ಜಪಾನ್ನಿಂದ ಬಂದು ರಾಮ್ ಚರಣ್ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು?
Ram Charan house: ಬಿರಿಯಾನಿ ಅಸಲಿಗೆ ಏಷ್ಯಾದ ಖಾದ್ಯ. ಸ್ಪಷ್ಟವಾಗಿ ಬಿರಿಯಾನಿಯ ಉಗಮ ಎಲ್ಲಿ ಆಗಿದ್ದು ಎಂಬ ಬಗ್ಗೆ ಇತಿಹಾಸಕಾರರಿಗೆ ಖಾತ್ರಿ ಇಲ್ಲ. ಆದರೆ ಬಿರಿಯಾನಿ ಪ್ರಚಲಿತದಲ್ಲಿರುವುದು ಭಾರತ ಮತ್ತು ಏಷ್ಯಾದ ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹೆಚ್ಚು. ಆದರೆ ರಾಮ್ ಚರಣ್ ಯಾಕೆ ಜಪಾನಿನಿಂದ ಶೆಫ್ ಕರೆಸಿ ಬಿರಿಯಾನಿ ಮಾಡಿಸಿದ್ದಾರೆ? ಮಾಹಿತಿ ಇಲ್ಲಿದೆ...

ರಾಮ್ ಚರಣ್ಗೂ (Ram Charan) ಜಪಾನಿಗೂ ಆತ್ಮೀಯ ಬಂಧವಿದೆ. ಅವರ ಸಿನಿಮಾಗಳಿಗೆ ಜಪಾನ್ನಲ್ಲಿ ಭಾರಿ ಬೇಡಿಕೆ ಇದೆ. ಜಪಾನಿನಲ್ಲಿ ರಾಮ್ ಚರಣ್ಗೆ ದೊಡ್ಡ ಅಭಿಮಾನಿ ವರ್ಗವಿದೆ. ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮೊದಲ ಮಗುವಾದಾಗಲೂ ಸಹ, ‘ಎಲ್ಲ ಮ್ಯಾಜಿಕ್ ಜಪಾನಿನಲ್ಲೇ ನಡೆಯಿತು’ ಎಂದು ತಮಾಷೆ ಸಹ ಮಾಡಿದ್ದರು ರಾಮ್ ಚರಣ್. ಇದೀಗ ರಾಮ್ ಚರಣ್ ಮನೆಗೆ ಬಿರಿಯಾನಿ ಮಾಡಲು ಜಪಾನಿನಿಂದ ಶೆಫ್ ಒಬ್ಬರು ಬಂದಿದ್ದಾರೆ.
ಬಿರಿಯಾನಿ ಅಸಲಿಗೆ ಏಷ್ಯಾದ ಖಾದ್ಯ. ಸ್ಪಷ್ಟವಾಗಿ ಬಿರಿಯಾನಿಯ ಉಗಮ ಎಲ್ಲಿ ಆಗಿದ್ದು ಎಂಬ ಬಗ್ಗೆ ಇತಿಹಾಸಕಾರರಿಗೆ ಖಾತ್ರಿ ಇಲ್ಲ. ಆದರೆ ಬಿರಿಯಾನಿ ಪ್ರಚಲಿತದಲ್ಲಿರುವುದು ಭಾರತ ಮತ್ತು ಏಷ್ಯಾದ ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹೆಚ್ಚು. ಆದರೆ ರಾಮ್ ಚರಣ್ ಯಾಕೆ ಜಪಾನಿನಿಂದ ಶೆಫ್ ಕರೆಸಿ ಬಿರಿಯಾನಿ ಮಾಡಿಸಿದ್ದಾರೆ?
ರಾಮ್ ಚರಣ್ ಮನೆಯಲ್ಲಿ ಜಪಾನಿನ ಶೆಫ್ ಬಿರಿಯಾನಿ ಮಾಡಿ ಮನೆಯವರಿಗೆ ಉಣಬಡಿಸುತ್ತಿರುವ ಫೋಟೊ, ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಮ್ ಚರಣ್ ಮನೆಯಲ್ಲಿ ಬಿರಿಯಾನಿ ಮಾಡಿರುವ ಶೆಫ್ನ ಹೆಸರು ಟಕಮಾಸ ಓಸವಾ. ಇವರು ಜಪಾನಿನ ಸೆಲೆಬ್ರಿಟಿ ಶೆಫ್. ಇವರು ಬಿರಿಯಾನಿ ಮಾಡುವುದರಲ್ಲಿ ಅದರಲ್ಲೂ ಪಾಟ್ ಬಿರಿಯಾನಿ ಮಾಡುವುದರಲ್ಲಿ ನಿಷ್ಣಾತರು. ಟಕಮಾಸಾ ಒಸಾವಾ ಅವರನ್ನು ಬಿರಿಯಾನಿ ಒಸಾವ ಎಂದೇ ಕರೆಯುತ್ತಾರೆ ಅಭಿಮಾನಿಗಳು. ಮಿಷಲಿನ್ ಗೈಡ್ ಪ್ರಶಸ್ತಿಯನ್ನು ಸಹ ಒಸಾವಾ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು?
ಒಸಾವ ಅವರು ಸೆಲೆಬ್ರಿಟಿ ಶೆಫ್. ಅವರು ಒಂದು ಬಾರಿಗೆ ಕೇವಲ 10 ಜನರಿಗೆ ಮಾತ್ರವೇ ಬಿರಿಯಾನಿ ಮಾಡುತ್ತಾರೆ. ಅದಕ್ಕೂ ಪ್ರೀ ಬುಕಿಂಗ್ ಮಾಡಿಕೊಳ್ಳಬೇಕು. ಅವರ ಕೈರುಚಿ ಸವಿಯಲು ಜನ ಸಾಲು ಗಟ್ಟಿರುತ್ತಾರೆ. ತಿಂಗಳುಗಟ್ಟಲೆ ಮುಂಗಡ ಬುಕಿಂಗ್ ಆಗಿರುತ್ತದೆಯಂತೆ. ಜಪಾನಿನಲ್ಲಿ ರಾಮ್ ಚರಣ್ ದೊಡ್ಡ ಸ್ಟಾರ್ ಆಗಿರುವ ಕಾರಣ ಒಸಾವಾ ಅವರು ಹೈದರಾಬಾದ್ನ ರಾಮ್ ಚರಣ್ ನಿವಾಸಕ್ಕೆ ಬಂದು ಬಿರಿಯಾನಿ ಮಾಡಿಕೊಟ್ಟಿದ್ದಾರೆ.
ಬಿರಿಯಾನಿ ಸವಿದ ರಾಮ್ ಚರಣ್, ಒಸಾವಾ ಕೈರುಚಿಯನ್ನು ಕೊಂಡಾಡಿದ್ದಾರೆ. ರಾಮ್ ಚರಣ್ ಮಾತ್ರವಲ್ಲದೆ ಪತ್ನಿ ಉಪಾಸನಾ, ತಾಯಿ ಸುರೇಖಾ ಇನ್ನೂ ಕೆಲವು ಕುಟುಂಬ ಸದಸ್ಯರು ಒಸಾವಾ ಮಾಡಿದ ಬಿರಿಯಾನಿ ಸವಿದು ಖುಷಿ ಪಟ್ಟಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




