
Pushpa 2
‘ಪುಷ್ಪ: ದಿ ರೈಸ್’ ಬಳಿಕ ಅಭಿಮಾನಿಗಳು ಕುತೂಹಲದಿಂದ ಈ ಚಿತ್ರದ ಸೀಕ್ವೆಲ್ಗಾಗಿ ಕಾದಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ, ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಚಿತ್ರ ಡಿಸೆಂಬರ್ 5ರಂದು ರಿಲೀಸ್ ಆಗಲಿದೆ. ಈ ಚಿತ್ರವು ರಕ್ತ ಚಂದನದ ಕಳ್ಳಸಾಗಣೆಯ ಬಗ್ಗೆ ಇದೆ. ಪುಷ್ಪರಾಜ್ ಈಗ ರಕ್ತ ಚಂದನ ಕಳ್ಳ ಸಾಗಣೆಯಲ್ಲಿ ಡಾನ್ ಆಗಿದ್ದಾನೆ. ಪೊಲೀಸ್ ಪಾತ್ರದಲ್ಲಿರುವ ಫಹಾದ್ ಫಾಸಿಲ್ ಹಾಗೂ ಪುಷ್ಪರಾಜ್ ಮಧ್ಯೆ ಕಿತ್ತಾಟ ಶುರುವಾಗಿದೆ. ದೇವಿಶ್ರೀ ಪ್ರಸಾದ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಅನ್ನೋದು ಪ್ರೇಕ್ಷಕರಿಗೆ ಸ್ಪಷ್ಟವಾಗಿದೆ. ಈ ಸಿನಿಮಾ ಈಗಾಗಲೇ ರಿಲೀಸ್ಗೂ ಮೊದಲೇ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎನ್ನಲಾಗಿದೆ. ಮೊದಲ ದಿನ ಈ ಚಿತ್ರ ಎಷ್ಟು ಕೋಟಿ ಗಳಿಕೆ ಮಾಡುತ್ತದೆ ಎನ್ನುವ ಕುತೂಹಲ ಇದೆ.
‘ಧಮ್ ಇದ್ರೆ ಹಿಡ್ಕೊಳ್ಳೋ ಇನ್ವಿಜಿಲೇಟರು..’; ‘ಎಕ್ಸಾಮ್ ಗೋಡೆ ಮೇಲೆ ‘ಪುಷ್ಪ’ ಡೈಲಾಗ್ ಬರೆದ ವಿದ್ಯಾರ್ಥಿ
‘ಪುಷ್ಪ’ ಮತ್ತು ‘ಪುಷ್ಪ 2’ ಚಿತ್ರಗಳು ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಚರ್ಚೆಗಳು ಜೋರಾಗಿದೆ. ರಕ್ತಚಂದನ ಕಳ್ಳಸಾಗಣೆಯನ್ನು ಹೀರೋಯಿಸಂ ಆಗಿ ತೋರಿಸುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಪರೀಕ್ಷಾ ಕೇಂದ್ರದ ಗೋಡೆಯ ಮೇಲೆ 'ಪುಷ್ಪ 2' ಚಿತ್ರದ ಡೈಲಾಗ್ ಅನ್ನು ಬರೆದಿರುವುದು ಇದಕ್ಕೆ ಉದಾಹರಣೆಯಾಗಿದೆ.
- Rajesh Duggumane
- Updated on: Mar 19, 2025
- 11:51 am
‘ಪುಷ್ಪ 3’ ಚಿತ್ರಕ್ಕಾಗಿ ಎಷ್ಟು ವರ್ಷ ಕಾಯಬೇಕು? ಸಂಪೂರ್ಣ ಮಾಹಿತಿ ಕೊಟ್ಟ ನಿರ್ಮಾಪಕ
‘ಪುಷ್ಪ 2’ ಚಿತ್ರದ ಬೃಹತ್ ಯಶಸ್ಸಿನ ನಂತರ, ‘ಪುಷ್ಪ 3’ ಚಿತ್ರದ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ನಿರ್ಮಾಪಕ ರವಿ ಶಂಕರ್ ಅವರು 2028 ರ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮುಖ್ಯ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ.
