ಶಿಷ್ಯ ಆಯ್ತು ಗುರುವಿನ ಜೊತೆ ಸಿನಿಮಾಕ್ಕೆ ಕೈ ಹಾಕಿದ ರಾಮ್ ಚರಣ್
Ram Charan: ‘ಆರ್ಆರ್ಆರ್’ ಸಿನಿಮಾದ ಬಳಿಕ ರಾಮ್ ಚರಣ್ ಅವರ ಸಿನಿಮಾಗಳು ಗೆದ್ದಿಲ್ಲ. ‘ಆರ್ಆರ್ಆರ್’ ಬಳಿಕ ರಾಮ್ ಚರಣ್ ನಟಿಸಿದ ಎರಡೂ ಸಿನಿಮಾಗಳು ಫ್ಲಾಪ್ ಆಗಿವೆ. ಇದೀಗ ಅವರು ಬುಚ್ಚಿಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಅವರು ಸ್ಟಾರ್ ನಿರ್ದೇಶಕನ ಸಿನಿಮಾನಲ್ಲಿ ನಟಿಸಲಿದ್ದಾರೆ. ಯಾರದು?

‘ಆರ್ಆರ್ಆರ್’ (RRR) ಸಿನಿಮಾದ ಬಳಿಕ ರಾಮ್ ಚರಣ್ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಆ ಎರಡೂ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿವೆ. ‘ಆರ್ಆರ್ಆರ್’ ಬಳಿಕ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಹೀನಾಯ ಸೋಲು ಕಂಡಿತು. ಅದಾದ ಬಳಿಕ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಬಿಡುಗಡೆ ಆಗಿ ಆ ಸಿನಿಮಾ ಸಹ ಸೋತಿತು. ಇದೀಗ ‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ‘ಪೆದ್ದಿ’ ಬಳಿಕ ಹೊಸದೊಂದು ಸಿನಿಮಾನಲ್ಲಿ ನಟಿಸಲು ರಾಮ್ ಚರಣ್ ಒಪ್ಪಿಕೊಂಡಿದ್ದಾರೆ.
‘ಪೆದ್ದಿ’ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಳಿಕ ಬುಚ್ಚಿಬಾಬು ಸನಾ ಅವರ ಗುರುಗಳ ಸಿನಿಮಾನಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಅಂದಹಾಗೆ ಬುಚ್ಚಿಬಾಬು ಸನಾ ಅವರ ಗುರುಗಳು ಮತ್ಯಾರು ಅಲ್ಲ, ‘ಪುಷ್ಪ’ ಸಿನಿಮಾದ ನಿರ್ದೇಶಕ ಸುಕುಮಾರ್. ರಾಮ್ ಚರಣ್ ಅವರು ಸುಕುಮಾರ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ.
ಸುಕುಮಾರ್ ಅವರೊಟ್ಟಿಗೆ ಈಗಾಗಲೇ ಒಂದು ಬ್ಲಾಕ್ ಬಸ್ಟರ್ ಸಿನಿಮಾವನ್ನು ರಾಮ್ ಚರಣ್ ನೀಡಿದ್ದಾರೆ. ಅದುವೇ ‘ರಂಗಸ್ಥಲಂ’. ಈ ಸಿನಿಮಾ ರಾಮ್ ಚರಣ್ ವೃತ್ತಿ ಜೀವನದ ಅಪರೂಪದ ಸಿನಿಮಾ ಆಗಿದೆ. ಸಿನಿಮಾನಲ್ಲಿ ಕಿವುಡನ ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದರು, ಕಿವುಡ, ಹಳ್ಳಿಯ ದಡ್ಡ ವ್ಯಕ್ತಿಯ ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಮತ್ತೊಮ್ಮೆ ಸುಕುಮಾರ್ ಮತ್ತು ರಾಮ್ ಚರಣ್ ಒಂದಾಗುತ್ತಿದ್ದು, ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ:ರಾಮ್ ಚರಣ್ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು?
ಅಸಲಿಗೆ ಸುಕುಮಾರ್ ಅವರು ‘ಪುಷ್ಪ 2’ ಬಳಿಕ ವಿಜಯ್ ದೇವರಕೊಂಡಗೆ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಲ್ಲು ಅರ್ಜುನ್, ಆ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿತ್ತು. ಆದರೆ ಅದೆಲ್ಲ ಸುಳ್ಳಾಗಿದೆ. ಸುಕುಮಾರ್ ಅವರು ರಾಮ್ ಚರಣ್ಗಾಗಿ ಸಿನಿಮಾ ಮಾಡುತ್ತಿದ್ದು, ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಲಿದ್ದಾರೆ.
ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾನಲ್ಲಿ ಅವರು ಹಳ್ಳಿಯ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ವೃದ್ಧಿ ಸಿನಿಮಾಸ್ ಬಂಡವಾಳ ಹೂಡಿದ್ದು, ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




