AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧಮ್​ ಇದ್ರೆ ಹಿಡ್ಕೊಳ್ಳೋ ಇನ್ವಿಜಿಲೇಟರು..’; ‘ಎಕ್ಸಾಮ್ ಗೋಡೆ ಮೇಲೆ ‘ಪುಷ್ಪ’ ಡೈಲಾಗ್ ಬರೆದ ವಿದ್ಯಾರ್ಥಿ

‘ಪುಷ್ಪ’ ಮತ್ತು ‘ಪುಷ್ಪ 2’ ಚಿತ್ರಗಳು ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಚರ್ಚೆಗಳು ಜೋರಾಗಿದೆ. ರಕ್ತಚಂದನ ಕಳ್ಳಸಾಗಣೆಯನ್ನು ಹೀರೋಯಿಸಂ ಆಗಿ ತೋರಿಸುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಪರೀಕ್ಷಾ ಕೇಂದ್ರದ ಗೋಡೆಯ ಮೇಲೆ 'ಪುಷ್ಪ 2' ಚಿತ್ರದ ಡೈಲಾಗ್‌ ಅನ್ನು ಬರೆದಿರುವುದು ಇದಕ್ಕೆ ಉದಾಹರಣೆಯಾಗಿದೆ.

‘ಧಮ್​ ಇದ್ರೆ ಹಿಡ್ಕೊಳ್ಳೋ ಇನ್ವಿಜಿಲೇಟರು..’; ‘ಎಕ್ಸಾಮ್ ಗೋಡೆ ಮೇಲೆ ‘ಪುಷ್ಪ’ ಡೈಲಾಗ್ ಬರೆದ ವಿದ್ಯಾರ್ಥಿ
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on: Mar 19, 2025 | 11:51 AM

Share

‘ಪುಷ್ಪ’ ಹಾಗೂ ‘ಪುಷ್ಪ 2’ (Pushpa 2) ರೀತಿಯ ಚಿತ್ರಗಳು ವಿದ್ಯಾರ್ಥಿಗಳ ಮೇಲೆ ಹಾಗೂ ಯುವ ಪೀಳಿಗೆ ಮೇಲೆ ಬೇರೆಯದೇ ರೀತಿಯ ಪ್ರಭಾವ ಬೀರುತ್ತಿವೆ ಎಂಬ ಚರ್ಚೆ ಜೋರಾಗಿದೆ. ರಕ್ತ ಚಂದನ ಕಳ್ಳ ಸಾಗಣೆಯನ್ನು ತೋರಿಸಿ ಸಮಾಜಕ್ಕೆ ಯಾವ ರೀತಿಯ ಸಂದೇಶ ಕೊಡಲಾಗುತ್ತಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಈಗ ಅದು ನಿಜ ಅನಿಸೋಕೆ ಆರಂಭ ಆಗಿದೆ. ಆಂಧ್ರ ಪ್ರದೇಶದಲ್ಲಿ ಎಕ್ಸಾಮ್ ಗೋಡೇ ಮೇಲೆ ‘ಧಮ್ ಇದ್ರೆ ಹಿಡ್ಕೊಳೋ ಇನ್ವಿಜಿಲೇಟರು..’ ಎಂಬ ಬರಹ ಕಾಣಿಸಿದ್ದು, ಇದು ವೈರಲ್ ಆಗುತ್ತಿದೆ.

‘ಪುಷ್ಪ’ ರೀತಿಯ ಸಿನಿಮಾಗಳಿಂದ ಸಮಾಜಕ್ಕೆ ಯಾವುದೇ ಒಳ್ಳೆಯ ಸಂದೇಶ ಸಿಕ್ಕಿಲ್ಲ ಎಂಬುದು ಅನೇಕರ ವಾದ. ಮರಗಳನ್ನು ಕಳ್ಳಸಾಗಣೆ ಮಾಡುವುದನ್ನು ಹೀರೋಯಿಸಂ ರೀತಿ ತೋರಿಸಿದರೆ ಮುಂಬರುವ ಜನರೇಶನ್ ಅದನ್ನೇ ಮಾದರಿಯಾಗಿ ತೆಗೆದುಕೊಳ್ಳುತ್ತದೆ ಎಂದು ಕೆಲವರು ಆತಂಕ ಹೊರ ಹಾಕಿದ್ದರು. ‘ಪುಷ್ಪ’ ಸಿನಿಮಾದಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ತೆಲಂಗಾಣ ಶಿಕ್ಷಕಿ ನೇರ ಆರೋಪ ಮಾಡಿದ್ದರು. ಈಗ ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ.