- Rajesh Duggumane
- Updated on: Mar 17, 2025
- 3:59 pm
ಇಂಗ್ಲಿಷ್ನಲ್ಲೂ ಬಂತು ‘ಪುಷ್ಪ 2’ ಸಿನಿಮಾ; ವಿಶ್ವಾದ್ಯಂತ ಅಲ್ಲು ಅರ್ಜುನ್ ಹವಾ
ಭಾರತೀಯ ಭಾಷೆಗಳಲ್ಲಿ ಅಬ್ಬರಿಸಿದ ‘ಪುಷ್ಪ 2’ ಸಿನಿಮಾ ಈಗ ಇಂಗ್ಲಿಷ್ನಲ್ಲೂ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ‘ಪುಷ್ಪ 2’ ಸಿನಿಮಾದ ಇಂಗ್ಲಿಷ್ ವರ್ಷನ್ ಸ್ಟ್ರೀಮ್ ಆಗುತ್ತಿದೆ. ನೆಟ್‌ಫ್ಲಿಕ್ಸ್ ಗ್ಲೋಬಲ್ ಟಾಪ್ 10 ಟ್ರೆಂಡಿಂಗ್ನಲ್ಲೂ ಈ ಸಿನಿಮಾ ಇದೆ.
- Madan Kumar
- Updated on: Feb 9, 2025
- 1:16 pm
ನೆಟ್‌ಫ್ಲಿಕ್ಸ್ ಜಾಗತಿಕ ಟಾಪ್ 10 ಟ್ರೆಂಡಿಂಗ್ನಲ್ಲಿ ಸ್ಥಾನ ‘ಪುಷ್ಪ 2’ ಸಿನಿಮಾ
‘ಪುಷ್ಪ 2’ ಸಿನಿಮಾದ ಹವಾ ಇನ್ನೂ ನಿಂತಿಲ್ಲ. ಅಲ್ಲು ಅರ್ಜುನ್ ಅವರಿಗೆ ಈ ಸಿನಿಮಾದಿಂದ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಾಗಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ‘ಪುಷ್ಪ 2’ ಸಿನಿಮಾ ಈಗ ಒಟಿಟಿಯಲ್ಲೂ ಧೂಳೆಬ್ಬಿಸುತ್ತಿದೆ. ನೆಟ್‌ಫ್ಲಿಕ್ಸ್ ಮೂಲಕ ಈ ಸಿನಿಮಾವನ್ನು ಬೇರೆ ಬೇರೆ ದೇಶಗಳ ಪ್ರೇಕ್ಷಕರು ಕೂಡ ನೋಡುತ್ತಿದ್ದಾರೆ.
- Madan Kumar
- Updated on: Feb 5, 2025
- 9:06 am
Pushpa 2: ನೆಟ್‌ಫ್ಲಿಕ್ಸ್‌ನಲ್ಲಿ ‘ಪುಷ್ಪ 2’; ಕನ್ನಡ ಪ್ರೇಕ್ಷಕರಿಗೆ ಇಲ್ಲಿಯೂ ನಿರಾಸೆ
ನೆಟ್‌ಫ್ಲಿಕ್ಸ್‌ನಲ್ಲಿ ‘ಪುಷ್ಪ 2’ ಚಿತ್ರದ ಬಿಡುಗಡೆಯಾಗಿದ್ದು, ಕನ್ನಡ ಆವೃತ್ತಿಯ ಕೊರತೆಯಿಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಲಭ್ಯವಿರುವಾಗ ಕನ್ನಡ ಆವೃತ್ತಿಯ ವಿಳಂಬ ಅನೇಕರನ್ನು ಬೇಸರಗೊಳಿಸಿದೆ. ಈ ವಿಳಂಬದಿಂದ ನೆಟ್‌ಫ್ಲಿಕ್ಸ್ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
- Shreelaxmi H
- Updated on: Jan 30, 2025
- 9:23 am
2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ
ಟಾಲಿವುಡ್ ನಟ ಅಲ್ಲು ಅರ್ಜುನ್ ಅವರ ವೃತ್ತಿಜೀವನಕ್ಕೆ ‘ಪುಷ್ಪ 2’ ಸಿನಿಮಾ ಅತಿ ದೊಡ್ಡ ಸಕ್ಸಸ್ ನೀಡಿದೆ. ಬಿಡುಗಡೆ ಆಗಿ ತಿಂಗಳು ಕಳೆದಿದ್ದರೂ ಈ ಸಿನಿಮಾದ ಹವಾ ನಿಂತಿಲ್ಲ. ವಿವಾದಗಳ ನಡುವೆಯೂ ಈ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ. ಈಗ ಹೊಸ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಈ ಚಿತ್ರತಂಡ ಇನ್ನೊಂದು ನ್ಯೂಸ್ ಹಂಚಿಕೊಂಡಿದೆ.
