ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ನಾನು ನಟ ಎಂದ ರಾಮ್ ಚರಣ್
ಆಸ್ಕರ್ ಮಟ್ಟವನ್ನು ತಲುಪಿದರೂ, ರಾಮ್ ಚರಣ್ ತಮ್ಮನ್ನು ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮಾತ್ರ ನಟ ಎಂದು ಪರಿಗಣಿಸುತ್ತಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರನಾಗಿರುವುದು ಅನುಕೂಲವೇ ಹೊರತು ಒತ್ತಡವಲ್ಲ ಎನ್ನುತ್ತಾರೆ. ಕುಟುಂಬದ ಅನುಭವಗಳಿಂದ ವೇಗವಾಗಿ ಕಲಿಯಲು ಸಾಧ್ಯವಾಯಿತು. ಯಶಸ್ಸನ್ನು ಸರಳವಾಗಿ ಸ್ವೀಕರಿಸುವ ಈ ಜೀವನಶೈಲಿಯು ಅವರನ್ನು ಶಾಂತವಾಗಿರಿಸುತ್ತದೆಯಂತೆ.

ಪ್ರಪಂಚದಾದ್ಯಂತ ಮನ್ನಣೆ ಗಳಿಸಿರುವ ರಾಮ್ ಚರಣ್ (Ram Charan) ಈಗ ಓಪನ್ ಆಗಿ ಮಾತನಾಡಿದ್ದಾರೆ. ಅನೇಕ ನಾಯಕರು ತಮ್ಮ ಕುಟುಂಬದ ಪರಂಪರೆ ಒತ್ತಡ ಎಂದರೂ, ರಾಮ್ ಚರಣ್ ಮಾತ್ರ ಅನುಕೂಲ ಎನ್ನುತ್ತಿದ್ದಾರೆ. ಆಸ್ಕರ್ ಮಟ್ಟವನ್ನು ತಲುಪಿದ ನಂತರವೂ ಅವರು ತಮ್ಮನ್ನು ತಾವು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಚರಣ್ ತಮ್ಮ ವೃತ್ತಿಜೀವನ ಮತ್ತು ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದ ರಾಮ್ ಚರಣ್, ಮೆಗಾಸ್ಟಾರ್ ಚಿರಂಜೀವಿ ಅವರ ಮಗನಾಗಿ ಹುಟ್ಟಿದ್ದರಿಂದ ಆದ ಪ್ರಯೋಜನಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ‘ಸಿನಿಮಾ ಕುಟುಂಬದಿಂದ ಬಂದಿರುವುದು ಒಂದು ಅದ್ಭುತ ಅವಕಾಶ. ಮನೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಜನರಿದ್ದಾಗ, ನೀವು ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತೀರಿ. ಅಂತಹ ವಾತಾವರಣದಲ್ಲಿ ಬೆಳೆದವರು ನಟನಾ ಶಾಲೆಗೆ ಹೋಗಿ ಹೊಸ ವಿಷಯಗಳನ್ನು ಕಲಿಯುವವರಿಗಿಂತ ಹೆಚ್ಚು ವೇಗವಾಗಿ ಕಲಿಯುತ್ತಾರೆ’ ಎಂದು ಚರಣ್ ಹೇಳಿದರು. ಪರಂಪರೆಯು ತನ್ನ ಮೇಲೆ ಹೊರೆಯಾಗಿದೆ ಎಂದು ತಾನು ಎಂದಿಗೂ ಭಾವಿಸಲಿಲ್ಲ, ಆದರೆ ಅದನ್ನು ಒಂದು ಅವಕಾಶವಾಗಿ ನೋಡಿದೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಆರಂಭದಲ್ಲಿ ನನಗೆ ಕಷ್ಟವಾಗಲಿಲ್ಲ. ಆದರೆ ಪ್ರೇಕ್ಷಕರು ನನ್ನನ್ನು ನಟನಾಗಿ ಸ್ವೀಕರಿಸುವುದು ಕಷ್ಟಕರವಾಗಬಹುದು. ಏಕೆಂದರೆ ಅವರ ನಿರೀಕ್ಷೆಗಳು ತುಂಬಾ ಹೆಚ್ಚಿರುತ್ತವೆ. ಆದರೆ ಕಾಲಾನಂತರದಲ್ಲಿ, ನಾವು ಮಾಡುವ ಕೆಲಸದ ಮೂಲಕ ಅವರ ಅಭಿಪ್ರಾಯಗಳು ಬದಲಾಗುತ್ತವೆ ಎಂದು ನಾನು ನಂಬುತ್ತೇನೆ’ ಎಂದು ಅವರು ಪ್ರಾಮಾಣಿಕವಾಗಿ ಹೇಳಿದರು.
‘ನಾನು ನನ್ನನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ. ನಾನು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ನನ್ನ ಕೆಲಸದ ಮೇಲೆ ಗಮನ ಹರಿಸುತ್ತೇನೆ. ಅದು ಮುಗಿದ ನಂತರ, ನಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಸಂಪೂರ್ಣವಾಗಿ ಮರೆತುಬಿಡುತ್ತೇನೆ. ಯಶಸ್ಸಿನ ಬಗ್ಗೆ ನಾನು ಹೆಚ್ಚು ಯೋಚಿಸುವುದಿಲ್ಲ’ ಎಂದು ಎಂದು ಚರಣ್ ತಮ್ಮ ಸರಳ ಜೀವನಶೈಲಿಯ ಬಗ್ಗೆ ವಿವರಿಸುತ್ತಾರೆ. ಈ ಅಭ್ಯಾಸವು ಅವರನ್ನು ಯಾವಾಗಲೂ ಶಾಂತವಾಗಿರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜಪಾನ್ನಿಂದ ಬಂದು ರಾಮ್ ಚರಣ್ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು?
ರಾಮ್ ಚರಣ್ ಪ್ರಸ್ತುತ ತಮ್ಮ ಮುಂದಿನ ಚಿತ್ರ ‘ಪೆದ್ದಿ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವು ಮಾರ್ಚ್ 27, 2026 ರಂದು ಬಿಡುಗಡೆಯಾಗಲಿದೆ. ಅವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



