- Kannada News Photo gallery Cricket photos Shreyas Iyer has the Most 50 Plus scores after 58 ODI innings
58 ರಲ್ಲಿ 24: ಸಾಟಿಯಿಲ್ಲದ ಶ್ರೇಯಸ್: ಕೊಹ್ಲಿ, ರಾಹುಲ್ರನ್ನು ಹಿಂದಿಕ್ಕಿದ ಅಯ್ಯರ್
Shreyas Iyer: ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಪರ 63 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 58 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಇನಿಂಗ್ಸ್ಗಳಲ್ಲಿ 5 ಶತಕ ಹಾಗೂ 19 ಅರ್ಧಶತಕಗಳು ಮೂಡಿಬಂದಿವೆ. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಅಯ್ಯರ್ ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
Updated on: Feb 08, 2025 | 10:23 AM

ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಶ್ರೇಯಸ್ ಅಯ್ಯರ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಸಹ 58 ಏಕದಿನ ಪಂದ್ಯಗಳ ಮೂಲಕ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 59 ರನ್ ಬಾರಿಸಿದ್ದರು.

ಇದು ಏಕದಿನ ಕ್ರಿಕೆಟ್ನಲ್ಲಿ ಶ್ರೇಯಸ್ ಅಯ್ಯರ್ ಅವರ 19ನೇ ಅರ್ಧಶತಕ. ಈವರೆಗೆ 58 ಏಕದಿನ ಇನಿಂಗ್ಸ್ ಆಡಿರುವ ಅಯ್ಯರ್ 5 ಭರ್ಜರಿ ಶತಕ ಹಾಗೂ 19 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಮೊದಲ 58 ಪಂದ್ಯಗಳಲ್ಲಿ ಭಾರತದ ಪರ ಅತೀ ಹೆಚ್ಚು 50+ ಸ್ಕೋರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಮೊದಲ 58 ಇನಿಂಗ್ಸ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್ಗಳಲ್ಲಿ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ನವಜೋತ್ ಸಿಂಗ್ ಸಿಧು ಮೊದಲ ಸ್ಥಾನದಲ್ಲಿದ್ದರು. ಈ ಮೂವರು ಮೊದಲ 58 ಇನಿಂಗ್ಸ್ಗಳಲ್ಲಿ 21 ಬಾರಿ 50+ ಸ್ಕೋರ್ಗಳಿಸಿದ್ದರು.

ಆದರೀಗ ಇವರೆಲ್ಲರನ್ನೂ ಹಿಂದಿಕ್ಕಿ ಶ್ರೇಯಸ್ ಅಯ್ಯರ್ ಒನ್ಡೇ ಕ್ರಿಕೆಟ್ನಲ್ಲಿ ತಮ್ಮ ನಾಗಾಲೋಟ ಮುಂದುವರೆಸಿದ್ದಾರೆ. ಈವರೆಗೆ ಆಡಿದ 58 ಇನಿಂಗ್ಸ್ಗಳಲ್ಲಿ ಅಯ್ಯರ್ ಒಟ್ಟು 24 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಮೊದಲ 58 ಇನಿಂಗ್ಸ್ಗಳಲ್ಲಿ ಅತ್ಯಧಿಕ 50+ ಸ್ಕೋರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸದ್ಯ 58 ಏಕದಿನ ಇನಿಂಗ್ಸ್ ಆಡಿರುವ ಶ್ರೇಯಸ್ ಅಯ್ಯರ್ 2428 ಎಸೆತಗಳನ್ನು ಎದುರಿಸಿ 2480 ರನ್ ಕಲೆಹಾಕಿದ್ದಾರೆ. ಈ ಮೂಲಕ ಭಾರತ ತಂಡದ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿ ನಿಂತಿದ್ದಾರೆ. ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಅಯ್ಯರ್ ಮುಂಬರುವ ಚಾಂಪಿಯನ್ಸ್ ಟ್ರೋಫಿ ಮೂಲಕ ಏಕದಿನ ಕ್ರಿಕೆಟ್ನಲ್ಲಿ 3 ಸಾವಿರ ರನ್ಗಳ ಗಡಿದಾಟುವ ವಿಶ್ವಾಸದಲ್ಲಿದ್ದಾರೆ.



















