Ram Charan
ರಾಮ್ ಚರಣ್ ಅವರು ಜನಿಸಿದ್ದು 1985ರ ಮಾರ್ಚ್ 27ರಂದು. ತೆಲುಗು ಚಿತ್ರರಂಗದಲ್ಲಿ ಅವರು ಪ್ರಮುಖನಾಗಿ ಗುರುತಿಸಿಕೊಂಡಿದ್ದಾರೆ. ಕೊನಿಡೆಲಾ ರಾಮ್ ಚರಣ್ ತೇಜ್ ಎಂದೂ ಕರೆಯಲ್ಪಡುವ ಅವರು ಪ್ರಸಿದ್ಧ ಚಲನಚಿತ್ರ ಕುಟುಂಬದಿಂದ ಬಂದವರು. 2007ರಲ್ಲಿ ‘ಚಿರುತಾ’ ಚಿತ್ರದ ಮೂಲಕ ಅಭಿನಯಕ್ಕೆ ಪಾದಾರ್ಪಣೆ ಮಾಡಿದ ಅವರು ತಮ್ಮ ಅಮೋಘ ಅಭಿನಯ ಮತ್ತು ಅಸಾಧಾರಣ ನೃತ್ಯ ಕೌಶಲ್ಯಕ್ಕಾಗಿ ಶೀಘ್ರವಾಗಿ ಖ್ಯಾತಿಯನ್ನು ಗಳಿಸಿದರು. ‘ಮಗಧೀರ’, ‘ಆರ್ಆರ್ಆರ್’ ಮುಂತಾದ ಗಮನಾರ್ಹ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಅವರು ಮಾಡಿದ ಪಾತ್ರಗಳು ಅವರಿಗೆ ವ್ಯಾಪಕವಾದ ಮೆಚ್ಚುಗೆಯನ್ನು ತಂದುಕೊಟ್ಟಿವೆ. ಫಿಲ್ಮ್ ಫೇರ್, ನಂದಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟನಾಗಿರುವ ರಾಮ್ ಚರಣ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲೂ ಫೇಮಸ್ ಆಗಿದ್ದಾರೆ.