ಇದನ್ನೂ ಓದಿ
Image
ತನ್ನದೇ ಹೆಸರನ್ನು ತಪ್ಪಾಗಿ ಕರೆದುಕೊಂಡು ರಣಬೀರ್; ಆಮಿರ್ ರಿಯಾಕ್ಷನ್ ನೋಡಿ
Image
ಐಪಿಎಲ್ ಉದ್ಘಾಟನೆಗೆ ಹಾಜರಿ ಹಾಕಲಿದೆ ಇಡೀ ಬಾಲಿವುಡ್; ಇಲ್ಲಿದೆ ಲಿಸ್ಟ್
Image
ರಾಮ್ ಚರಣ್ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ ಎಂಎಸ್ ಧೋನಿ?
Image
ದೆಹಲಿ ಸಂಸತ್ತು ಹತ್ತಲಿದ್ದಾರೆ ಶಿವರಾಜ್​ಕುಮಾರ್; ಸಿಕ್ಕಿತು ಹೊಸ ಸುದ್ದಿ

ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ತೆಕ್ಕಲಿಯಲ್ಲಿರುವ ಪರೀಕ್ಷಾ ಕೇಂದ್ರದ ಗೋಡೆಯ ಮೇಲೆ ಒಬ್ಬ ವಿದ್ಯಾರ್ಥಿ ಒಂದು ಬರಹ ಬರೆದಿದ್ದಾನೆ. ‘ಧಮ್ ಇದ್ರೆ ಹಿಡ್ಕೊಳೋ ಇನ್ವಿಜಿಲೇಟರು.. ಹಿಡ್ಕೊಂಡ್ರೆ ಬಿಟ್ಟುಬಿಡ್ತೀನಿ ಬುಕ್‌ಲೆಟು.. ತಗ್ಗೋದೆ ಇಲ್ಲ’ ಎಂದು ಬರೆಯಲಾಗಿದೆ. ಇದನ್ನು ನೋಡಿದ ಕೆಲವರು ಫೋಟೋ ತೆಗೆದು ವೈರಲ್ ಮಾಡಿದ್ದಾರೆ.

‘ಪುಷ್ಪ 2’ ಚಿತ್ರದಲ್ಲಿ ಇದೇ ರೀತಿಯ ಡೈಲಾಗ್ ಬರುತ್ತದೆ. ‘ಧಮ್ ಇದ್ರೆ ಹಿಡ್ಕೊಳೋ ಶಿಖಾವತ್ತು, ಹಿಡ್ಕೊಂಡ್ರೆ ಬಿಟ್ಟು ಬಿಡ್ತೀನಿ ಸಿಂಡಿಕೇಟು..’ ಎಂಬ ಮಾತನ್ನು ಪೊಲೀಸ್ ಅಧಿಕಾರಿಗೆ ಪುಷ್ಪರಾಜ್ ಹೇಳುತ್ತಾನೆ. ಇದೇ ಡೈಲಾಗ್​ನ ತನಗೆ ಬೇಕಾದಂತೆ ಬದಲಿಸಿ ಗೋಡೆ ಮೇಲೆ ಬರೆಯಲಾಗಿದೆ.

ಇದನ್ನೂ ಓದಿ: ‘ಪುಷ್ಪ 3’ ಚಿತ್ರಕ್ಕಾಗಿ ಎಷ್ಟು ವರ್ಷ ಕಾಯಬೇಕು? ಸಂಪೂರ್ಣ ಮಾಹಿತಿ ಕೊಟ್ಟ ನಿರ್ಮಾಪಕ

‘ಪುಷ್ಪ 2’ ಚಿತ್ರ ರಿಲೀಸ್ ಆದ ಬಳಿಕ ದಾಖಲೆಯೇನೋ ಮಾಡಿತು. ಆದರೆ, ಅದೇ ರೀತಿ ವಿವಾದಗಳನ್ನು ಹುಟ್ಟುಹಾಕಿತು. ಚಿತ್ರದ ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತದಿಂದ ಅಲ್ಲು ಅರ್ಜುನ್ ಅರೆಸ್ಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