಾವಾಗ? ಹೇಗೆ ಎಂಬುದಕ್ಕೆ ಸಿನಿಮಾ ನೋಡಬೇಕು.

ನಂದ ಗೋಪಾಲ್ ಅವರು ಕೂಡ ‘ಪುಷ್ಪ 2’ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಚಿಕ್ಕದಾಗಿದೆ. ಅವರ ಪಾತ್ರ ಹೆಚ್ಚು ಹೊತ್ತು ತೆರೆಮೇಲೆ ಬರದೇ ಇದ್ದರೂ ಕನ್ನಡದ ಹೀರೋ ಒಬ್ಬರು ಅವರು ನಟಿಸಿದ್ದಾರೆ ಅನ್ನೋದು ವಿಶೇಷ.




