AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲೂ ಕಾಶ್ಮೀರದಂತೆ ಕಂಡ ಕೊಪ್ಪಳ: ಥೇಟ್​​ ಮಲೆನಾಡಿನ ವೆದರ್​ ಎಂದ ಸಾರ್ವಕನಿಕರು

ಬೇಸಿಗೆಯಲ್ಲೂ ಕಾಶ್ಮೀರದಂತೆ ಕಂಡ ಕೊಪ್ಪಳ: ಥೇಟ್​​ ಮಲೆನಾಡಿನ ವೆದರ್​ ಎಂದ ಸಾರ್ವಕನಿಕರು

ಶಿವಕುಮಾರ್ ಪತ್ತಾರ್
| Edited By: |

Updated on:Mar 08, 2026 | 10:54 AM

Share

ಕೊಪ್ಪಳದಲ್ಲಿ ಬೇಸಿಗೆ ಕಾಲದಲ್ಲಿಯೂ ದಟ್ಟ ಮಂಜು ಆವರಿಸಿದ್ದು, ವಾತಾವರಣ ಕಾಶ್ಮೀರದಂತೆ ಭಾಸವಾಗಿದೆ. ಬೆಳಗ್ಗೆ ಗವಿಮಠದಂತಹ ಪ್ರದೇಶಗಳಲ್ಲಿ ಸೂರ್ಯನ ದರ್ಶನವಾಗದೆ ಚಳಿ ವಾತಾವರಣ ಕಂಡುಬಂತು. ವಾಹನ ಸವಾರರಿಗೆ ರಸ್ತೆ ಕಾಣದೆ ಸಂಚಾರಕ್ಕೆ ಅಡಚಣೆಯಾಗಿದ್ದು, ಜನರು ಮಲೆನಾಡ ರೀತಿಯ ವಾತಾವಾರಣ ಕಂಡುಬಂದಿರೋದಾಗಿ ಅನುಭವ ಹಂಚಿಕೊಂಡಿದ್ದಾರೆ.

ಕೊಪ್ಪಳ, ಮಾರ್ಚ್​​ 08: ಜಿಲ್ಲೆಯ ಹಲವೆಡೆ ಬೇಸಿಗೆಯಲ್ಲೂ ಕಾಶ್ಮೀರವನ್ನು ನೆನಪಿಸುವಂತಹ ದಟ್ಟ ಮಂಜು ಕಂಡುಬಂದಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ 36 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕೊಪ್ಪಳದಲ್ಲಿ, ಕಂಡುಬಂದ ಚಳಿಯ ವಾತಾವರಣ ಜನರಿಗೆ ಮುದ ನೀಡಿದೆ. ಬೆಳಗ್ಗೆ ಗವಿಮಠದ ಪ್ರದೇಶಕ್ಕೆ ವಾಕಿಂಗ್ ಬಂದ ಜನರು ಮಂಜು ಮುಸುಕಿದ ವಾತಾವರಣದಲ್ಲಿಯೇ ಹೆಜ್ಜೆ ಹಾಕಿದ್ದು, ದಟ್ಟ ಮಂಜಿನಿಂದಾಗಿ ರಸ್ತೆಗಳು ಕಾಣದೆ ವಾಹನ ಸವಾರರು ಪರದಾಡಿದ ಪ್ರಸಂಗವೂ ವರದಿಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 08, 2026 10:53 AM
Follow Us