AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shiva Rajkumar: ದೆಹಲಿ ಸಂಸತ್ತು ಹತ್ತಲಿದ್ದಾರೆ ಶಿವರಾಜ್​ಕುಮಾರ್; ಸಿಕ್ಕಿತು ಹೊಸ ಸುದ್ದಿ

ಶಿವರಾಜ್​ಕುಮಾರ್ ಅವರು ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದು, ರಾಮ್​ಚರಣ್ ಜೊತೆಗಿನ "RC16" ಚಿತ್ರದ ಶೂಟ್​ನಲ್ಲಿ ಭಾಗಿ ಆಗಲಿದ್ದಾರೆ. ದೆಹಲಿ ಪಾರ್ಲಿಮೆಂಟ್‌ನಲ್ಲಿನ ಚಿತ್ರದ ಶೂಟ್ ನಡೆಯಲಿದೆ. ಈ ಚಿತ್ರದ ಶೂಟಿಂಗ್‌ಗಾಗಿ ದೆಹಲಿಗೆ ತೆರಳುವುದರ ಜೊತೆಗೆ ಜಮಾ ಮಸೀದಿಯಲ್ಲಿಯೂ ಶೂಟಿಂಗ್ ನಡೆಯಲಿದೆ. ಪವನ್ ಕಲ್ಯಾಣ್ ಅವರ ಮಧ್ಯಸ್ಥಿಕೆಯಿಂದ ಪಾರ್ಲಿಮೆಂಟ್‌ನಲ್ಲಿ ಶೂಟಿಂಗ್‌ಗೆ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿದೆ.

Shiva Rajkumar: ದೆಹಲಿ ಸಂಸತ್ತು ಹತ್ತಲಿದ್ದಾರೆ ಶಿವರಾಜ್​ಕುಮಾರ್; ಸಿಕ್ಕಿತು ಹೊಸ ಸುದ್ದಿ
ಶಿವಣ್ಣ
ರಾಜೇಶ್ ದುಗ್ಗುಮನೆ
|

Updated on:Mar 03, 2025 | 10:06 AM

Share

ಶಿವರಾಜ್​ಕುಮಾರ್ ಅವರು ಈಗಷ್ಟೇ ಕ್ಯಾನ್ಸರ್ ಮುಕ್ತರಾಗಿ ಮರಳಿದ್ದಾರೆ. ಒಂದು ತಿಂಗಳ ಕಾಲ ಅಮೆರಿಕದಲ್ಲಿ ಇದ್ದ ಅವರು ಈಗ ಚೇತರಿಕೆ ಕಂಡಿದ್ದಾರೆ. ಶೀಘ್ರವೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಮಧ್ಯೆ ಅವರು ದೆಹಲಿ ಪಾರ್ಲಿಮೆಂಟ್ ಏರುವ ಸುದ್ದಿಯೊಂದು ಹೊರ ಬಿದ್ದಿದೆ. ಹಾಗಂತ ಅವರು ಅವರು ಚುನಾವಣೆಗೆ ಸ್ಪರ್ಧಿಸಿ ಸಂಸದರಾಗುತ್ತಿಲ್ಲ. ಅವರು ದೆಹಲಿ ಪಾರ್ಲಿಮೆಂಟ್ ಏರುತ್ತಿರುವುದು ಸಿನಿಮಾ ಶೂಟ್​ಗಾಗಿ.

ರಾಮ್ ಚರಣ್ ಹಾಗೂ ಶಿವರಾಜ್​ಕುಮಾರ್ ‘ಆರ್​ಸಿ 16’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಬುಚಿ ಬಾಬು ನಿರ್ದೇಶನ ಇದೆ. ಈ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದ ಕೆಲ ಭಾಗದ ಶೂಟ್ ಕೂಡ ಆಗಿದೆ. ಈ ವಾರ ಶಿವರಾಜ್​ಕುಮಾರ್ ಅವರು ಶೂಟ್​ನಲ್ಲಿ ಭಾಗಿ ಆಗಲಿದ್ದಾರೆ.

