- Kannada News Photo gallery Dk Shivakumar Met Shivarajkumar And take update about his health Cinema News in Kannada
ಶಿವರಾಜ್ಕುಮಾರ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ DCM ಡಿಕೆ ಶಿವಕುಮಾರ್
ಶಿವರಾಜ್ಕುಮಾರ್ ಅವರು ಕ್ಯಾನ್ಸರ್ ಮುಕ್ತರಾಗಿ ಬೆಂಗಳೂರಿಗೆ ಮರಳಿದ್ದಾರೆ. ಎಲ್ಲರೂ ಅವರ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದಾರೆ. ಈಗ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಶಿವರಾಜ್ಕುಮಾರ್ ಅವರ ಕ್ಷೇಮ ವಿಚಾರಿಸಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಶಿವಣ್ಣ ಅವರ ಲುಕ್ ಗಮನ ಸೆಳೆದಿದೆ.
Updated on: Feb 08, 2025 | 4:57 PM

ಇಂದು (ಫೆಬ್ರವರಿ 8) ಡಿಸಿಎಂ ಡಿಕೆ ಶಿವಕುಮಾರ್ ಅವರು ಶಿವರಾಜ್ಕುಮಾರ್ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ. ಬೆಂಗಳೂರಿನ ಮಾನ್ಯಾತದಲ್ಲಿ ಇರುವ ಶಿವಣ್ಣನ ಮನೆಗೆ ಡಿಕೆಶಿ ಭೇಟಿ ಕೊಟ್ಟು ಕ್ಷೇಮ ವಿಚಾರಿಸಿದ್ದಾರೆ.

ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಪತ್ನಿ ಪರವಾಗಿ ಶಿವರಾಜ್ಕುಮಾರ್ ಅವರು ಪ್ರಚಾರ ಮಾಡಿದ್ದರು.

ಶಿವರಾಜ್ಕುಮಾರ್ ಹಾಗೂ ಡಿಕೆ ಶಿವರಾಜ್ಕುಮಾರ್ ಮಧ್ಯೆ ಉತ್ತಮ ಪರಿಚಯ ಇದೆ. ಹೀಗಾಗಿ, ಶಿವರಾಜ್ಕುಮಾರ್ ಅವರು ಬೆಂಗಳೂರಿಗೆ ಮರಳುತ್ತಿದ್ದಂತೆ ಅವರ ಮನೆಗೆ ಡಿಕೆಶಿ ಭೇಟಿ ನೀಡಿದ್ದಾರೆ. ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕೋರಿದ್ದಾರೆ.

ಅಮಿತಾಭ್ ಬಚ್ಚನ್ ಅವರು ಇತ್ತೀಚೆಗೆ ಶಿವರಾಜ್ಕುಮಾರ್ ಅವರಿಗೆ ಮೆಸೇಜ್ ಮೂಲಕ ಆರೋಗ್ಯ ವಿಚಾರಿಸಿದ್ದಾರೆ ಎಂದು ವರದಿ ಆಗಿದೆ. ಶಿವಣ್ಣ ಹಾಗೂ ಅಮಿತಾಭ್ ಮಧ್ಯೆ ಒಳ್ಳೆಯ ಬಾಂಧ್ಯವ ಇದೆ. ಹೀಗಾಗಿ, ಗೆಳೆಯನ ಆರೋಗ್ಯ ವಿಚಾರಿಸಿದ್ದಾರೆ.

ಇತ್ತೀಚೆಗೆ ಶಿರಸಿಗೆ ತೆರಳಿದ್ದ ಶಿವರಾಜ್ಕುಮಾರ್ ಅವರು ಅಲ್ಲಿ ವಿಶ್ರಾಂತಿ ಪಡೆದಿದ್ದರು. ಈ ವೇಳೆ ಯಾಣಗೂ ತೆರಳಿದ್ದರು ಶಿವಣ್ಣ. ಈಗ ಅವರು ಕನಕಪುರದ ಫಾರ್ಮ್ಹೌಸ್ಗೆ ಭೇಟಿ ನೀಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
