- Madan Kumar
- Updated on: Jan 12, 2025
- 10:09 pm
‘ಪುಷ್ಪ 2’ಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಲಿದೆ 20 ನಿಮಿಷಗಳ ಫೂಟೇಜ್
Pushpa 2: ಪುಷ್ಪ 2 ಸಿನಿಮಾ 3 ಗಂಟೆ 20 ನಿಮಿಷಗಳ ಅವಧಿಯೊಂದಿಗೆ ಯಶಸ್ವಿಯಾಗಿ ಬಿಡುಗಡೆಯಾಗಿದೆ. ಆದರೆ, ಚಿತ್ರತಂಡವು 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿ ಜನವರಿ 11ರಿಂದ "ರಿಲೋಡ್" ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ. ಈ ಹೆಚ್ಚುವರಿ ದೃಶ್ಯಗಳು ಜಪಾನ್ ದೃಶ್ಯದ ಸ್ಪಷ್ಟೀಕರಣ ಮತ್ತು ಅಲ್ಲು ಅರ್ಜುನ್ ಅವರ ಹೆಚ್ಚುವರಿ ಮಾಸ್ ದೃಶ್ಯಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಮೂಲಕ ಚಿತ್ರದ ಒಟ್ಟು ಅವಧಿ 3 ಗಂಟೆ 40 ನಿಮಿಷಗಳಾಗಲಿದೆ.
- Shreelaxmi H
- Updated on: Jan 8, 2025
- 1:01 pm
ಏಳು ವರ್ಷಗಳ ಹಳೆಯ ದಾಖಲೆ ಮುರಿದ ‘ಪುಷ್ಪ 2’
Pushpa 2 Collection: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಪ್ರತಿ ದಿನ ಒಂದೊಂದು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇದೀಗ ಏಳು ವರ್ಷದಿಂದ ಯಾರೂ ಮುರಿಯಲಾಗದಿದ್ದ ದಾಖಲೆಯನ್ನು ಮುರಿದಿದೆ. ‘ಬಾಹುಬಲಿ 2’ ಸಿನಿಮಾವನ್ನು ಹಿಂದಿಕ್ಕಿದ್ದು, ಇದೀಗ ‘ದಂಗಲ್’ ಸಿನಿಮಾ ದಾಖಲೆ ಮುರಿಯಲು ಮುಂದಾಗಿದೆ.
- Manjunatha C
- Updated on: Jan 7, 2025
- 12:58 pm
‘ನಾನಿದ್ದೇನೆ’; ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಭರವಸೆ ನೀಡಿದ ಅಲ್ಲು ಅರ್ಜುನ್
ಡಿಸೆಂಬರ್ 4 ರಂದು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ನೂಕುನುಗ್ಗಲು ಉಂಟಾಗಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಇದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಾಲಕ ಶ್ರೀತೇಜ್ ಕಳೆದ 35 ದಿನಗಳಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ನೋಡಿ ಹೋಗಲು ಅಲ್ಲು ಅರ್ಜುನ್ ಬಂದಿದ್ದಾರೆ.
- Rajesh Duggumane
- Updated on: Jan 7, 2025
- 11:23 am
‘ಪುಷ್ಪ 2’ ವಿವಾದದ ಮಧ್ಯೆಯೇ ಅಲ್ಲು ಅರ್ಜುನ್ ದಿಟ್ಟ ನಿರ್ಧಾರ; ಐದು ವರ್ಷಗಳ ತಪಸ್ಸಿಗೆ ಬ್ರೇಕ್
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಯಶಸ್ಸಿನ ನಂತರ ಐದು ವರ್ಷಗಳ ಕಾಲ ಬೆಳೆಸಿದ್ದ ಉದ್ದ ಕೂದಲು ಮತ್ತು ಗಡ್ಡವನ್ನು ಕತ್ತರಿಸಲು ನಿರ್ಧರಿಸಿದ್ದಾರೆ. ಇದು ಅವರ ಮಗಳೊಂದಿಗಿನ ಬಾಂಧವ್ಯಕ್ಕೂ ತೊಂದರೆ ಮಾಡಿದೆ ಎಂದು ಅವರು ಹೇಳಿದ್ದರು. ಈಗ ಅವರು ಹೊಸ ಚಿತ್ರಗಳಲ್ಲಿ ಕೆಲಸ ಮಾಡಲಿದ್ದಾರೆ ಮತ್ತು ಹೊಸ ಲುಕ್ ನೊಂದಿಗೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
- Web contact
- Updated on: Dec 31, 2024
- 2:47 pm