ದೆಹಲಿ ಪಾರ್ಲಿಮೆಂಟ್​ನಲ್ಲಿ ಕೆಲವು ದೃಶ್ಯಗಳನ್ನು ಶೂಟ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಈ ದೃಶ್ಯದಲ್ಲಿ ಶಿವರಾಜ್​ಕುಮಾರ್ ಕೂಡ ಇರುತ್ತಾರೆ ಎಂದು ಹೇಳಲಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ ಸಂಸತ್ತಿನಲ್ಲಿ ಶೂಟಿಂಗ್​ಗೆ ಅವಕಾಶ ಸಿಗೋದು ದೊಡ್ಡ ಚಾಲೆಂಜ್. ಇದಕ್ಕೂ ತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ
Image
ರಾಮ್ ಚರಣ್ ಮನೆಯಲ್ಲಿ ಇದೆ ಬರೋಬ್ಬರಿ 15 ಕುದುರೆ; ಕಾರಣ ಏನು?
Image
ಶಿವರಾಜ್​ಕುಮಾರ್​ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ DCM ಡಿಕೆ ಶಿವಕುಮಾರ್
Image
ಶಿವಣ್ಣನ ಆರೋಗ್ಯದ ಬಗ್ಗೆ ಬಾಲಿವುಡ್ ನಟ ಅಮಿತಾಭ್​ ಬಚ್ಚನ್​ಗೆ ಕಾಳಜಿ
Image
ಬೆಂಗಳೂರು ಬಿಟ್ಟು ಈ ಊರಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ ಶಿವಣ್ಣ

ರಾಮ್ ಚರಣ್ ಕುಟುಂಬದ ಪವನ್ ಕಲ್ಯಾಣ್ ಅವರು ಎನ್​ಡಿಎ ಜೊತೆ ಕೈ ಜೋಡಿಸಿದ್ದಾರೆ. ಹೀಗಾಗಿ, ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಈ ಬಗ್ಗೆ ಮನವಿ ಮಾಡಿದರೆ ಕೆಲಸ ಮತ್ತಷ್ಟು ಸುಲಭವಾಗಲಿದೆ. ಆಗ ತಂಡ ಅಂದುಕೊಂಡಂತೆ ಪಾರ್ಲಿಮೆಂಟ್​ನಲ್ಲಿ ಶೂಟ್ ಮಾಡಬಹುದು. ಇಲ್ಲವಾದಲ್ಲಿ ಇದೇ ಮಾದರಿಯ ಸೆಟ್ ನಿರ್ಮಾಣ ಮಾಡಬೇಕಾಗುತ್ತದೆ. ಇದಕ್ಕೆ ದೊಡ್ಡ ಮೊತ್ತದ ಖರ್ಚಾಗುತ್ತದೆ.

‘ಆರ್​ಸಿ 16’ ಕಥೆ ದೆಹಲಿಯ ಜಮಾ ಮಸೀದಿಯಲ್ಲೂ ಸಾಗಲಿದೆ. ರಂಜಾನ್ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ಶೂಟ್ ಮಾಡಲು ಅವಕಾಶ ಸಿಗೋ ಸಾಧ್ಯತೆ ಇದೆ. ಈ ಕಾರಣಕ್ಕೆ ಹಲವು ದಿನ ತಂಡ ದೆಹಲಿಯಲ್ಲಿ ಸೆಟಲ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಮ್ ಚರಣ್ ಮನೆಯಲ್ಲಿ ಇದೆ ಬರೋಬ್ಬರಿ 15 ಕುದುರೆ; ಕಾರಣ ಏನು?

‘ಆರ್​ಸಿ 16’ ಶೂಟಿಂಗ್ ಹೈದರಾಬಾದ್​ನಲ್ಲಿ ಸಾಗುತ್ತಿದೆ. ರಾಮ್ ಚರಣ್ ಅವರು ಇತ್ತೀಚೆಗೆ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ಕಾಣಿಸಿಕೊಂಡರು. ಆದರೆ, ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲು ವಿಫಲವಾಗಿದೆ.  ಹೀಗಾಗಿ, ‘ಆರ್​ಸಿ 16’ ಚಿತ್ರದಿಂದ ಅವರಿಗೆ ಗೆಲುವು ಕಾಣಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Mon, 3 March 25

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